ಬೆಂಗಳೂರು:ಬಾಲಿವುಡ್​ನ ಖ್ಯಾತ ನಟ ಶಾರುಖ್​ ಖಾನ್​ ಅವರಿಗೆ ಇವತ್ತು 55ನೇ ಜನ್ಮದಿನದ ಸಂಭ್ರಮ. ವಿಶೇಷವೆಂದರೆ ಲವರ್​ ಬಾಯ್​ ಎಂದೇ ಹೆಸರಾಗಿರುವ ಅವರು ಲವರ್ ಬಾಯ್​ ಆಗುವುದು ಹೇಗೆ ಎಂಬ ರಹಸ್ಯವನ್ನು ಈ ವಯಸ್ಸಿನಲ್ಲಿ ಬಿಟ್ಟುಕೊಟ್ಟಿದ್ದಾರೆ.
ಬರ್ತ್​ ಡೇ ಖುಷಿಯಲ್ಲಿ ಅಭಿಮಾನಿಗಳ ಸಂಭ್ರಮ, ಸಾಮಾಜಿಕ ಕಾರ್ಯಗಳ ಮೂಲಕ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ತೋರಿದ ಪ್ರೀತಿಯಿಂದ ಅಪಾರ ಸಂತೋಷ ಪಟ್ಟಿರುವ ಶಾರುಖ್​ ಖಾನ್​ ಆ ಬಗ್ಗೆ ವಿಡಿಯೋ ಮೂಲಕ ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಿದ್ದಾರೆ. ಮಾತ್ರವಲ್ಲ ಲವರ್ ಬಾಯ್​ ಆಗುವುದು ಹೇಗೆ ಎಂಬ ಕಿವಿಮಾತನ್ನು ಕೂಡ ಹೇಳಿದ್ದಾರೆ.
ತಮ್ಮ ನೆಚ್ಚಿನ ನಟನ ಜನ್ಮದಿನದ ಪ್ರಯುಕ್ತ ಅಭಿಮಾನಿ ಸಂಘಗಳು ಮಾಸ್ಕ್​-ಸ್ಯಾನಿಟೈಸರ್ ವಿತರಣೆ, ಅಸಹಾಯಕರಿಗೆ-ಅನಾಥರಿಗೆ ನೆರವು ಇತ್ಯಾದಿ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಕ್ಕೆ ಅವರು ಧನ್ಯವಾದ ತಿಳಿಸಿದ್ದಾರೆ. ಅಭಿಮಾನಿಗಳು ನಾನಾ ರೀತಿಯಲ್ಲಿ ಪ್ರೀತಿಯನ್ನು ಹಂಚಿದ್ದನ್ನು ನೋಡಿ ಖುಷಿಯಾಗಿರುವ ಅವರು, ನೀವು ಪ್ರೀತಿಯನ್ನು ಹಂಚದೇ ನನ್ನಂತೆ ಲವರ್ ಬಾಯ್​ ಆಗಲು ಸಾಧ್ಯವಿಲ್ಲ ಎಂದಿದ್ದಾರೆ.
Thank you all… hope to see you soon again. Stay safe… Love always!pic.twitter.com/oSw7qLP6bE
— Shah Rukh Khan (@iamsrk)November 2, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 8 =
Remember me
