
ಬೆಂಗಳೂರು:ಕರೊನಾ ವೈರಸ್​ ಭಾರತೀಯರಿಗೆ ಎಷ್ಟರ ಮಟ್ಟಿಗೆ ಸಮಸ್ಯೆಯಾಗಿ ಕಾಡುತ್ತಿದೆಯೋ ಅದಕ್ಕಿಂತ ದೊಡ್ಡ ಸಮಸ್ಯೆಯಾಗಿ ಕಾಡುತ್ತಿರುವುದು ಕರೊನಾ ಕಾಲರ್​ ಟ್ಯೂನ್​. ಅದರಿಂದ ತಪ್ಪಿಸಿಕೊಳ್ಳುವುದಕ್ಕೆ ಕಾಯುತ್ತಿರುವವರಿಗೆ ಇಲ್ಲಿದೆ ಒಂದು ಮಾರ್ಗ.
ಜಿಯೋ, ಏರ್​ಟೆಲ್​, ಬಿಎಸ್​ಎನ್​ಎಲ್​ ಟೆಲಿಕಾಂ ಸಂಸ್ಥೆಗಳು ತಮ್ಮ ಗ್ರಾಹಕರ ಕಾಲರ್​ ಟ್ಯೂನ್​ನಲ್ಲಿ ಜನರಿಗೆ ಕರೊನಾ ಬಗ್ಗೆ ಮುನ್ನೆಚ್ಚರಿಕೆಯನ್ನು ನೀಡಲಾರಂಭಿಸಿವೆ. ಯಾರಿಗಾದರೂ ತುರ್ತಾಗಿ ಕರೆ ಮಾಡಬೇಕೆಂದರೆ ನೀವು ಈ ಕಾಲರ್​ ಟ್ಯೂನ್​ನಿಂದಾಗಿ ಎರಡು ನಿಮಿಷ ಕಾಯಲೇಬೇಕಾದ ಪರಿಸ್ಥಿತಿ ಉಂಟಾಗಿದೆ. ಈ ಕಾಲರ್​ ಟ್ಯೂನ್​ ಬಗ್ಗೆ ಅನೇಕ ಚರ್ಚೆಗಳು ನಡೆಯುತ್ತಿದ್ದು, ಇದೀಗ ಅದರಿಂದ ಪಾರಾಗುವುದಕ್ಕೂ ಒಂದು ಮಾರ್ಗವನ್ನು ಹುಡುಕಲಾಗಿದೆ.
ಯಾರಿಗಾದರೂ ಕರೆ ಮಾಡುವಾಗ ಕರೊನಾ ಕಾಲರ್​ ಟ್ಯೂನ್​ ಬರಲಾರಂಭಿಸಿದರೆ, ತಕ್ಷಣ ನಿಮ್ಮ ಮೊಬೈಲ್​ನಲ್ಲಿ ಕೀಪ್ಯಾಡ್​ ತೆರೆಯಿರಿ. ಕೀಪ್ಯಾಡ್​ನಲ್ಲಿ 1ನ್ನು ಒತ್ತುವುದರಿಂದ ನಿಮ್ಮ ಕರೊನಾ ಕಾಲರ್​ ಟ್ಯೂನ್​ ಸ್ಕಿಪ್​ ಆಗಿ ಕರೆ ಹೋಗುತ್ತದೆ. ಆದರೆ ಎಲ್ಲೋ ಕೆಲವರಿಗೆ ಈ ಸೌಲಭ್ಯ ಸಿಗುತ್ತಿಲ್ಲ ಎನ್ನುವ ದೂರುಗಳಿವೆ.
ಕರೊನಾ ಕಾಲರ್​ ಟ್ಯೂನ್​ ಕುರಿತಾಗಿ ಸಾಕಷ್ಟು ದೂರುಗಳು ಕೇಳಿಬರುತ್ತಿದ್ದು, ಕೆಲವು ಗ್ರಾಹಕರಿಗೆ ಈ ಸಮಸ್ಯೆ ಉಂಟಾಗಿಲ್ಲ ಎನ್ನುವುದು ಸಹ ಕೇಳಿ ಬಂದಿದೆ.
ದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಟೆಲಿಕಾಂ ಸಂಸ್ಥೆಗಳ ಗ್ರಾಹಕರ ಹಿತದೃಷ್ಟಿಯಿಂದಾಗಿ ಕರೊನಾ ಬಾರದಿರುವಂತೆ ತಡೆಗಟ್ಟಲು ಅನುಸರಿಬೇಕಾದ ಮುನ್ನೆಚ್ಚರಿಕಾ ಕ್ರಮಗಳನ್ನು ಕಾಲರ್​ ಟ್ಯೂನ್​ ಆಗಿ ನೀಡುತ್ತಿದೆ.(ಏಜೆನ್ಸೀಸ್​)
ಐಪಿಎಲ್​ ಬೇಡವೆನ್ನುತ್ತಿರುವುದಕ್ಕೆ ಕಾರಣ ಇಲ್ಲಿದೆ ನೋಡಿ; ಕ್ರೀಡಾಂಗಣದಲ್ಲಿಯೂ ಹರಡುತ್ತೆ ಕರೊನಾ!
ಕರೊನಾ ವೈರಸ್​ ಸೋಂಕು ವದಂತಿ ತಪ್ಪಿಸಲು ಕೆಳಕಂಡ ಜಾಲತಾಣದಿಂದ ಮಾತ್ರ ಮಾಹಿತಿ ಪಡೆಯಿರಿ
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:6 − four =
Remember me
