ನವದೆಹಲಿ:ಕೇಂದ್ರ ಸರ್ಕಾರ ಚೀನಾ ಆ್ಯಪ್​ಗಳನ್ನು ಬ್ಯಾನ್ ಮಾಡಿದೆ. ಇದರಿಂದ ಚೀನಾ ಕಂಪನಿಗಳು ಬಾಯ್ಬಡಿಕೊಳ್ಳುತ್ತಿವೆ. ಕೋರ್ಟ್​ ಮೆಟ್ಟಿಲೇರಲು ಸಿದ್ಧತೆ ನಡೆಸಿವೆ. ಇದಕ್ಕೆಲ್ಲ ಕಾರಣವೇನು ಗೊತ್ತೆ? ಅವುಗಳ ಭಾರಿ ಕಮಾಯಿಗೆ ಕಲ್ಲು ಬಿದ್ದಿರುವುದು.
ಅಷ್ಟಕ್ಕೂ ಚೀನಾ ಆ್ಯಪ್​ಗಳು ಭಾರತದಿಂದ ಗಳಿಕೆ ಮಾಡುತ್ತಿದುದಾದರೂ ಎಷ್ಟು ಅಂತೀರಾ? ಇಲ್ಲಿದೆ ನೋಡಿ ಮಾಹಿತಿ.
ಯುಸಿ ಬ್ರೌಸರ್​:ಜಾಕ್​ ಮಾ ಒಡೆತನದ ಅಲಿಬಾಬಾ ಕಂಪನಿಯ ಯುಸಿ ಮೊಬೈಲ್​ ವೆಬ್​ ಪ್ರೈವೇಟ್​ ಲಿಮಿಟೆಡ್​ ಕಂಪನಿ ಯುಸು ಬ್ರೌಸರ್​ ಹಾಗೂ ಯುಸಿ ನ್ಯೂಸ್​ ಆ್ಯಪ್​ಗಳನ್ನು ಹೊರತಂದಿದೆ. ಭಾರತದ ಸ್ಮಾರ್ಟ್​ ಫೋನ್​ಗಳಲ್ಲಿ ಶೇ.22 ಈ ಬ್ರೌಸರ್ ಬಳಸಲಾಗುತ್ತಿತ್ತು. ಭಾರತದಲ್ಲಿ ಕೇವಲ ನೂರು ಸಿಬ್ಬಂದಿ ಹೊಂದಿದ್ದ ಈ ಕಂಪನಿ 2018-19 ರಲ್ಲಿ 226.64 ಕೋಟಿ ರೂ. ಸಂಪಾದನೆ ಮಾಡಿತ್ತು.
ಇದನ್ನೂ ಓದಿ:ಒಂದು ರೂ.ಗೂ ಕಡಿಮೆ ಬೆಲೆಯ ಮಾತ್ರೆ ಕರೊನಾ ಚಿಕಿತ್ಸೆಯಲ್ಲಿ ಅದ್ಭುತಗಳನ್ನೇ ಮಾಡುತ್ತಿದೆ….!
ಟಿಕ್​ಟಾಕ್​, ಹಲೋ:ಭಾರತದಲ್ಲಿ ಭಾರಿ ಜನಪ್ರಿಯವಾಗಿದ್ದ ಟಿಕ್​ ಟಾಕ್ ಹಾಗೂ ಹಲೋ ಆ್ಯಪ್​ ಒಟ್ಟಾರೆ 17 ಕೋಟಿ ಬಳಕೆದಾರರನ್ನು ಹೊಂದಿತ್ತು. ಅತಿ ಹೆಚ್ಚು ಬಳಕೆದಾರರನ್ನು ಹೊಂದಿದ್ದ ಆ್ಯಪ್​ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. 2018-19ರಲ್ಲಿ 43.6 ಕೋಟಿ ರೂ.ಗಳನ್ನು ಗಳಿಸಿತ್ತು.
ಶೇರ್​ ಇಟ್​:ಚೀನಾದ ಶೇರ್​ ಇಟ್​ ಆ್ಯಪ್​ಗೂ ಭಾರತ ಅತಿ ದೊಡ್ಡ ಮಾರುಕಟ್ಟೆಯಾಗಿತ್ತು . ಇದಕ್ಕೆ 40 ಕೋಟಿ ಬಳಕೆದಾರರಿದ್ದರು. ಆದರೆ, ಗಳಿಸಿದ ಆದಾಯ 14.73 ಕೋಟಿ ರೂ. ಭಾರತದ ಶೇರ್​ ಇಟ್​ ಕಂಪನಿ ಹಾಂಗ್​ಕಾಂಗ್​ ಸಂಸ್ಥೆಯ ಒಡೆತನದಲ್ಲಿತ್ತು.
ಇದನ್ನೂ ಓದಿ:ರೋಗ ಪ್ರತಿರೋಧಕ ಶಕ್ತಿ ಕುಂದಿದವರಿಗೂ ಆಕ್ಸ್​ಫರ್ಡ್​ ಕರೊನಾ ಲಸಿಕೆ ಸುರಕ್ಷಿತ; ಫಲಿತಾಂಶ ಪ್ರಕಟಿಸಿದ ತಜ್ಞರು
ಇ-ಮಾರ್ಕೆಟ್​ ತಾಣ ಕ್ಲಬ್​ ಫ್ಯಾಕ್ಟರಿ 3,000ಕ್ಕೂ ಅಧಿಕ ವರ್ತಕರನ್ನು ನೋಂದಾಯಿಸಿಕೊಂಡಿತ್ತು. ಇದರ ಮಾತೃ ಸಂಸ್ಥೆಯಾದ ಗ್ಲೋಬ್​ ಮ್ಯಾಕ್ಸ್​ ಕಾಮರ್ಸ್​ ಇಂಡಿಯಾ ಕಂಪನಿ ಕಳೆದ ಸಾಲಿನಲ್ಲಿ 172.14 ಕೋಟಿ ಆದಾಯ ಗಳಿಸಿತ್ತು. ಇದಲ್ಲದೇ. ಕ್ಯಾಮ್​ಸ್ಕ್ಯಾನರ್​ ಕಂಪನಿ 10 ಕೋಟಿ ಸಕ್ರಿಯ ಬಳಕೆದಾರರನ್ನು ಭಾರತದಲ್ಲಿ ಹೊಂದಿತ್ತು.
ನೆಗಡಿ, ಕೆಮ್ಮಿನಷ್ಟೇ ಕಾಮನ್​ ಆಗುತ್ತೆ ಕರೊನಾ; ಎಲ್ಲರಿಗೂ ಔಷಧ ಬೇಕಾಗೋದು ಇಲ್ಲ; ಆಕ್ಸ್​ಫರ್ಡ್​ ವಿವಿ ತಜ್ಞರ ಅಭಿಮತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 7 =
Remember me
