ನವದೆಹಲಿ:ರೈಲಲ್ಲಿ ಪ್ರಯಾಣಿಸುವವರು ಒಂದು ವೇಳೆ ಅವರ ಟಿಕೆಟ್ ಕ್ಯಾನ್ಸೆಲ್ ಮಾಡಿದರೆ ಅದರ ಹಣ ವಾಪಸಾಗುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಈ ರೀತಿ ಹಣ ವಾಪಸು ಕೊಡಲೂ ಸಾಕಷ್ಟು ನಿಯಮವಿದೆ. ಯಾವ ಸಮಯದಲ್ಲಿ ಟಿಕೆಟ್ ಬುಕ್ ಆಗಿದೆ? ಯಾವ ಸಮಯದಲ್ಲಿ ಕ್ಯಾನ್ಸಲ್ ಆಗಿದೆ ಎನ್ನುವ ಹಲವು ವಿಚಾರಗಳನ್ನು ಗಮನಿಸಿಯೇ ಎಷ್ಟು ಹಣ ವಾಪಸು ಕೊಡಬೇಕು ಎನ್ನುವುದನ್ನು ನಿರ್ಧರಿಸಲಾಗುತ್ತದೆ.
ಟಿಕೆಟ್​ ಆರ್​ಎಸಿ ಅಥವಾ ವೇಟಿಂಗ್ ಲಿಸ್ಟ್​ನಲ್ಲಿದ್ದರೆ:ಸಾಮಾನ್ಯವಾಗಿ ನೀವು ಟಿಕೆಟ್ ಕಾಯ್ದಿರಿಸಲು ಹೋದಾಗ ನಿಮ್ಮ ಟಿಕೆಟ್ ವೇಟಿಂಗ್​ ಲಿಸ್ಟ್ ಅಥವಾ ಆರ್​ಎಸಿಗೆ ಸೇರಿಕೊಳ್ಳಬಹುದು. ರೈಲು ಹೊರಡುವ ಕೆಲ ಸಮಯದ ಮೊದಲು ಚಾರ್ಟ್​ ನೀಡಲಾಗುವುದು. ಅದರಲ್ಲೂ ನಿಮ್ಮ ಟಿಕೆಟ್ ಕನ್ಫರ್ಮ್ ಆಗಿಲ್ಲವೆಂದಾದಲ್ಲಿ ನೀವು ರೈಲು ಹೊರಡುವುದಕ್ಕೆ ಅರ್ಧ ಗಂಟೆ ಮೊದಲು ಟಿಕೆಟ್ ಕ್ಯಾನ್ಸಲ್ ಮಾಡಿದರೆ ಸ್ಲೀಪರ್ ಕೋಚ್ ಟಿಕೆಟ್​ಗೆ 30 ರೂಪಾಯಿ ಹಾಗೂ ಎಸಿ ಕೋಚ್​ಗೆ 60 ರೂಪಾಯಿ ಶುಲ್ಕ ತೆಗೆದುಕೊಳ್ಳಲಾಗುವುದು.
ಕನ್ಫರ್ಮ್ ಟಿಕೆಟ್ ಆಗಿದ್ದರೆ:ನೀವು ಬುಕ್ ಮಾಡಿದ ಟಿಕೆಟ್ ಕನ್ಫರ್ಮ್ ಆಗಿದ್ದು, ನಿಮ್ಮ ಸೀಟಿನ ನಂಬರ್ ನಿಮಗೆ ಬಂದಿದ್ದರೆ ಅದಕ್ಕೆ ಸಮಯದ ಆಧಾರದ ಮೇಲೆ ಶುಲ್ಕ ಹಾಕಲಾಗುವುದು. ಫಸ್ಟ್ ಕ್ಲಾಸ್ ಎಸಿಗೆ 240 ರೂಪಾಯಿ, 2 ಎಸಿ/ ಫಸ್ಟ್ ಕ್ಲಾಸ್​ಗೆ 200 ರೂಪಾಯಿ, 3 ಎಸಿ/ಎಸಿಸಿ/ 3 ಎ ಎಕಾನಮಿಗೆ 180 ರೂಪಾಯಿ, ಸೆಕಂಡ್ ಸ್ಲೀಪರ್ ಕ್ಲಾಸ್​ಗೆ 120 ರೂಪಾಯಿ ಹಾಗೂ ಸೆಕೆಂಡ್ ಕ್ಲಾಸ್​ಗೆ 60 ರೂಪಾಯಿಯನ್ನು ಮಿನಿಮಮ್ ಚಾರ್ಜಸ್ ಎಂದು ಕಟ್ ಮಾಡಲಾಗುವುದು. ಹಾಗೆಯೇ ಒಂದು ವೇಳೆ ನೀವು ಟಿಕೆಟ್​ ಅನ್ನು ರೈಲು ಹೊರಡುವುದಕ್ಕೆ 12 ಗಂಟೆ ಮೊದಲು 48 ಗಂಟೆಗಳೊಳಗೆ ಕ್ಯಾನ್ಸಲ್ ಮಾಡಿದರೆ ಅದಕ್ಕೆ ಟಿಕೆಟ್​ನ ಶೇ. 25ನ್ನು ಕಟ್ ಮಾಡಲಾಗುವುದು. ಹಾಗೆಯೇ ರೈಲು ಹೊರಡುವುದಕ್ಕೆ 4 ಗಂಟೆಯ ಮೊದಲು 12 ಗಂಟೆಯ ಒಳಗೆ ಟಿಕೆಟ್ ಕ್ಯಾನ್ಸಲ್ ಮಾಡಿದರೆ ಟಿಕೆಟ್​ನ ಶೇ. 50 ಅನ್ನು ಕಟ್ ಮಾಡಲಾಗುತ್ತದೆ. ರೈಲು ಹೊರಡುವುದಕ್ಕೆ 4 ಗಂಟೆ ಮೊದಲು ಟಿಕೆಟ್ ಕ್ಯಾನ್ಸಲ್ ಮಾಡುವುದಕ್ಕೆ ಅವಕಾಶವಿಲ್ಲ ಹಾಗೆಯೇ ಆ ಹಣ ನಿಮಗೆ ವಾಪಸು ಬರುವುದಿಲ್ಲ. (ಏಜೆನ್ಸೀಸ್)
ತಮಿಳುನಾಡಿನಲ್ಲಿ ಜುಲೈ 19ರವರೆಗೆ ಲಾಕ್​ಡೌನ್ ವಿಸ್ತರಣೆ!

ವಿಕ್ರಾಂತ್ ರೋಣ ಚಿತ್ರದ ಸ್ಪೆಷಲ್​ ಸಾಂಗ್​ಗಾಗಿ ಬೆಂಗಳೂರಿಗೆ ಬಂದಿಳಿದ ಬಾಲಿವುಡ್ ಬೆಡಗಿ ಜಾಕ್ವೆಲಿನ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 7 =
Remember me
