ನವದೆಹಲಿ:ಪ್ರಧಾನಿ ನರೇಂದ್ರ ಮೋದಿಯವರು ಇಂದು 70ನೇ ಜನ್ಮದಿನಾಚರಣೆ ಆಚರಿಸಿಕೊಳ್ಳುತ್ತಿದ್ದಾರೆ. ನಿತ್ಯವೂ ಒಂದಿಲ್ಲೊಂದು ಟೀಕೆಗಳನ್ನು ಟ್ವೀಟ್ ಮೂಲಕ ಮಾಡುತ್ತ ಬಂದಿರುವ ಕಾಂಗ್ರೆಸ್ ಕಣ್ಮಣಿ ರಾಹುಲ್ ಗಾಂಧಿ ಪ್ರಧಾನಿ ಮೋದಿಯವರಿಗೆ ಏನು ಶುಭಾಶಯ ಕೋರಿರಬಹುದು?!
ತಾಯಿ ಸೋನಿಯಾ ಅವರ ಜತೆಗೆ ವಿದೇಶಕ್ಕೆ ತೆರಳಿರುವ ರಾಹುಲ್ ಗಾಂಧಿ ಗುರುವಾರ ಬೆಳಗ್ಗೆ 7.11ಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಹ್ಯಾಪಿ ಬರ್ತ್​ ಡೇ ಎಂದು ವಿಶ್ ಮಾಡಿದ್ದಾರೆ. ಇದೇ ವೇಳೆ, ಕಾಂಗ್ರೆಸ್ಸಿಗರು ಮತ್ತು ಅವರ ಬೆಂಬಲಿಗರು ಟ್ವಿಟರ್​ನಲ್ಲಿ ಬೇರೋಜಗಾರಿ ದಿವಸ್ ಎಂಬ ವಿಚಾರವನ್ನು ಇಟ್ಟುಕೊಂಡು ಟ್ರೆಂಡಿಂಗ್ ಸೃಷ್ಟಿಸಲು ಪ್ರಯತ್ನಿಸಿದ್ದಾರೆ. ಆ ಮೂಲಕ ಮೋದಿಯವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ಮುಂದಾಗಿದ್ದಾರೆ.
ಇದನ್ನೂ ಓದಿ:ಸಮರ್ಥ ನಾಯಕತ್ವದ ಫಲ; ದೇಶದಲ್ಲಿ ವಿಶ್ವಾಸದ ಅಲೆ
ನ್ಯಾಷನಲ್ ಅನ್​ಎಂಪ್ಲಾಯ್​ಮೆಂಟ್​ಡೇ ಎಂಬ ಹ್ಯಾಷ್ ಟ್ಯಾಗ್ ಜತೆಗೆ ಪಿಎಂ ಮೋದಿ, ಹ್ಯಾಪಿಬಿಡೇನಮೋ ಹ್ಯಾಷ್ ಟ್ಯಾಗ್​ಗಳನ್ನೂ ಬಳಸುತ್ತಿದ್ದಾರೆ. (ಏಜೆನ್ಸೀಸ್)
Wishing PM Narendra Modi ji a happy birthday.
— Rahul Gandhi (@RahulGandhi)September 17, 2020

ಏಕ ಭಾರತ-ಶ್ರೇಷ್ಠ ಭಾರತದ ಶಿಲ್ಪಿ ಪ್ರಧಾನಿ ನರೇಂದ್ರ ಮೋದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 2 =
Remember me
