ನವದೆಹಲಿ: ನಮ್ಮ ದೇಶದಲ್ಲಿ ಕರೊನಾ ಸೋಂಕು ಹರಡುವಿಕೆಯ ಕೇಂದ್ರ ಸ್ಥಾನವಾಗಿ ದೆಹಲಿಯ ಹಜರತ್ ನಿಜಾಮುದ್ದೀನ್ ದರ್ಗಾ ಸಮೀಪದ ತಬ್ಲಿಘಿ ಜಮಾತ್​ನ ಪ್ರವಚನ ಸಭೆ ಈಗ ದೇಶದ ಗಮನಸೆಳೆದಿದೆ. ಈ ಸಭೆಯಲ್ಲಿ ನಮ್ಮ ದೇಶದ ನಾನಾ ರಾಜ್ಯಗಳ ಜನರಷ್ಟೇ ಅಲ್ಲ, ವಿದೇಶದವರೂ ಭಾಗಿಯಾಗಿದ್ದು, COVID19 ಹರಡುವ ಹಾಟ್​ ಸ್ಪಾಟ್​ ಆಗಿ ಗುರುತಿಸಿಕೊಂಡಿದೆ. ಇಲ್ಲಿ ಭಾಗಿಯಾದವರ ಪೈಕಿ ಕನಿಷ್ಠ 8 ಜನ ಮೃತಪಟ್ಟಿದ್ದು, 117 ಕರೊನಾ ಸೋಂಕು ಪೀಡಿತರಾಗಿರುವುದು ಧೃಡಪಟ್ಟಿದೆ. ತಬ್ಲಿಘಿ ಜಮಾತ್​ ಆರು ಮಹಡಿ ಕಟ್ಟಡದಲ್ಲಿದ್ದು, ಇದನ್ನು ಮರ್ಕಜ್ ಎಂದೂ ಹೇಳುತ್ತಾರೆ.ದೇಶವೇ ಬೆಚ್ಚಿ ಬೀಳುವಂತೆ ಮಾಡಿದ ಮರ್ಕಜ್​ನ ಈ ಪ್ರವಚನ ಸಭೆ ಕರೊನಾ ಹಾಟ್​ ಸ್ಪಾಟ್ ಆದ ಬಳಿಕ ಇದುವರೆಗಿನ ಘಟನಾವಳಿಗಳನ್ನು ಸಂಕ್ಷಿಪ್ತವಾಗಿ ಎಎನ್​ಐ ಕಟ್ಟಿಕೊಟ್ಟಿದೆ. ಅದು ಹೀಗಿದೆ –
ಮಾರ್ಚ್​ 13– ಆರು ಮಹಡಿ ಕಟ್ಟದಲ್ಲಿ ನಿಜಾಮುದ್ದೀನ್ ಮರ್ಕಜ್​ ನಲ್ಲಿ ಪಾಲ್ಗೊಳ್ಳಲು ಅಂದಾಜು 3,400 ಜನ ಅಲ್ಲಿ ಸೇರಿದ್ದರು. ಅದೇ ದಿನ ದೆಹಲಿ ಸರ್ಕಾರ ನಿರ್ಬಂಧ ಆದೇಶ ಹೊರಡಿಸಿತ್ತು. ಅಲ್ಲದೆ, 200 ಜನಕ್ಕಿಂತ ಹೆಚ್ಚಿರುವ ಯಾವುದೇ ಕಾರ್ಯಕ್ರಮಕ್ಕೆ ಮಾರ್ಚ್ 31ರ ತನಕ ಅವಕಾಶವಿಲ್ಲ ಎಂದೂ ಸರ್ಕಾರ ಆದೇಶ ಹೊರಡಿಸಿತ್ತು. ಆದಾಗ್ಯೂ, ಈ ಕಾರ್ಯಕ್ರಮ ಮುಂದುವರಿದಿದೆ.
ಮಾರ್ಚ್ 16– ಕರೊನಾ ವೈರಸ್ ಹರಡದಂತೆ ತಡೆಯುವ ಸಲುವಾಗಿ ಬಿಗಿ ಕ್ರಮಕ್ಕೆ ಮುಂದಾದ ಅರವಿಂದ ಕೇಜ್ರಿವಾಲ್ ಸರ್ಕಾರ, ಮಾರ್ಗಸೂಚಿ ಬಿಗಿಗೊಳಿಸಿ 50ಕ್ಕಿಂತ ಹೆಚ್ಚು ಜನ ಪಾಲ್ಗೊಳ್ಳಬಾರದು ಎಂದು ಆದೇಶ ಹೊರಡಿಸಿತು. ಅದು ಕೂಡ ಈ ಕಾರ್ಯಕ್ರಮಕ್ಕೆ ಅಡ್ಡಿಯಾಗಲಿಲ್ಲ.
ಮಾರ್ಚ್ 20: ತೆಲಂಗಾಣಕ್ಕೆ ತೆರಳಿದ್ದ 10 ಇಂಡೋನೇಷ್ಯಾ ಪ್ರಜೆಗಳಿಗೆ ಕರೊನಾ ಸೋಂಕು ದೃಢಪಟ್ಟಿದೆ. ಅವರು ದೆಹಲಿಯ ಈ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡವರಾಗಿದ್ದರು.
ಮಾರ್ಚ್ 22– ಜನತಾ ಕರ್ಫ್ಯೂ ಆಚರಣೆ
ಮಾರ್ಚ್ 23-ಮರ್ಕಜ್​ನಿಂದ 1,500 ಜನರನ್ನು ತೆರವುಗೊಳಿಸಿದ ಸರ್ಕಾರ
ಮಾರ್ಚ್ 24-ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ರಾಷ್ಟ್ರವ್ಯಾಪಿ ಲಾಕ್​ಡೌನ್ ಶುರು
ಮಾರ್ಚ್ 25 –ಮರ್ಕಜ್​ನಲ್ಲಿ ಇನ್ನೂ 1,000 ಜನ ಉಳಿದುಕೊಂಡಿದ್ದರು. ಜಮಾತ್​ನ ಅಧಿಕಾರಿಗಳು ಸ್ಥಳೀಯ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿಯೊಂದನ್ನು ಸಲ್ಲಿಸಿತು. ತನ್ನ ಕೆಲಸದವರನ್ನು ಸ್ಥಳಾಂತರಿಸುವುದಕ್ಕೆ ಅವಕಾಶ ಕೋರಿದ ಮನವಿಯಾಗಿತ್ತು ಅದು.
ಮಾರ್ಚ್ 26 –ಈ ಸಭೆಯಲ್ಲಿ ಪಾಲ್ಗೊಂಡ ಧಾರ್ಮಿಕ ಮುಖಂಡನೊಬ್ಬ ಶ್ರೀನಗರದಲ್ಲಿ ಮೃತಪಟ್ಟ. ಆತನಿಗೆ ಸೋಂಕು ತಗಲಿರುವುದು ಧೃಡಪಟ್ಟಿತ್ತು. ಮರ್ಕಜ್​ಗೆ ಭೇಟಿ ನೀಡಿದ ಎಸ್​ಡಿಎಂ ಅವರು ಜಮಾತ್​ನ ಅಧಿಕಾರಿಗಳ ಜತೆಗೆ ಸಭೆ ನಡೆಸಿದರು.
ಮಾರ್ಚ್ 27-ಮರ್ಕಜ್​ನಲ್ಲಿದ್ದ ಆರು ಶಂಕಿತ ಸೋಂಕುಪೀಡಿತರ ಸ್ಥಳಾಂತರ- ಮೆಡಿಕಲ್ ಚೆಕಪ್​. ಬಳಿಕ ಅವರನ್ನು ಹರಿಯಾಣದ ಜಜ್ಜರ್​ ಎಂಬಲ್ಲಿ ಅವರಿಗೆ ಕ್ವಾರಂಟೈನ್ ವಿಧಿಸಲಾಗಿದೆ.
ಮಾರ್ಚ್ 28 –ಎಸ್​ಡಿಎಂ ಮತ್ತು ಡಬ್ಲ್ಯುಎಚ್​ಒ ಟೀಮ್ ಮರ್ಕಜ್​ಗೆ ಭೇಟಿ ನೀಡಿತು. ಅಲ್ಲದೆ, ಮತ್ತೆ 33 ಜನರನ್ನು ಮೆಡಿಕಲ್ ಚೆಕಪ್​ಗೆ ಕರೆದೊಯ್ದು ರಾಜೀವ್ ಗಾಂಧಿ ಕ್ಯಾನ್ಸರ್ ಆಸ್ಪತ್ರೆಯ ಐಸೋಲೇಷನ್ ವಾರ್ಡ್​ಗೆ ಸೇರಿಸಲಾಗಿದೆ. ಲಜಪತ್​ ನಗರದ ಎಸಿಪಿ ಈ ಕುರಿತು ಪ್ರಕರಣ ದಾಖಲಿಸಿ, ಮರ್ಕಜ್​ಗೆ ನೋಟಿಸ್ ಜಾರಿಗೊಳಿಸುತ್ತಾರೆ. ಅಲ್ಲದೆ, ಅಲ್ಲಿಂದ ಎಲ್ಲವನ್ನೂ ತೆರವುಗೊಳಿಸುವಂತೆ ಆದೇಶಿಸುತ್ತಾರೆ.
ಮಾರ್ಚ್ 29– ಎಸಿಪಿಯ ನೋಟಿಸ್​ಗೆ ಪ್ರತಿಕ್ರಿಯೆಯಾಗಿ ಮರ್ಕಜ್​ನ ಅಧಿಕಾರಿಗಳು ಹೊಸ ಜನರಿಗೆ ಅಲ್ಲಿ ಸ್ಥಳಾವಕಾಶವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು. ಪ್ರಧಾನಿಯವರು ಲಾಕ್​ಡೌನ್ ಘೋಷಿಸುವ ಮೊದಲೇ ಈಗಿರುವ ಜನ ಅಲ್ಲಿದ್ದರು. ಹಾಗಾಗಿ ಅವರು ಇಲ್ಲಿಯೇ ಇರುತ್ತಾರೆ ಎಂದು ಉತ್ತರಿಸಿದ್ದಾರೆ. ನಿಯಮ ಉಲ್ಲಂಘಿಸಿದ ಮರ್ಕಜ್​ ಅನ್ನು ದೆಹಲಿ ಪೊಲೀಸರು ಸುತ್ತುವರಿದು, ಆರೋಗ್ಯ ಅಧಿಕಾರಿಗಳ ನೆರವಿನೊಂದಿಗೆ ಅಲ್ಲಿದ್ದವರನ್ನೆಲ್ಲ ಆಸ್ಪತ್ರೆಗೆ ಹಾಗೂ ಕ್ವಾರಂಟೈನ್​ ಸೌಲಭ್ಯವಿರುವಲ್ಲಿಗೆ ಸ್ಥಳಾಂತರಿಸಿದ್ದಾರೆ.
ಮಾರ್ಚ್ 31– ಮಂಗಳವಾರ ಸಂಜೆ ತನಕ ನಿಜಾಮುದ್ದೀನ್​ ಮರ್ಕಜ್ ಒಳಗಿದ್ದ 1,548 ಜನರನ್ನು ಸ್ಥಳಾಂತರಿಸಲಾಗಿತ್ತು.
ನಿಮ್ಮೂರು ಕರೊನಾ ಹಾಟ್​​ಸ್ಪಾಟ್​ ಸಿಟಿಗಳ ಪಟ್ಟಿಯಲ್ಲಿದೆಯೇ?: ಅನಾಲಿಸಿಸ್ ರಿಪೋರ್ಟ್​ನಲ್ಲಿದೆ ಬೆಚ್ಚಿ ಬೀಳಿಸುವ ಅಂಶಗಳು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 2 =
Remember me
