ನವದೆಹಲಿ:ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವ ಕರೊನಾ ರೋಗಿಗಳು, ದಿನಕ್ಕೆ ಮೂರು ಬಾರಿ ಆಕ್ಸಿಜನ್ ಮಟ್ಟವನ್ನು ಪರೀಕ್ಷಿಸಿಕೊಳ್ಳುವಂತೆ ಕೇಂದ್ರ ಸರ್ಕಾರ ಸಲಹೆ ಮಾಡಿದೆ. ಈ ಸಂಬಂಧ ಎಂಟು ಅಂಶಗಳ ಮಾರ್ಗಸೂಚಿ ಪ್ರಕಟಿಸಿದೆ.
ಆಕ್ಸಿಮೀಟರ್​ನಲ್ಲಿ ಪ್ರತಿ ಬಾರಿ ಪರೀಕ್ಷಿಸಿಕೊಳ್ಳುವ ಮುನ್ನ ಕನಿಷ್ಠ ಐದು ನಿಮಿಷ ವಿಶ್ರಾಂತಿ ಪಡೆಯಬೇಕು. ಆಸ್ಪತ್ರೆಗೆ ಸೇರುವ ಅಗತ್ಯವಿದೆಯೇ ಎಂಬುದನ್ನು ತಿಳಿಯಲು ಇದು ಅಗತ್ಯ. ಮನೆಯಲ್ಲೇ ಚಿಕಿತ್ಸೆ ಪಡೆಯುವ ರೋಗಿಗಳ ಆಕ್ಸಿಜನ್ ಮಟ್ಟದ ಮೇಲೆ ನಿಗಾ ಇಡುವುದು ತುಂಬಾ ಅಗತ್ಯ. ಬೇಸ್​ಲೈನ್ ಸ್ಯಾಚುರೇಚರೇಷನ್ ಶೇಕಡ 94ಕ್ಕಿಂತ ಕಡಿಮೆ ಇರಬಾರದು ಎಂದು ಹೇಳಿದೆ.
1. ಆಕ್ಸಿಮೀಟರ್ ಒಳಗೆ ಬೆರಳು ಇಡುವ ಮೊದಲು ನೇಲ್ ಪಾಲಿಶ್, ಕೃತಕ ಉಗುರು ಮೊದಲಾದವನ್ನು ತೆಗೆಯಬೇಕು. ತಣ್ಣಗಿದ್ದರೆ ಕೈಗಳನ್ನು ಪರಸ್ಪರ ಉಜ್ಜಿ ಬಿಸಿ ಮಾಡಿಕೊಳ್ಳಬೇಕು.
2. ಆಮ್ಲಜನಕ ಮಟ್ಟ ಪರೀಕ್ಷೆಗೆ ಮುನ್ನ ಕನಿಷ್ಠ ಐದು ನಿಮಿಷ ವಿಶ್ರಾಂತಿ ಪಡೆಯಬೇಕು.
3. ಕೈಯನ್ನು ಎದೆ ಮೇಲೆ ಹೃದಯದ ಮಟ್ಟದಲ್ಲಿ ಇಟ್ಟುಕೊಳ್ಳಿ.
4. ಬಳಿಕ ಆಕ್ಸಿಮೀಟರ್ ಆನ್ ಮಾಡಿ ತೋರು ಬೆರಳು ಅಥವಾ ಮಧ್ಯ ಬೆರಳಿನ ಮೇಲೆ ಇಟ್ಟು ಕೊಳ್ಳಬೇಕು.
5. ಆಗ ಮಟ್ಟದ ರೀಡಿಂಗ್ ಹೆಚ್ಚು ಕಮ್ಮಿ ಆಗಬಹುದು. ಅದು ಸ್ಥಿರವಾಗುವವರೆಗೆ ಕಾಯಿರಿ. ರೀಡಿಂಗ್ ಸ್ಥಿರವಾಗದಿದ್ದರೆ ಆಕ್ಸಿಮೀಟರ್​ನ್ನು ಒಂದು ನಿಮಿಷ ಅಥವಾ ಹೆಚ್ಚು ಸಮಯ ಇಟ್ಟುಕೊಳ್ಳಿ.
6. 5 ಸೆಕೆಂಡ್ ಕಾಲ ಬದಲಾಗದಿದ್ದರೆ ಅತಿ ಅಧಿಕ ರೀಡಿಂಗ್ ಮಟ್ಟ ದಾಖಲಿಸಿಕೊಳ್ಳಿ.
7. ಪ್ರತಿಯೊಂದು ರೆಕಾರ್ಡಿಂಗ್​ನ್ನು ಗಮನವಿಟ್ಟು ದಾಖಲಿಸಿಕೊಳ್ಳಿ.
8. ಬೇಸ್​ಲೈನ್​ನಿಂದ ರೆಕಾರ್ಡಿಂಗ್ ಆರಂಭಿಸಿ. ದಿನದಲ್ಲಿ 3 ಬಾರಿ ಈ ರೀತಿ ಮಾಡಿ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:18 + eleven =
Remember me
