ಬೆಂಗಳೂರು:ವಾಟ್ಸ್​ಆ್ಯಪ್​ ಮೂಲಕ ಡಿಜಿಟಲ್​ ಪೇಮೆಂಟ್​ ಇದೀಗ ಭಾರತದಲ್ಲೂ ಆರಂಭವಾಗಿದೆ. ಇಷ್ಟು ದಿನ ಕೇವಲ ಸಂವಹನಕ್ಕೆ ಬಳಕೆಯಾಗುತ್ತಿದ್ದ ವಾಟ್ಸ್​ಆ್ಯಪ್​ ಇದೀಗ ಹಣ ಪಾವತಿಗೂ ಬಳಕೆಯಾಗಲಿದೆ. ಅಷ್ಟಕ್ಕೂ ಈ ವಾಟ್ಸ್​ಆ್ಯಪ್​ನಲ್ಲಿ ಹಣ ಕಳುಹಿಸುವುದು ಹೇಗೆ? ಈ ಪೇಮೆಂಟ್​ ಮಾರ್ಗವನ್ನು ಬಳಸುವುದು ಹೇಗೆ ಎನ್ನುವ ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಇದನ್ನೂ ಓದಿ:ಕೈಲಾಸಕ್ಕೆ ಕಾಸಿಲ್ಲದೆ ವೀಸಾ ತೆಗೆದುಕೊಂಡು ಬನ್ನಿ! ಭಕ್ತರಿಗೆ ಚಳಿಗಾಲದ ಆಫರ್​ ನೀಡಿದ ನಿತ್ಯಾನಂದ ಸ್ವಾಮಿ!
ಬಳಕೆ ಹೇಗೆ?– ಪ್ಲೇಸ್ಟೋರ್​ನಲ್ಲಿ ವಾಟ್ಸ್​ಆ್ಯಪ್​ ಅನ್ನು ಅಪ್​ಡೇಟ್​ ಮಾಡಿಕೊಳ್ಳಿ– ಚಾಟ್​ ವಿಂಡೋನ ಬಡ ಮೇಲ್ಭಾಗದಲ್ಲಿ ಕಾಣುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್​ ಮಾಡಿ– ಪೇಮೆಂಟ್​ ವಿಂಡೋ ತೆರೆದುಕೊಳ್ಳುತ್ತದೆ. ಅದರಲ್ಲಿ ಆ್ಯಡ್​ ಪೇಮೆಂಟ್​ ಮೇಲೆ ಕ್ಲಿಕ್ಕಿಸಿ– ಅಕ್ಸೆಪ್ಟ್​ ಮೇಲೆ ಕ್ಲಿಕ್ಕಿಸಿ– ಬ್ಯಾಂಕ್​ಗಳ ಪಟ್ಟಿ ತೆರೆದುಕೊಳ್ಳುತ್ತದೆ. ನಿಮ್ಮ ಬ್ಯಾಂಕ್​ ಆಯ್ಕೆ ಮಾಡಿ– ಫೋನ್​ ನಂಬರ್​ ಮೂಲಕ ಬ್ಯಾಂಕ್​ ಖಾತೆ ಖಾತರಿ ಪಡಿಸಿಕೊಳ್ಳಿ– ನಿಮ್ಮ ಖಾತೆಯನ್ನು ದೃಢೀಕರಿಸಲು ವಾಟ್ಸ್​ಆ್ಯಪ್​ ಟೆಕ್ಸ್ ಮೆಸೇಜ್​ ಕಳುಹಿಸಲು ಕೇಳುತ್ತದೆ. ಅದಕ್ಕೆ ಅನುಮತಿ ನೀಡಿ– ಮತ್ತೊಮ್ಮೆ ಫೋನ್​ ನಂಬರ್​ ಕೇಳಲಾಗುತ್ತದೆ. ನಂಬರ್​ ಹಾಕಿದ ನಂತರ ನಿಮ್ಮ ಖಾತೆ ದೃಢೀಕರಣವಾಗುತ್ತದೆ– ಡನ್​ ಮೇಲೆ ಕ್ಲಿಕ್ಕಿಸಿ, ನಂತರ ನೀವು ಪೇಮೆಂಟ್​ ಪೇಜ್​ಗೆ ಅಕ್ಸೆಸ್​ ಪಡೆಯಬಹುದು
ಇದನ್ನೂ ಓದಿ:ಮಮತಾ ಬ್ಯಾನರ್ಜಿಗೆ ಮತ್ತೆ ಶಾಕ್​! ಸುವೇಂದು ನಂತರ ಟಿಎಂಸಿಯಿಂದ ಮತ್ತೆರೆಡು ವಿಕೆಟ್​ ಔಟ್​!
ಪಾವತಿ ಹೇಗೆ?– ಯಾರಿಗೆ ಹಣ ಕಳುಹಿಸಬೇಕೋ ಅವರ ಚಾಟ್​ ವಿಂಡೋ ತೆರೆಯಿರಿ– ಕ್ಲಿಪ್​ ಐಕಾನ್​ ಮೇಲೆ ಕ್ಲಿಕ್ಕಿಸಿ– ರೂಪಾಯಿ ಐಕಾನ್​ ಮೇಲೆ ಕ್ಲಿಕ್ಕಿಸಿ– ಎಷ್ಟು ಹಣ ಕಳುಹಿಸಬೇಕು ಎನ್ನುವುದನ್ನು ನಮೂದಿಸಿ– ನಿಮ್ಮ ಯುಪಿಐ ಪಿನ್​ ನಮೂದಿಸಿ– ಹಣ ವರ್ಗಾವಣೆ ಸಂದೇಶದಿಂದ ಖಾತರಿ ಪಡಿಸಿಕೊಳ್ಳಿ
ಫ್ರೆಂಡ್​ಗೆ ದುಡ್ಡು ಕಳುಹಿಸಬೇಕಾದ್ರೆ ಇನ್ನು ವಾಟ್ಸ್ಆ್ಯಪ್​ ಮಾಡಿ!

ಯಾರದ್ದೋ ಕಿರುಕುಳಕ್ಕೆ ಹೆದರಿ ದಂಪತಿ ನಾಪತ್ತೆ! 3 ಲಕ್ಷ ಡ್ರಾ ಮಾಡಿದವರು ಡೆತ್​ ನೋಟ್​ ಬರೆದಿದ್ದೇಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 4 =
Remember me
