ನವದೆಹಲಿ:ಹೊಸ ಗೌಪ್ಯತಾ ನೀತಿಯನ್ನು ಹೊರತಂದ ಬಳಿಕ ವಾಟ್ಸ್​ಆ್ಯಪ್​ ವಿರುದ್ಧ ಭಾರತದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಅಷ್ಟೇ ಅಲ್ಲದೆ, ಅನೇಕರು ವಾಟ್ಸ್​ಆ್ಯಪ್​ಗೆ ಕೈಮುಗಿದು ಸಿಗ್ನಲ್​, ಟೆಲಿಗ್ರಾಮ್​ ಕಡೆಗೆ ಮುಖಮಾಡಿದ್ದಾರೆ.
ತಮ್ಮ ಗೌಪ್ಯ ಮಾಹಿತಿ ಅಪಾಯದಲ್ಲಿದೆ ಎಂಬ ಆತಂಕದಿಂದ ಬಳಕೆದಾರರು ಬೇರೆ ಕಡೆ ಗಮನಹರಿಸಿದ್ದು, ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಇತ್ತೀಚಿಗೆ ವಾಟ್ಸ್​ಆ್ಯಪ್​ ಸ್ವತಃ ಸ್ಟೇಟಸ್​ ಹಾಕಿ ನಿಮ್ಮ ಗೌಪ್ಯತೆಗೆ ನಾವು ಬದ್ಧ ಎಂದು ಹೇಳಿತ್ತು. ಆದರೂ ಅನೇಕರು ಈಗಾಗಲೇ ಬೇರೆ ಆಯ್ಕೆ ಮಾಡಿದ್ದಾರೆ. ಹೀಗಾಗಿ ಭಾರತದಲ್ಲಿ ಎಷ್ಟು ಮಂದಿ ವಾಟ್ಸ್​ಆ್ಯಪ್​ ಡಿಲೀಟ್​ ಮಾಡಿದ್ದಾರೆ ಎಂಬುದರ ಸಮೀಕ್ಷೆಯು ಸಹ ನಡೆದಿದೆ.
ಆನ್​ಲೈನ್​ ಮೂಲಕ ನಡೆದ ಈ ಸರ್ವೆಯಲ್ಲಿ ದೇಶಾದ್ಯಂತ ಸುಮಾರು 17 ಸಾವಿರ ಮಂದಿ ಪಾಲ್ಗೊಂಡಿದ್ದರು. ಈವರೆಗೂ ಕೇವಲ ಶೇ. 5 ರಷ್ಟು ಭಾರತೀಯರು ಆ್ಯಪ್​ ಡಿಲೀಟ್​ ಮಾಡಿರುವುದು ಬೆಳಕಿಗೆ ಬಂದಿದೆ. ಭಾರತದಲ್ಲಿ ಒಟ್ಟು 40 ಕೋಟಿ ವಾಟ್ಸ್​ಆ್ಯಪ್​ ಬಳಕೆದಾರರಿದ್ದಾರೆ. ಸುಮಾರು 2 ಕೋಟಿ ಮಂದಿ ವಾಟ್ಸ್​ಆ್ಯಪ್ ಖಾತೆಯನ್ನು​ ಡಿಲೀಟ್​ ಮಾಡಿರಬಹುದು ಎಂದು ಅಂದಾಜಿಸಲಾಗಿದೆ.
ಇಷ್ಟೇ ಅಲ್ಲದೆ, ಶೇ. 21 ಮಂದಿ ವಾಟ್ಸ್​ಆ್ಯಪ್​ ಬಳಕೆಯನ್ನು ತಗ್ಗಿಸಿ, ಸಿಗ್ನಲ್​ ಮತ್ತು ಟೆಲಿಗ್ರಾಮ್​ನಂತಹ ಆ್ಯಪ್​ಗಳನ್ನು ಬಳಸುತ್ತಿದ್ದಾರೆ. ಶೇ. 22 ರಷ್ಟು ಮಂದಿ ವಾಟ್ಸ್​ಆ್ಯಪ್​ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಾರೆ. ಆದರೆ, ತಮ್ಮ ಖಾತೆಯನ್ನು ಡಿಲೀಟ್​ ಮಾಡಿಲ್ಲ.
ಹೊಸ ಗೌಪ್ಯತಾ ನೀತಿಯಿಂದ ವಾಟ್ಸ್​ಆ್ಯಪ್​ಗೆ ತೀವ್ರ ಹೊಡೆತ ಬಿದ್ದಂತಾಗಿದೆ. ವಾಟ್ಸ್​ಆ್ಯಪ್​ ಡೇಟಾವನ್ನು ಫೇಸ್​ಬುಕ್​ ಅಥವಾ ಮೂರನೇ ಪಾರ್ಟಿಗಾಗಲಿ ಶೇರ್​ ಮಾಡಿದರೆ, ವಾಟ್ಸ್​ಆ್ಯಪ್​ ಅನ್ನು ಬಳಸುವುದೇ ಇಲ್ಲ ಎಂದು ಅನೇಕರು ತಮ್ಮ ಅಭಿಪ್ರಾಯಗಳನ್ನು ಸಮೀಕ್ಷೆ ವೇಳೆ ಮಂಡಿಸಿದ್ದಾರೆ. ಶೇ. 92 ರಷ್ಟು ಮಂದಿ ಇದನ್ನೇ ಹೇಳಿದ್ದಾರೆ. 79 ರಷ್ಟು ವಾಟ್ಸ್​ಆ್ಯಪ್​ ಬಿಸಿನೆಸ್​ ನಿಲ್ಲಿಸುವುದಾಗಿ ಎಚ್ಚರಿಸಿದ್ದಾರೆ. ವಾಟ್ಸ್​ಆ್ಯಪ್​ ಅನ್ನು ಪರ್ಯಾಯ ಆ್ಯಪ್​ ಆಗಿ ಡೌನ್​ಲೋಡ್​ ಮಾಡಿಕೊಂಡಿರುವುದಾಗಿ ಶೇ. 55ರಷ್ಟು ಮಂದಿ ತಿಳಿಸಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 3 =
Remember me
