ಬೆಂಗಳೂರು:ಮಳೆಗಾಲ ಬಂತೆಂದರೆ ನೊಣಗಳ ಸಂತಾನಾಭಿವೃದ್ಧಿ ಶುರುವಾಗುತ್ತದೆ. ಅಡುಗೆ ಮನೆಯಿಂದ ಶುರು ಮಾಡಿ.. ಎಲ್ಲೆಂದರಲ್ಲಿ ಬಂದು ತೊಂದರೆ ಕೊಡುತ್ತವೆ. ರಾಸಾಯನಿಕ ಪದಾರ್ಥಗಳನ್ನು ಬಳಸದೆ ನೊಣಗಳನ್ನು ಓಡಿಸಬೇಕು ಎಂದು ಯೋಚಿಸುವ ನಿಮಗೆ ಸುಲಭವಾಗಿ ಮತ್ತು ನೈಸರ್ಗಿಕವಾಗಿ ತೊಡೆದುಹಾಕಲು ಕೆಲವು ಟೀಪ್ಸ್​​​ ನೀಡುತ್ತಿದ್ದೇವೆ.
ಇದನ್ನೂ ಓದಿ:ಮಳೆಗಾಲದಲ್ಲಿ ಒದ್ದೆಯಾದ ಶೂ, ಚಪ್ಪಲಿ ಧರಿಸುವುದು ಸೋಂಕಿಗೆ ಕಾರಣವಾಗಬಹುದು; ಈ 3 ವಿಷಯಗಳ ಬಗ್ಗೆ ಕಾಳಜಿ ವಹಿಸಿ
ಮಳೆಗಾಲದಲ್ಲಿ ನೊಣದ ಕಾಟ ಹೆಚ್ಚು:ಮಳೆಗಾಲದಲ್ಲಿ ಮನೆಯಲ್ಲಿ ನೊಣಗಳ ಸಂಖ್ಯೆ ಹೆಚ್ಚಾಗುತ್ತದೆ. ಕಸ ವಿಲೇವಾರಿ ಬಗ್ಗೆ ಸೂಕ್ತ ಕಾಳಜಿ ವಹಿಸದಿದ್ದರೆ ನಿಮ್ಮ ಅಡುಗೆ ಮನೆಯಲ್ಲಿ ಸೂಕ್ಷ್ಮಜೀವಿಗಳನ್ನು ಸಾಗಿಸುವ ಮೂಲಕ ಸಂತಾನೋತ್ಪತ್ತಿ ಮಾಡುತ್ತವೆ. ಟೈಫಾಯಿಡ್, ಹೆಪಟೈಟಿಸ್ ಎ, ಅತಿಸಾರದಂತಹ ಇತರ ಕಾಯಿಲೆಗಳಿಗೆ ಕಾರಣವಾಗುತ್ತದೆ.
ಇದನ್ನೂ ಓದಿ:VIDEO | ನಟ ವಿಜಯ್ ದೇವರಕೊಂಡನನ್ನು ಬೆನ್ನಟ್ಟಿಕೊಂಡು ಹೋದ ಅಭಿಮಾನಿ ಮಾಡಿದ್ದೇನು?
ಆಪಲ್ ವಿನೆಗರ್ :ಒಂದು ಲೋಟ ಆಪಲ್ ವಿನೆಗರ್ ಅನ್ನು ತೆಗೆದುಕೊಂಡು ಅದಕ್ಕೆ ಕೆಲವು ಹನಿ ಡಿಶ್ ವಾಷಿಂಗ್ ಲಿಕ್ವಿಡ್ ಸೇರಿಸಿ. ನಂತರ ಈ ಗಾಜಿನ ಮೇಲೆ ರಬ್ಬರ್ ಹಾಕಿ ಚೆನ್ನಾಗಿ ಕವರ್ ಮಾಡಿ. ಅದರಲ್ಲಿ ಸಣ್ಣ ರಂಧ್ರಗಳನ್ನು ಮಾಡಿ. ನಂತರ ನೊಣಗಳು ಹೆಚ್ಚಾಗಿ ಬರುವ ಜಾಗದಲ್ಲಿ ಇಡಬೇಕು. ಹೀಗೆ ಮಾಡುವುದರಿಂದ ಗಾಜಿನೊಳಗೆ ನೊಣ ಬಂದು ಸಿಕ್ಕಿ ಹಾಕಿಕೊಳ್ಳುತ್ತವೆ.
ಇದನ್ನೂ ಓದಿ:ವಿಶ್ವದಾಖಲೆಗಾಗಿ 7 ದಿನಗಳ ಕಾಲ ಎಡೆಬಿಡದೆ ಕಣ್ಣೀರಿಟ್ಟ!
ಉಪ್ಪು ನೀರು :ಒಂದು ಲೋಟದಲ್ಲಿ ನೀರು ತೆಗೆದುಕೊಳ್ಳಿ, ಅದಕ್ಕೆ 2 ಚಮಚ ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಉಪ್ಪು ನೀರನ್ನು ಯಾವುದೇ ಸ್ಪ್ರೇ ಬಾಟಲಿಗೆ ಸುರಿಯಿರಿ ಮತ್ತು ನಂತರ ಅದನ್ನು ನೊಣಗಳ ಮೇಲೆ ಸಿಂಪಡಿಸಿ. ಇದರಿಂದ ನೊಣಗಳು ಮನೆಯಿಂದ ಓಡಿ ಹೋಗುತ್ತವೆ.
ಪುದೀನಾ, ತುಳಸಿ :ಮೊದಲು ಪುದೀನಾ, ತುಳಸಿ ನೀರನ್ನು ಸೇರಿಸಿ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ಅವುಗಳ ಮೇಲೆ ಸಿಂಪಡಿಸುವ ಮೂಲಕ ನೊಣಗಳನ್ನು ಮನೆಯಿಂದ ಓಡಿಸಬಹುದು.
ಇದನ್ನೂ ಓದಿ:ಬ್ಯೂಟಿ ಸಲೂನ್‌ಗಳನ್ನು ಮುಚ್ಚುವಂತೆ ತಾಲಿಬಾನ್ ಆದೇಶ; ಬೀದಿಗಿಳಿದ ಮಹಿಳೆಯರು
ಹಾಲು, ಮೆಣಸು :ಒಂದು ಲೋಟ ಹಾಲಿಗೆ ಒಂದು ಚಮಚ ಕರಿಮೆಣಸಿನ ಪುಡಿಯನ್ನು ಮಿಶ್ರಣ ಮಾಡಿ. ಇದಕ್ಕೆ 3 ಚಮಚ ಸಕ್ಕರೆ ಸೇರಿಸಿ. ನೀವು ಬಹಳಷ್ಟು ನೊಣಗಳನ್ನು ಕಂಡಲ್ಲೆಲ್ಲಾ ಈ ಹಾಲನ್ನು ಇರಿಸಿ. ನೊಣಗಳು ಅದರ ಕಡೆಗೆ ಬಂದು ಅಂಟಿಕೊಂಡು ಮುಳುಗುತ್ತವೆ.
VIDEO | ಆಹಾ ಚಿನ್ನದ ಇಡ್ಲಿ…; ನಾಲಿಗೆಗೆ ರುಚಿ..ಜೇಬಿಗೆ ಕತ್ತರಿ ಬೀಳುವುದು ಪಕ್ಕಾ!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:4 + 20 =
Remember me
