ಗಡ್ಚಿರೋಲಿ (ಮಹಾರಾಷ್ಟ್ರ): ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಸಲು ಚುನಾವಣಾ ಅಧಿಕಾರಿಗಳು ಪಣ ತೊಟ್ಟಿದ್ದು, ಕಳೆದ ಬಾರಿ ಕಡಿಮೆ ಮತದಾನವಾಗಿರುವ ಕ್ಷೇತ್ರಗಳ ಮೇಲೆ ನಿಗಾ ಇಟ್ಟಿದೆ. ಈ ನಿಟ್ಟಿನಲ್ಲಿ ಎರಡು ಮತಕ್ಕಾಗಿ ಅಧಿಕಾರಿಗಳು 107 ಕಿಲೋಮೀಟರ್‌ ದೂರ ಕಾಡು ಹಾದಿಯಲ್ಲಿ ಸಾಗಿರುವ ಘಟನೆ ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ನಡೆದಿದೆ.
ಇದನ್ನೂ ಓದಿ:ಕಾಶಿ ದೇಗುಲದಲ್ಲಿ ಅರ್ಚಕರಂತೆ ವಸ್ತ್ರ ಧರಿಸಿ ಭದ್ರತೆಗೆ ನಿಂತ ಪೊಲೀಸರು..! ಅಖಿಲೇಶ್​ ಯಾದವ್​ ಶಾಕಿಂಗ್​ ಕಾಮೆಂಟ್​
ಲೋಕಸಭೆ ಚುನಾವಣೆಗೆ ಇಬ್ಬರು ವಯೋವೃದ್ಧರು ತಮ್ಮ ಮನೆಯಿಂದಲೇ ಮತ ಚಲಾಯಿಸುವುದಕ್ಕೆ ಅವಕಾಶ ಮಾಡಿಕೊಡಲು ಅಧಿಕಾರಿಗಳು ಕಾಡು, ಬೆಟ್ಟ ಗುಡ್ಡಗಳಲ್ಲಿ 107 ಕಿ.ಮೀ ದೂರ ಸಾಗಿದ್ದಾರೆ. 100 ಮತ್ತು 86 ವರ್ಷ ವಯಸ್ಸಿನ ಮತದಾರರು ಗಡ್ಚಿರೋಲಿ-ಚಿಮೂರ್ ಕ್ಷೇತ್ರದಿಂದ ಬಂದಿದ್ದು, ಏಪ್ರಿಲ್ 19 ರಂದು ಮೊದಲ ಹಂತದಲ್ಲಿ ಮತದಾನ ನಡೆಯಲಿದೆ.
ಗಡ್ಚಿರೋಲಿಯಲ್ಲಿರುವ ಜಿಲ್ಲಾ ಮಾಹಿತಿ ಕಚೇರಿಯ ಪ್ರಕಾರ, ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ 85 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಶೇಕಡಾ 40 ಕ್ಕಿಂತ ಹೆಚ್ಚು ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳು ಮನೆಯಿಂದಲೇ ಮತ ಚಲಾಯಿಸುವ ಆಯ್ಕೆಯನ್ನು ಚುನಾವಣಾ ಆಯೋಗವು ನೀಡಿದೆ.
ಈ ಕಾನೂನಿ ಪ್ರಕಾರ ಚುನಾವಣಾ ಅಧಿಕಾರಿಗಳು ಅಹೇರಿಯಿಂದ ಸಿರೊಂಚಾಕ್ಕೆ 107 ಕಿಲೋಮೀಟರ್ ಪ್ರಯಾಣಿಸಿ 100 ವರ್ಷದ ಕಿಷ್ಟಯ್ಯ ಮದರಬೋಯಿನಾ ಮತ್ತು 86 ವರ್ಷದ ಕಿಷ್ಟಯ್ಯ ಕೊಮೆರಾ ಅವರ ಮನೆಗಳನ್ನು ತಲುಪಿದ್ದಾರೆ. ಅವರು ಓಡಾಡಲು ಸಮಸ್ಯೆಗಳಿದ್ದರೂ ತಮ್ಮ ಚುನಾವಣಾ ಹಕ್ಕು ಚಲಾಯಿಸಲು ಉತ್ಸುಕರಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ತಿಳಿಸಿದ್ದಾರೆ.
ಗಡ್ಚಿರೋಲಿ-ಚಿಮೂರ್ ಕ್ಷೇತ್ರದಲ್ಲಿ 85 ವರ್ಷಕ್ಕಿಂತ ಮೇಲ್ಪಟ್ಟ 1,037 ಮತದಾರರು ಮತ್ತು 338 “ದಿವ್ಯಾಂಗ್” ಗಳ ಮನೆಯಿಂದ ಮತದಾನ ಮಾಡಲು ಚುನಾವಣಾಧಿಕಾರಿಗಳು ಅನುಮೋದಿಸಿದ್ದಾರೆ ಎಂದು ವರದಿಯಾಗಿದೆ.
ಬಹುಭಾಷಾ ನಟ ಸಯಾಜಿ ಶಿಂಧೆಗೆ ಹೃದಯಾಘಾತ! ಆತಂಕದಲ್ಲಿ ಅಭಿಮಾನಿಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
