ದೇಶಾದ್ಯಂತಏಪ್ರಿಲ್ 14ರವರೆಗೆ ದಿಗ್ಬಂಧನ ಘೋಷಿಸಲಾಗಿರುವ ಕಾರಣದಿಂದ ಆ ಬಳಿಕವಷ್ಟೇ ಶಾಲಾ-ಕಾಲೇಜು ಪುನಾರಂಭದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ ಪೋಕ್ರಿಯಾಲ್​ ತಿಳಿಸಿದ್ದಾರೆ.
ಏಪ್ರಿಲ್​ 14ರ ನಂತರ ಪರಿಸ್ಥಿತಿ ಹೇಗಿರಲಿದೆ ಎಂಬುದನ್ನು ಅವಲೋಕಿಸಲಾಗುವುದು. ನಂತರವಷ್ಟೇ ಶಾಲಾ-ಕಾಲೇಜುಗಳನ್ನು ಪುನಾರಂಭಿಸಬೇಕೋ ಅಥವಾ ರಜೆಯನ್ನು ಮುಂದುವರಿಸಬೇಕೋ ಎಂಬ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಸರ್ಕಾರಕ್ಕೆ ವಿದ್ಯಾರ್ಥಿಗಳು,ಶಿಕ್ಷಕರು ಹಾಗೂ ಸಿಬ್ಬಂದಿಯ ಸುರಕ್ಷತೆ ಅತ್ಯಂತ ಪ್ರಮುಖವಾಗಿದೆ. ಏಪ್ರಿಲ್​ 14ರ ನಂತರವೂ ಶಾಲಾ- ಕಾಲೇಜುಗಳನ್ನು ಮುಚ್ಚಿರಬೇಕಾದ ಸಂದರ್ಭ ಎದುರಾದಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಲ್ಲಿ ಶೈಕ್ಷಣಿಕ ಹಿನ್ನಡೆ ಉಂಟಾಗದಂತೆ ನೋಡಿಕೊಳ್ಳಲು ಸರ್ಕಾರ ಹಾಗೂ ಸಚಿವಾಲಯ ಸನ್ನದ್ಧವಾಗಿದೆ ಎಂದರು.
ನಮ್ಮ ದೇಶದಲ್ಲಿ 34 ಕೋಟಿ ವಿದ್ಯಾರ್ಥಿಗಳಿದ್ದಾರೆ. ಇದು ಅಮೆರಿಕದ ಜನಸಂಖ್ಯೆಗಿಂತಲೂ ಹೆಚ್ಚು. ಮತ್ತವರು ನಮ್ಮ ಆಸ್ತಿಯಾಗಿದ್ದಾರೆ. ಹೀಗಾಗಿ ಅವರ ಸುರಕ್ಷತೆ ಬಗ್ಗೆ ಅತ್ಯಂತ ಕಾಳಜಿ ವಹಿಸಲಾಗಿದೆ. ಹೀಗಾಗಿ ಏಪ್ರಿಲ್​ 14ರ ನಂತರದ ಪರಿಸ್ಥಿತಿ ಬಗ್ಗೆ ಈಗಲೇ ನಿರ್ಧಾರ ಕೈಗೊಳ್ಳಲಾಗದು ಎಂದು ಹೇಳಿದರು.
ಏಪ್ರಿಲ್​ 14ರ ನಂತರ ಲಾಕ್​ಡೌನ್​ ಮುಂದುವರಿಸುವ ಸಾಧ್ಯತೆಗಳಿಲ್ಲ ಎಂದೇ ವಿಶ್ಲೇಷಿಸಲಾಗುತ್ತಿದೆ. ಆದರೆ, ದೇಶದಲ್ಲಿ ಲಾಕ್​ಡೌನ್​ ಘೋಷಿಸುವ ಮುನ್ನವೇ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.
ಲಾಕ್​ಡೌನ್​ ಅವಧಿಯಲ್ಲಿ ಈಗಾಗಲೇ ವಿವಿಧ ಆನ್​ಲೈನ್​ ವೇದಿಕೆಗಳನ್ನು ಬಳಸಿಕೊಂಡು ತರಗತಿಗಳನ್ನು ನಡೆಸಲಾಗುತ್ತಿದೆ. ಇವುಗಳ ಬಗ್ಗೆ ದಿನವೂ ಪರಾಮರ್ಶೆ ನಡೆಸಲಾಗುತ್ತಿದೆ. ಜತೆಗೆ, ಈಗಾಗಲೇ ಬಾಕಿಯಿರುವ ಪರೀಕ್ಷೆಗಳನ್ನು ನಡೆಸಲು ನಡೆಸಲು ಯೋಜನೆಗಳನ್ನು ಸಿದ್ಧಪಡಿಸಲಾಗಿದೆ ಎಂದು ಪೋಕ್ರಿಯಾಲ್​ ತಿಳಿಸಿದರು.(ಏಜೆನ್ಸೀಸ್​)
ಕರೊನಾ ವೈರಸ್​ ಗಾಳಿಯಿಂದ ಹರಡುವುದಕ್ಕೆ ಆಧಾರಗಳಿಲ್ಲ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಸ್ಪಷ್ಟನೆ

ಅಸ್ವಸ್ಥ ತಂದೆಯ ನೋಡಲು ಜಮ್ಮುಗೆ ಸೈಕಲ್​ನಲ್ಲಿ ಹೊರಟವನಿಗೆ ಪೊಲೀಸರು ಮತ್ತು ಸಿಆರ್​ಪಿಎಫ್​ ಯೋಧರ ನೆರವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × two =
Remember me
