ಅಹಮದಬಾದ್​:ಐಷಾರಾಮಿ ಹೋಟೆಲ್​ಗಳಲ್ಲಿ ವಾಸ್ತವ್ಯ ಹೂಡುತ್ತಿದ್ದವರನ್ನು ಗುರಿಯಾಗಿಸಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಗುಜರಾತ್​ ಪೊಲೀಸರು ಯಶಸ್ವಿಯಾಗಿದ್ಧಾರೆ.
ಜಯೇಶ್​ ರಾವ್​ಜೀ ಸೆಜ್​ಪಾಲ್​(52) ಬಂಧಿತ ಆರೋಪಿ ಎಂದು ತಿಳಿದು ಬಂದಿದ್ದು ಕಳೆದ 23 ವರ್ಷಗಳಿಂದ ಈತ ಐಷಾರಾಮಿ ಹೋಟೆಲ್​ಗಳಲ್ಲಿ ಕಳ್ಳತನ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿ ಒಬ್ಬರು ಕಳೆದ 23 ವರ್ಷಗಳಲ್ಲಿ ಆರೋಪಿ 24 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಐಷರಾಮಿ ಹೋಟೆಲ್​ಗಳಲ್ಲಿ ಈತ ತನ್ನ ಕೈಚಳಕ ತೋರುತ್ತಿದ್ದ.
ಆರೋಪಿಯೂ ದೇಶದ ವಿವಿಧ ಭಾಗಗಳಲ್ಲಿ ಕಳ್ಳತನ ಮಾಡಿದ್ದು ಈ ಮೊದಲು ಮುಂಬೈನ ತಾಜ್​ ಹೋಟೆಲ್​​ನಲ್ಲಿ ಕೆಲಸ ಮಾಡುತ್ತಿದ್ದ ಎಂದು ವಿಚಾರಣೆ ವೇಳೆ ಹೇಳಿದ್ಧಾನೆ. ಈತ ಒಬ್ಬ ಹವ್ಯಾಸಿ ಕಳ್ಳ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯೂ ಶುಭ ಸಮಾರಂಭ ಹಾಗೂ ಕಾರ್ಯಕ್ರಮಗಳಿಗೆ ಬುಕ್ಕಿಂಗ್​ ಮಾಡಬೇಕಾಗಿದೆ ಎಂದು ಐಷಾರಾಮಿ ಹೋಟೆಲ್​ಗಳಿಗೆ ಹೋಗುತ್ತಿದ್ದ. ಈ ವೇಳೆ ಅಲ್ಲಿ ವಾಸ್ತವ್ಯ ಹೂಡುತ್ತಿದ್ದ ಮಹಿಳೆಉಯರನ್ನು ಗಮನಿಸುತ್ತಿದ್ದ ಖದೀಮ ಬಳಿಕ ಅವರು ಇರುವ ರೂಂ ಸಂಖ್ಯೆಯನ್ನು ತಿಳಿದುಕೊಳ್ಳುತ್ತಿದ್ದ.
ಮಹಿಳೆಯರು ಇಲ್ಲದಿರುವ ಸಮಯದಲ್ಲಿ ಹೋಟೆಲ್​ನವರಿಗೆ ಕಥೆಯನ್ನು ಹೇಳಿ ರೂಂ ಕೀ ಪಡೆದು ಬಳಿಕ ಅಲ್ಲಿದ್ದ ನಗ, ನಾಣ್ಯವನ್ನು ದೋಚಿ ಪರಾರಿಯಾಗುತ್ತಿದ್ದ. ಮೇ 1ರಂದು ಆರೋಪಿ ವಿರುದ್ಧ ಮಹಿಳೆ ಒಬ್ಬರು ನೀಡಿದ ದೂರನ್ನು ಆಧರಿಸಿ ತನಿಖೆ ನಡೆಸಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿ ಇದುವರೆಗೂ ಮುಂಬೈ, ಕೋಲ್ಕತ್ತಾ, ಚಂಡೀಗಢ, ಉದಯಪುರ, ಜಲಂಧರ್, ಜೈಪುರ, ಆಗ್ರಾ, ಹೈದರಾಬಾದ್, ವಿಶಾಖಪಟ್ಟಣಂ, ರಾಯಪುರ, ಲಕ್ನೋ ಮತ್ತು ನಾಗ್ಪುರದಲ್ಲಿ ಕಳ್ಳತನ ಮಾಡಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ಹಿರಿಯ ಪೊಲೀಸ್​ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
