ಬೆಂಗಳೂರು:ಕರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೆಲವು ಮಾರ್ಗಸೂಚಿ ಹೊರಡಿಸಿದೆ. ಅಂತ್ಯಕ್ರಿಯೆ ವೇಳೆ ಕುಟುಂಬದವರಿಗೆ ಮುಖ ನೋಡಲು ಅವಕಾಶವಿದ್ದು, ಮುಟ್ಟುವಂತಿಲ್ಲ. ಸಿಬ್ಬಂದಿ ಮತ್ತು ಕುಟುಂಬ ಸದಸ್ಯರಿಗೆ ಸೋಂಕು ಹರಡದಂತೆ ಕ್ರಮವಹಿಸಬೇಕೆಂದು ತಿಳಿಸಿದೆ. ಇನ್ನು ಸೋಂಕಿತ ಮೃತ ದೇಹದಲ್ಲಿ ಶ್ವಾಸಕೋಶಗಳು ಮಾತ್ರ ಸೋಂಕಿಗೆ ಒಳಗಾಗಿರುತ್ತವೆ. ದೇಹ ನಿರ್ವಹಣೆ ಮಾಡುವಾಗ ಆರೋಗ್ಯ ಸಿಬ್ಬಂದಿ ಕೈಗಳ ನೈರ್ಮಲ್ಯ,
ಸ್ವರಕ್ಷಣಾ ಸಲಕರಣೆ (ವಾಟರ್ ರೆಸಿಸ್ಟಂಟ್ ಏಪ್ರಾನ್, ಗ್ಲೌಸ್, ಮಾಸ್ಕ್,ಕನ್ನಡಕ), ಸೋಂಕಿತ ವ್ಯಕ್ತಿಗೆ ಬಳಸಿದ ಸಲಕರಣೆ, ಅವರು ಬಳಸಿದ ಹಾಸಿಗೆ, ಪರಿಸರ, ನೆಲ ಹಾಗೂ ಮೃತದೇಹಕ್ಕೆ ಬಳಕೆ ಮಾಡಿದ ಬ್ಯಾಗ್​ಗಳನ್ನು ಸೋಂಕುಮುಕ್ತಗೊಳಿಸಬೇಕು. ಸೋಂಕಿತ ಮೃತ ದೇಹ ಸಂಸ್ಕಾರ ಮಾಡಲು ನೆರವಾಗುವ ಆಂಬುಲೆನ್ಸ್ ಸಿಬ್ಬಂದಿ, ಶವಾಗಾರ, ಚಿತಾಗಾರ ಅಥವಾ ಸ್ಮಶಾನ ಸಿಬ್ಬಂದಿಗೆ ಸೋಂಕು ತಡೆ ಬಗ್ಗೆ ತರಬೇತಿ ನೀಡಬೇಕು.
ಅಂತ್ಯಕ್ರಿಯೆಗೆ ರವಾನಿಸುವುದು:ಸೋರಿಕೆರಹಿತ ಪ್ಲಾಸ್ಟಿಕ್ ಚೀಲದಲ್ಲಿ ಮೃತದೇಹ ಇಡಬೇಕು. ಈ ಚೀಲದ ಹೊರಭಾಗವನ್ನು ಶೇ.1 ಹೈಪೋಕ್ಲೋರೈಟ್​ನಿಂದ ಸೋಂಕು ರಹಿತಗೊಳಿಸಬೇಕು. ಬಳಿಕ ಮೃತದೇಹ ವನ್ನು ಸಂಬಂಧಿಕರಿಗೆ ಹಸ್ತಾಂತರಿಸಬಹುದು ಅಥವಾ ಶವಾಗಾರಕ್ಕಾದರೂ ಸಾಗಿಸಬಹುದು. ಸೋಂಕಿತ ವ್ಯಕ್ತಿ ಬಳಸಿದ ಬಟ್ಟೆಗಳನ್ನು ಅಪಾಯಕಾರಿ ಜೈವಿಕ ವಸ್ತುಗಳನ್ನಿಡುವ ಚೀಲದಲ್ಲಿ ಇರಿಸಬೇಕು. ಮೃತದೇಹದ ಎಲ್ಲ ಜೈವಿಕ ತ್ಯಾಜ್ಯಗಳನ್ನು ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣೆಯ ನಿಯಮಗಳಿ ಗನುಸಾರವಾಗಿ ನಿರ್ವಹಿಸಬೇಕು. ಕುಟುಂಬದವರ ಭಾವನೆಗಳನ್ನು ಗೌರವಿಸಬೇಕು ಹಾಗೂ ಅವರಿಗೆ ಆಪ್ತ ಸಲಹೆಯನ್ನು ನೀಡಬೇಕು. ಸಮಾಧಿಗೆ ಸಂಬಂಧಿಸಿದಂತೆ ಮೃತದೇಹವನ್ನು ಮುಟ್ಟದೆ ಮಾಡಬಹುದಾದ ವಿಧಿ ವಿಧಾನಗಳಾದ ಧಾರ್ವಿುಕ ಪಠಣ,
ಪವಿತ್ರ ನೀರಿನ ಪೋ›ಕ್ಷಣೆ ಇತ್ಯಾದಿ ಮಾಡಲು ಅನುಮತಿಸಬಹುದು. ಮೃತದೇಹವನ್ನು ದಹನ ಮಾಡಿದರೆ ನಂತರ ದೊರೆಯುವ ಬೂದಿಯು ಯಾವುದೇ ತೊಂದರೆ ಉಂಟುಮಾಡದಿರುವುದರಿಂದ, ಅಂತಿಮ ವಿಧಿ ವಿಧಾನ ನಿರ್ವಹಿಸಲು ಬೂದಿಯನ್ನು ಶೇಖರಿಸಿಕೊಳ್ಳಬಹುದು.
ಯಾವುದನ್ನು ಮಾಡಬಾರದು
ಬಿದಿರಿನ ಕಡ್ಡಿ, ಸಿರಿಂಜ್​ಗಳು, ಗ್ಲಾಸ್​ ಶೀಲ್ಡ್​; ಬಿಹಾರ ಚುನಾವಣೆಗೆ ಇವೆಲ್ಲ ಏಕೆ ಬೇಕು…?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − fourteen =
Remember me
