ಮನಿ ಮಾತು ಅಂಕಣದ ಮೂಲಕ ಈವರೆಗೂ ನಾವು ನಿಮ್ಮ ಹಲವಾರು ಆರ್ಥಿಕ ಗೊಂದಲಗಳಿಗೆ ಉತ್ತರಿಸುತ್ತಾ ಹಣ ಉಳಿಸುವುದು ಮತ್ತು ಬೆಳೆಸುವುದರ ಬಗ್ಗೆ ಬಹಳಷ್ಟು ಮಾಹಿತಿ ನೀಡಿದ್ದೇವೆ. ಈಗ ಇವೆಲ್ಲದರ ಜತೆಗೆ ಹಣ ಗಳಿಸಲು ಇರುವ ಉದ್ಯೋಗ ಮಾರ್ಗಗಳ ಬಗ್ಗೆ ನಾವು ತಿಳಿಸಲು ಹೊರಟಿದ್ದೇವೆ. ಮುಖ್ಯ ಉದ್ಯೋಗ ಅಥವಾ ಉದ್ದಿಮೆ ಜತೆಗೆ ಉಪ ಕಸುಬುಗಳನ್ನು ಮಾಡುತ್ತಾ ಆದಾಯ ಮೂಲಗಳನ್ನು ಹೆಚ್ಚಿಸಿಕೊಂಡು ಶ್ರೀಮಂತಿಕೆ ಹಾದಿಯಲ್ಲಿ ಸಾಗುವುದು ಹೇಗೆ ಎಂದು ತಿಳಿಸಿಕೊಡುವುದೇ ಈ ವಿಶೇಷ ಸರಣಿಯ ಮುಖ್ಯ ಉದ್ದೇಶ. ಹೌದು, ಹೆಚ್ಚು ಹಣ ಗಳಿಸಿದರೆ ತಾನೇ, ಉಳಿಸೋದು ಬೆಳೆಸೋದು ಎಲ್ಲ?
‘ಜೇನುತುಪ್ಪ’ ಎಂದಾಕ್ಷಣ ಬಾಯಲ್ಲಿ ‘ನೀರೂರುತ್ತಪ್ಪಾ’. ಜೇನುತುಪ್ಪದ ವೈಶಿಷ್ಟ್ಯತೆಯೇ ಅಂಥದ್ದು. ‘ಸಜ್ಜನರ ಸಂಘವದು ಹೆಜ್ಜೇನು ಸವಿದಂತೆ’ ಅಂತ ಸುಮ್ನೆ ಹೇಳಿದ್ದಾರೇನು ದೊಡ್ಡವರು? ಜೇನು ಸವಿಯೋಕೆ ಇಷ್ಟ ಆದರೆ, ಜೇನು ಸಾಕಾಣಿಕೆ ತುಂಬಾ ಕಷ್ಟ ಅಂತ ನೀವೇನಾದ್ರು ಅಂದುಕೊಂಡಿದ್ರೆ, ನೀವು ಈ ಅಂಕಣವನ್ನು ತಪ್ಪದೇ ಓದಬೇಕು.
ಜೇನು ತುಪ್ಪಕ್ಕಿದೆ ದೊಡ್ಡ ಮಾರುಕಟ್ಟೆ:ದಿನದಿಂದ ದಿನಕ್ಕೆ ಜೇನುತುಪ್ಪದ ಬೇಡಿಕೆ ಹೆಚ್ಚಾಗುತ್ತಲೇ ಇದೆ. ಹೆಸರೇ ಕೇಳಿರದ ರೋಗಗಳು ವಕ್ಕರಿಸುತ್ತಿರುವ ಈ ಕಾಲದಲ್ಲಿ, ಅನೇಕ ರೋಗಗಳಿಗೆ ಜೇನುತುಪ್ಪ ಮದ್ದಾಗಬಲ್ಲದು ಎಂಬುದು ಎಲ್ಲರ ಅರಿವಿಗೆ ಬಂದಿದೆ. ಮುಂಬರುವ ದಿನಗಳಲ್ಲಿ ಹೋಟೆಲ್, ರೆಸ್ಟೋರೆಂಟ್ ಮತ್ತು ವಿಮಾನದಲ್ಲಿ ನೀಡುವ ಟೀ, ಕಾಫಿಗೆ ಸಕ್ಕರೆ ಬದಲು ಜೇನು ತುಪ್ಪ ಬಳಕೆ ಮಾಡಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿಕೊಂಡಿದೆ. ಪ್ರತಿ ವರ್ಷ ನಮ್ಮದೇಶದಲ್ಲಿ ಸುಮಾರು 3,000 ಕೋಟಿ ರೂ. ಮೌಲ್ಯದ ಜೇನುತುಪ್ಪ ಬಳಕೆಯಾಗುತ್ತಿದೆ. ಇದು ನಮ್ಮ ಭಾರತ ದೇಶದ ಲೆಕ್ಕಾಚಾರವಾದರೆ, ಜಾಗತಿಕವಾಗಿ ವರ್ಷಕ್ಕೆ 75,000 ಕೋಟಿ ರೂ. ಮೌಲ್ಯದ ಜೇನುತುಪ್ಪ ಮಾರಾಟವಾಗುತ್ತಿದೆ. ಇಷ್ಟು ದೊಡ್ಡ ಮಾರುಕಟ್ಟೆಗೆ ಭಾರತದ ಜೇನು ತುಪ್ಪದ ರಫ್ತಿನ ಕೊಡುಗೆ 800 ಕೋಟಿ ರೂ. ಮಾತ್ರ. ಅಂದ್ರೆ ಜೇನು ಸಾಕಣೆ ಮಾಡಬೇಕು, ಅದರಿಂದ ಒಳ್ಳೆಯ ಆದಾಯ ಗಳಿಸಬೇಕು ಎನ್ನುವವರಿಗೆ ಎಷ್ಟು ದೊಡ್ಡ ಮಾರುಕಟ್ಟೆ ಇದೆ ಅಂದಾಜು ಮಾಡಿಕೊಳ್ಳಿ.ಇದನ್ನೂ ಓದಿ:‘ಮತ್ತೊಮ್ಮೆ ಲಾಕ್​ಡೌನ್​ ಹೇರುವ ಅನಿವಾರ್ಯತೆ ಎದುರಾಗುತ್ತಿದೆ…ನಮಗೂ ಬೇರೆ ಆಯ್ಕೆ ಇಲ್ಲ’
ಕಡಿಮೆ ಬಂಡವಾಳ, ಬಂಪರ್ ಆದಾಯ:ಜೇನು ಕೃಷಿಯಲ್ಲಿ ವರ್ಷಕ್ಕೆ ಲಕ್ಷಗಳಿಂದ ಹಿಡಿದು ಕೋಟಿ ರೂ.ವರೆಗೆ ಗಳಿಸಿರುವ ಸಾಕಷ್ಟು ಮಂದಿ ನಮ್ಮ ನಡುವೆ ಇದ್ದಾರೆ. ಜೇನು ಸಾಕಣೆಯನ್ನು ಮುಖ್ಯ ಉದ್ದಿಮೆಯನ್ನಾಗಿ ಮಾಡಿಕೊಂಡಿರುವ ಮಂದಿ ವರ್ಷಕ್ಕೆ ಒಂದು ಕೋಟಿಯಿಂದ ಎರಡು ಕೋಟಿ ರೂ.ವರೆಗೆ ಗಳಿಸಿರುವ ಪ್ರತ್ಯಕ್ಷ ನಿದರ್ಶನಗಳಿವೆ. ಇನ್ನು ಜೇನು ಸಾಕಣೆಯನ್ನು ಕೃಷಿ ಜತೆಗೆ ಮುಖ್ಯ ಉಪ ಕಸುಬನ್ನಾಗಿ ಮಾಡಿಕೊಂಡಿರುವ ಕೆಲ ಮಂದಿ ವರ್ಷಕ್ಕೆ 20ರಿಂದ 30 ಲಕ್ಷ ರೂ. ಗಳಿಸುತ್ತಿದ್ದಾರೆ. ಸಣ್ಣ ಮಟ್ಟದಲ್ಲಿ, ಅಂದರೆ ಐದರಿಂದ ಹತ್ತು ಜೇನು ಪೆಟ್ಟಿಗೆ ಇಟ್ಟುಕೊಂಡಿರುವ ಮಂದಿ ಹೆಚ್ಚು ಪರಿಶ್ರಮವಿಲ್ಲದೆ ತಿಂಗಳಿಗೆ ಐದಾರು ಸಾವಿರ ರೂ. ಗಳಿಸುತ್ತಿದ್ದಾರೆ. ಇದಕ್ಕೆಲ್ಲಾ ಸಾಕಷ್ಟು ಬಂಡವಾಳ ಬೇಕಲ್ಲ ಅಂತ ನೀವೇನಾದ್ರು ಅಂದುಕೊಂಡ್ರೆ ಅದು ತಪ್ಪು ಕಲ್ಪನೆ. ಜೇನು ಸಾಕಾಣಿಕೆಯ ವಿಶೇಷತೆಯೇ ಅಂಥದ್ದು. ಇದರಲ್ಲಿ ಇತರ ಕಸುಬುಗಳಲ್ಲಿ ಇರುವಂತೆ ಹೆಚ್ಚು ನಿರ್ವಹಣೆ ಖರ್ಚು ಇರುವುದಿಲ್ಲ. ಯಾಕಂದ್ರೆ, ಜೇನು ಪ್ರಕೃತಿಮಾತೆಯಿಂದಲೇ ಪೋಷಿಸಲ್ಪಡುತ್ತೆ. ಇದಕ್ಕೆ ಯಾವುದೇ ರೀತಿಯ ಪಕ್ವವಾದ ಸ್ಥಳದ ಅಗತ್ಯವೂ ಇಲ್ಲ. ಹೂದೋಟ ಅಥವಾ ಜೇನಿಗೆ ಮಕರಂದವನ್ನು ಸವಿಯಲು ಪೂರಕವಾದ ಸ್ಥಳವಾದರೆ ಸಾಕು. ನಿಮ್ಮ ಜಮೀನಿನ ಒಂದು ಭಾಗದಲ್ಲೇ ನಿಮ್ಮ ಇತರ ಕೃಷಿಯ ಜತೆಗೆ ಜೇನು ಸಾಕಾಣಿಕೆ ಸಾಧ್ಯ.
ಜೇನು ತುಪ್ಪದ ಉಪ ಉತ್ಪನ್ನಗಳು:ಜೇನು ತುಪ್ಪದ ಮಾರಾಟದ ಜತೆಗೆ ಉಪ ಉತ್ಪನ್ನಗಳ ತಯಾರಿಕೆಯಿಂದ ಜೇನು ಕೃಷಿಯಲ್ಲಿ ಲಾಭ ಗಳಿಸಲು ಸಾಧ್ಯವಿದೆ. ಜೇನು ಸಾಕುವ ಜೇನು ಪೆಟ್ಟಿಗೆ, ಹುಳು ಮಾರಾಟ, ಪರಾಗ, ಮೇಣ, ನ್ಯಾಚುರಲ್ ವ್ಯಾಸಲೀನ್ ಮಾರಾಟದಿಂದ ಹಣ ಗಳಿಸುವ ಅವಕಾಶವಿದೆ. ಹನಿ ಜಾಂ, ಗಾರ್ಲಿಕ್ ಹನಿ, ಅಕೇಶಿಯಾ ಹನಿ, ರಾಯಲ್ ಜೆಲ್ಲಿ ಹನಿ, ಜಿಂಜರ್ ಹನಿ ಸೇರಿ ಹಲವು ಮಾದರಿಯ ಜೇನು ತುಪ್ಪ ಉತ್ಪಾದಿಸಬಹುದಾಗಿದೆ.
ಸರ್ಕಾರದಿಂದ ಸಿಗುವ ಸವಲತ್ತುಗಳು:ಜೇನು ಸಾಕಾಣಿಕೆಗೆ ಸರ್ಕಾರದಿಂದಲೂ ಬಹಳಷ್ಟು ಸವಲತ್ತುಗಳಿವೆ. ಜೇನು ಸಾಕಣೆ ಮಾಡುವ ಸಣ್ಣ ರೈತರಿಗೆ ತೋಟಗಾರಿಕೆ ಇಲಾಖೆ ಶೇ.75 ಸಬ್ಸಿಡಿ ನೀಡುತ್ತಿದೆ. ಎಸ್ಸಿ-ಎಸ್ಟಿ ಸಮುದಾಯದವರಿಗೆ ಶೇ.90 ಸಹಾಯಧನದ ಸೌಲಭ್ಯವೂ ಇದೆ. ಜೇನು ಸಾಕಣೆಗೆ ಪೋ›ತ್ಸಾಹ ನೀಡಲು ಈ ಬಾರಿ ತೋಟಗಾರಿಕೆ ಇಲಾಖೆ 5 ಕೋಟಿ ರೂ. ಅನುದಾನ ಮೀಸಲಿಟ್ಟಿದೆ. ಜೇನು ತುಪ್ಪ ಸಂಸ್ಕರಣೆ ಘಟಕ ನಿರ್ವಣಕ್ಕೂ ನೆರವು ಕಲ್ಪಿಸಲಾಗಿದೆ. ರಾಷ್ಟ್ರೀಯ ತೋಟಗಾರಿಕೆ ಮಿಷನ್ ಹಾಗೂ ಖಾದಿ ಆಯೋಗವೂ ಜೇನು ಕೃಷಿಗೆ ಬಹಳ ದೊಡ್ಡಮಟ್ಟದಲ್ಲಿಯೇ ನೆರವು ನೀಡುತ್ತಿದೆ. ಖುಷಿ ವಿಷಯ ಏನಂದ್ರೆ, ತೋಟಗಾರಿಕೆ ಇಲಾಖೆಯ ನೆರವಿನ ಜತೆ ಈ ಬಾರಿ ಕೇಂದ್ರ ಸರಕಾರದ ಆತ್ಮ ನಿರ್ಭರ ಭಾರತ ಯೋಜನೆಯಲ್ಲೂ ಜೇನು ಕೃಷಿಗೆ ನೆರವು ಸಿಗುವ ನಿರೀಕ್ಷೆಯಿದೆ. ಮತ್ತೊಂದು ವಿಶೇಷತೆ ಎಂದರೆ ಜೇನು ಸಾಕಣೆಯಿಂದ ಬೆಳೆಯ ಪ್ರಮಾಣ ಸರಾಸರಿ ಶೇ.20ರಿಂದ 30ರ ವರೆಗೆ ಹೆಚ್ಚಳವಾಗುತ್ತದೆ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರ ಜೇನು ಕೃಷಿಗೆ ಸಾಕಷ್ಟು ನೆರವು ನೀಡುತ್ತಿದೆ. ‘ಸವಿದವನೇ ಬಲ್ಲ ಜೇನಿನ ಸವಿಯ’ ಎಂಬ ಮಾತಂತೆ ಜೇನಿನ ಸವಿಯನ್ನು ಎಲ್ಲರಿಗೂ ಉಣಬಡಿಸಲು ಸರ್ಕಾರವೂ ಸಿದ್ಧತೆ ನಡೆಸುತ್ತಿರುವುದು ನಿಜವಾಗಿಯೂ ಸಿಹಿಯ ವಿಚಾರವೇ ಸರಿ.ಇದನ್ನೂ ಓದಿ:ಐಪಿಎಲ್​ ಕಾಮೆಂಟರಿ ವಿವಾದ; ಗಾವಸ್ಕರ್‌ ಬೆಂಬಲಕ್ಕೆ ನಿಂತ ಫಾರೂಖ್​ ಇಂಜಿನಿಯರ್ ಹೇಳಿದ್ದೇನು?
ಜೇನು ಕೃಷಿ ಮಾಡಬೇಕೇ? ಫೈನಾನ್ಶಿಯಲ್ ಫ್ರೀಡಂ ಆಪ್​ನಲ್ಲಿದೆ ಕೋರ್ಸ್:ಜೇನುಸಾಕಣೆ ಕೃಷಿ ಬಗ್ಗೆ ತಿಳಿದಿಲ್ಲ ಆರಂಭಿಸುವುದು ಹೇಗೆ? ಎಂಬ ಗೊಂದಲವಿರುವ ಜನರಿಗಾಗಿಯೇ ಇಂಡಿಯನ್ ಮನಿ ಡಾಟ್ ಕಾಂನ ಫೈನಾನ್ಶಿಯಲ್ ಫ್ರೀಡಂ ಆಪ್​ನಲ್ಲಿ ಜೇನು ಸಾಕಣೆಯಲ್ಲಿ ಯಶಸ್ವಿಯಾಗುವುದು ಹೇಗೆ ಎನ್ನುವ ಬಗ್ಗೆ ವಿವರವಾದ ಕೋರ್ಸ್ ಮಾಡಲಾಗಿದೆ. ಈ ಕೋರ್ಸ್​ನಲ್ಲಿ ಜೇನು ಸಾಕಾಣಿಕೆಯಲ್ಲೇ ಹೆಸರು ಗಳಿಸಿ ಸಾಕಷ್ಟು ಹಣ ಸಂಪಾದಿಸುತ್ತಿರುವ ಮೆಂಟರ್ಸ್ ನಿಮಗೆ ಜೇನು ಸಾಕಾಣಿಕೆ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತಾರೆ. ಮತ್ತೇಕೆ ತಡ? ಈಗಲೇ ಫೈನಾನ್ಸಿಯಲ್ ಫ್ರೀಡಂ ಆಪ್​ಅನ್ನು ಡೌನ್ಲೋಡ್ ಮಾಡಿ ನಿಮ್ಮ ಸ್ವಂತ ಉದ್ಯೋಗವನ್ನು ಶುರು ಮಾಡಿ.
ಜೇನುತುಪ್ಪ ತನ್ನ ಸ್ವಾದಿಷ್ಟವಾದ ರುಚಿಯಿಂದ ಮಾತ್ರವಲ್ಲದೆ, ಔಷಧೀಯ ಗುಣಗಳಿಂದಲೂ ಬಹಳ ಜನಪ್ರಿಯವಾಗಿದೆ. ತೂಕ ನಿರ್ವಹಣೆ, ರೋಗನಿರೋಧಕ ಶಕ್ತಿ ಹೆಚ್ಚಳ, ಚರ್ಮದ ತೇವಾಂಶ ನಿರ್ವಹಣೆ, ಸ್ಮರಣಾಶಕ್ತಿ ಹೆಚ್ಚಳ, ಶೀತ, ಸೈನಸ್ ಮತ್ತು ಕೆಮ್ಮಿಗೆ ರಾಮಬಾಣ, ತಲೆ ಹೊಟ್ಟಿನ ಸಮಸ್ಯೆ ನಿವಾರಣೆ ಜತೆಗೆ ನಿದ್ರಾಹೀನತೆಗೂ ಮದ್ದು ಜೇನುತುಪ್ಪ.
ಮನಿಮಾತು| ಅಕ್ಕನ ವೇತನ ಆರು ಲಕ್ಷ ರೂಪಾಯಿ ಇದ್ದು, ಆದಾಯ ತೆರಿಗೆ ಪಾವತಿಸಬೇಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − seven =
Remember me
