Mumbai: ನಾವು ಬಸ್​​ ಅಥವಾ ರೈಲಿನಲ್ಲಿ ತೆರಳುವಾಗ ಸಾಮಾನ್ಯವಾಗಿ ಸೀಟಿಗಾಗಿ ಪೇಚಾಡುವ ಜನರನ್ನ ನೋಡಿರುತ್ತೇವೆ. ಬಸ್​​ನ ಕಿಟಕಿಯೊಳಗಿಂದಲೂ ಪ್ರಯಾಣಿಕರು ನುಗ್ಗಿದ ದೃಶ್ಯಗಳು ಈಗಾಗಲೇ ಸಾಕಷ್ಟು ಬಾರಿ ವೈರಲ್​ ಆಗಿದೆ. ಇದೀಗ ಮುಂಬೈನ ರೈಲು ನಿಲ್ದಾಣದ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ರೈಲಿನಲ್ಲಿ ಜನರು ಸೀಟನ್ನು ಭದ್ರ ಪಡಿಸಿಕೊಳ್ಳೋಕೆ ರೈಲು ನಿಲ್ದಾಣದಲ್ಲಿ ನಿಲ್ಲಬೇಕಷ್ಟ ಅದಕ್ಕೂ ಮುನ್ನವೇ ಚಂಗನೆ ರೈಲಿನ ಬೋಗಿಯೊಳಗೆ ಎರಗಿದ್ದಾರೆ. ಇದು ಜನರ ಅಶಿಸ್ತಿನ ಪರಮಾವಧಿಯನ್ನ ತೋರಿಸಿದೆ.
ವಿಡಿಯೋದಲ್ಲಿರುವ ದೃಶ್ಯಾವಳಿಯ ಮಾಹಿತಿ:
ರೈಲು ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆಯೇ ಸ್ವಯಂಚಾಲಿತ ಬಾಗಿಲುಗಳು ಇನ್ನೇನು ಪೂರ್ತಿಯಾಗಿ ತೆರೆದಿಲ್ಲ. ಅದಕ್ಕು ಮೊದಲೇ ಬ್ಯಾಗ್​ ಹಾಕಿದ್ದ ಪ್ರಯಾಣಿಕನೊಬ್ಬ ರೈಲಿಗೆ ಎಂಟ್ರಿ ಕೊಟ್ಟಿದ್ದಾನೆ. ಓರ್ವ ವ್ಯಕ್ತಿ ಎರಗಿದ್ದೇ ತಡ ಉಳಿದವರೆಲ್ಲರೂ ನಾ ಮುಂದು ತಾಮುಂದೆದಂದು ಒಂದೇ ಸಮನೆ ರೈಲಿನೊಳಗೆ ನುಗ್ಗಿದ್ದಾರೆ. ಸಾಮೂಹಿಕ ಗುಂಪಾಗಿ ಒಬ್ಬರೊನ್ನೊಬ್ಬರು ಕೆಡವಿ ಸೀಟ್​​ ಪಡೆಯುವ ಉದ್ದೇಶದಿಂದ ಅಶಿಸ್ತು ಪ್ರದರ್ಶಿಸಿದ್ದಾರೆ.
ಬಾಗಿಲು ಸ್ವಲ್ಪ ತೆರೆದುಕೊಂಡ ತಕ್ಷಣ, ಜನರು ಅದನ್ನು ಪಕ್ಕಕ್ಕೆ ತಳ್ಳಲು ಪ್ರಯತ್ನಿಸಿದ್ದು, ಮುಂಬೈ ರೈಲಿನಲ್ಲಿ ಇದು ಸಾಮಾನ್ಯವಾಗಿ ಕಂಡು ಬರುವಂತಹ ದೃಶ್ಯವೆಂದು ನೆಟ್ಟಿಗರೊಬ್ಬರು ಕಾಮೆಂಟ್​​ ಮಾಡಿದ್ದಾರೆ. ಇನ್ನು ಈ ವಿಡಿಯೋ ಜನರು ದಿನನಿತ್ಯ ಪ್ರಯಾಣಿಸುವಾಗಿ ತೋರುವ ಸಾಹಸಕಾರಿ ಸ್ಟಂಟ್​​​ಗಳ ದೃಶ್ಯವನ್ನೂ ತೋರಿದಂತಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, 19 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ.ದೂರದ ಪ್ರಯಾಣದ ಸಮಯದಲ್ಲಿ ಕಿಕ್ಕಿರಿದ ಕಂಪಾರ್ಟ್‌ಮೆಂಟ್‌ಗಳಲ್ಲಿ ನಿಲ್ಲುವುದನ್ನು ತಪ್ಪಿಸಲು ಪ್ರಯಾಣಿಕರಿಗೆ ರೈಲಿನಲ್ಲಿ ಧಾವಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಮತ್ತೊಬ್ಬ ವ್ಯಕ್ತಿ ಕಾಮೆಂಟ್​ ಮಾಡಿದ್ದಾರೆ.
ಇನ್ನು ದಿನನಿತ್ಯ ಕೆಲಸಕ್ಕೆ ತೆರಳುವಂತವರಿಗೆ ಬೇರೆ ಯಾವುದೇ ಆಯ್ಕೆ ಇಲ್ಲ. ಅವರು ಈ ರೀತಿಯಾಗಿಯೇ ಆಫೀಸ್​​ ಅಥವಾ ಶಾಲೆಗೆ ತೆರಳಬೇಕು ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್​ ಮಾಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 3 =
Remember me
