ಬೆಂಗಳೂರು:ಬಿಜೆಪಿ ಅಧಿಕಾರಕ್ಕೆ ಬಂದು, ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನದಿಂದಲೂ ಒಂದಲ್ಲಾ ಒಂದು ಸಮಸ್ಯೆ ಎದುರಿಸುತ್ತಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇದೀಗ ಕರೊನಾ ಬಿಕ್ಕಟ್ಟನ್ನು ಸಮರ್ಥವಾಗಿ ನಿಭಾಯಿಸಿದ್ದು ಇದರಿಂದ ಅವರ ವರ್ಚಸ್ಸು ಹೆಚ್ಚಿದೆ.
ಸ್ವತಂತ್ರ ಮನಸ್ಸಿನ ಹಾಗೂ ನಿಷ್ಠಾವಂತರನ್ನು ಸದಾ ಕಾಪಾಡಿಕೊಳ್ಳುವ ವ್ಯಕ್ತಿ ಎಂದೇ ಹೆಸರು ಪಡೆದಿರುವ 78 ವರ್ಷದ ಯಡಿಯೂರಪ್ಪ ಈ ಬಾರಿ ಸಿಎಂ ಆದಾಗಿನಿಂದಲೂ ಹತ್ತು ಹಲವು ಸಮಸ್ಯೆಗಳನ್ನು ನಿಭಾಯಿಸಬೇಕಾದ ಅನಿವಾರ್ಯತೆಗೆ ಸಿಲುಕಿದರು.
ಆಪರೇಷನ್ ಕಮಲ ಮಾಡಿ ಸಿಎಂ ಗದ್ದುಗೆ ಏರಿದ್ದಾರೆ ಎಂದು ವಿರೋಧ ಪಕ್ಷಗಳಿಂದ ತೀವ್ರ ಟೀಕೆಯನ್ನು ಆರಂಭದಲ್ಲೇ ಎದುರಿಸಬೇಕಾಯಿತು.
ಇದನ್ನೂ ಓದಿ:ಆಟೋ, ಟ್ಯಾಕ್ಸಿ ಚಾಲಕರಿಗೆ ಗುಡ್ ನ್ಯೂಸ್: 5 ಸಾವಿರ ರೂ. ಪಡೆಯಲು ಪ್ಯಾನ್, ಫಿಟ್‌ನೆಸ್ ಬೇಡ
ಇದನ್ನು ನಿಭಾಯಿಸುವಷ್ಟೊತ್ತಿಗೇ ಸ್ವಪಕ್ಷದೊಳಗೆ ಆಂತರಿಕ ಬಿಕ್ಕಟ್ಟು ತಲೆದೋರಿತ್ತು. ಸಚಿವ ಸ್ಥಾನ ಸಿಗದ ಕೆಲವು ಹಿರಿಯ ನಾಯಕರು ಬಿಎಸ್‌ವೈ ವಿರುದ್ಧ ಬಂಡಾಯ ಎದ್ದಿದ್ದರು. ಅದನ್ನೂ ಬಿಎಸ್‌ವೈ ನಿಭಾಯಿಸಬೇಕಾಗಿ ಬಂತು.
ಇದಾದ ನಂತರ ರಾಜ್ಯದ ಸಚಿವ ಸಂಪುಟ ವಿಸ್ತರಣೆಗೆ ಕೇಂದ್ರ ಸರ್ಕಾರ ಅನುಮತಿ ನೀಡಲು ವಿಳಂಬ ಮಾಡಿತು. ಇದು ಕೂಡ ಯಡಿಯೂರಪ್ಪ ಅವರನ್ನು ಮುಜುಗರಕ್ಕೆ ಈಡು ಮಾಡಿತು. ಇದರಿಂದಾಗಿ 20 ದಿನ ಸರ್ಕಾರವನ್ನು ಒನ್ ಮ್ಯಾನ್ ಕ್ಯಾಬಿನೆಟ್‌ನಂತೆ ನಡೆಸಿದರು. ಇದೇ ಸಮಯದಲ್ಲಿ ತಲೆದೋರಿದ ಉತ್ತರ ಕರ್ನಾಟಕದ ಪ್ರವಾಹದ ಬಿಕ್ಕಟ್ಟನ್ನು ಒಂಟಿಯಾಗಿಯೇ ನಿರ್ವಹಿಸಬೇಕಾಗಿ ಬಂತು.
ಇದನ್ನೂ ಓದಿ:ಕ್ವಾರಂಟೈನ್​ ಗೋಲ್​ಮಾಲ್​? ಒಳ್ಳೆ ಸೌಲಭ್ಯ ಮಾತ್ರ ಕೇಳ್ಲೇಬೇಡಿ, ದುಡ್ಡು ಕೊಟ್ರೆ ಹೊರಗಡೆ ಆರಾಮಾಗಿ ಹೋಗಿ…
ಇನ್ನೇನು ಎಲ್ಲವೂ ಒಂದು ಹಂತಕ್ಕೆ ಬಂತು ಎನ್ನುವಾಗಲೇ ದೇಶದಲ್ಲಿ ಮೊದಲ ಕರೊನಾ ಸಾವಿನ ಪ್ರಕರಣ ಕರ್ನಾಟಕದಲ್ಲಿಯೇ (ಕಲಬುರಗಿ) ಪತ್ತೆಯಾಯಿತು. ನಂತರದ ದಿನಗಳಲ್ಲಿ ರಾಜ್ಯದ ಇತರ ಜಿಲ್ಲೆಗಳಿಂದಲೂ ಕರೊನಾ ಪ್ರಕರಣಗಳು ವರದಿಯಾಗತೊಡಗಿದವು. ಇದು ಮುಖ್ಯಮಂತ್ರಿಯ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿತು.
ನಂತರ ಬೇರೆ ರಾಜ್ಯಗಳಿಂದ ಬರುತ್ತಿರುವವರಿಂದ ಕರೊನಾ ಸೋಂಕು ಹೆಚ್ಚುತ್ತಿದೆ ಎಂದು ತಿಳಿಯುತ್ತಲೇ ಕೇರಳ ಮತ್ತಿತರ ಕೆಲವು ರಾಜ್ಯಗಳ ಗಡಿಯನ್ನು ಮುಚ್ಚಿಸಿದ್ದು ವಿವಾದಕ್ಕೀಡಾಯಿತು. ಇದರಿಂದಾಗಿ ಗಡಿ ಭಾಗದಲ್ಲಿ ಇರುವ ಕರ್ನಾಟಕದ ವಾಸಿಗಳಿಂದ ಅವರು ಪ್ರತಿರೋಧ ಎದುರಿಸಬೇಕಾಯಿತು.
ಇದನ್ನೂ ಓದಿ:ಸಚಿವ ಸುಧಾಕರ್​ಗೆ ರಾತ್ರಿ ನಿದ್ದೆ ಬರ್ತಿಲ್ವಂತೆ! ಯಾಕೆ?
ನಂತರ, ವಿವಿಧ ಕಾರ್ಯಪಡೆಗಳನ್ನು ರಚಿಸುವ ಮೂಲಕ ಕರೊನಾ ನಿಯಂತ್ರಣಕ್ಕೆ ಕ್ರಮ ತೆಗೆದುಕೊಂಡರು. ತಬ್ಲಿಘಿಗಳು ಕರೊನಾ ಸೋಂಕು ಹರಡುವುದು ಹೆಚ್ಚುತ್ತಿದ್ದಂತೆಯೇ ಮುಸ್ಲಿಂ ಸಮುದಾಯದವರ ವಿರುದ್ಧ ಆಕ್ರೋಶ ಹೆಚ್ಚಾದಾಗ ಮುಖ್ಯಮಂತ್ರಿ ಮಧ್ಯಪ್ರವೇಶಿಸಿದರು. ‘ಕೆಲವರ ತಪ್ಪಿಗೆ ಇಡೀ ಸಮುದಾಯವನ್ನು ದೂಷಿಸಬೇಡಿ’ ಎಂದು ತಾಕೀತು ಮಾಡಿದರು. ಇದರಿಂದಾಗಿ ಅವರು ತಮ್ಮದೇ ಪಕ್ಷದ ಕೆಲವು ನಾಯಕರು ಮತ್ತು ಕಾರ್ಯಕರ್ತರ ವಿರೋಧ ಎದುರಿಸಬೇಕಾಯಿತು. ಆದರೂ ಎದೆಗುಂದದ ಬಿಎಸ್‌ವೈ ತಮ್ಮ ಮಾತನ್ನು ಹಿಂದಕ್ಕೆ ಪಡೆಯಲಿಲ್ಲ.
ಇವೆಲ್ಲದರ ನಡುವೆಯೇ ಇದೀಗ ಕರೊನಾ ಬಿಕ್ಕಟ್ಟನ್ನು ಅವರು ನಿಭಾಯಿಸುತ್ತಿರುವ ರೀತಿ, ಅದಕ್ಕಾಗಿ ಅವರು ತೆಗೆದುಕೊಳ್ಳುತ್ತಿರುವ ಕ್ರಮ ಖುದ್ದು ಅವರ ಪಕ್ಷದವರನ್ನೇ ದಂಗಾಗಿಸಿದೆ. ಈ ಮೂಲಕ ಅವರು ಅಭಿಪ್ರಾಯಭೇದದ ಹೆಸರಿನಲ್ಲಿ ಪಕ್ಷದ ಒಳಗಿರುವವರೇ ಸೃಷ್ಟಿಸುವ ಭಿನ್ನಮತವನ್ನೂ ಮಟ್ಟ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ ಇಳಿ ವಯಸ್ಸನ್ನೂ ಮರೆತು ಸದಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಅವರ ಬಗ್ಗೆ ಶ್ಲಾಘನೆ ವ್ಯಕ್ತವಾಗುತ್ತಿದೆ.
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:ten − eight =
Remember me
