ಮುಂಬೈ:ಸದಾ ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟೀವ್ ಆಗಿರುವ ಬಾಲಿವುಡ್ ನಟ ಹೃತಿಕ್ ರೋಶನ್ ಇತ್ತೀಚೆಗೆ ಅಭಿಮಾನಿಯೊಬ್ಬರಿಗೆ ‘ಕೂಲ್​’ ಪ್ರತಿಕ್ರಿಯೆ ನೀಡಿದ್ದಾರೆ. ಟ್ವಿಟರ್​​ನಲ್ಲಿ ಮಾತನಾಡುತ್ತಾ ಎಸಿ ಸರ್ವೀಸ್ ಮಾಡಿಸಿ ಎಂದು ತಮಾಷೆ ಮಾಡಿದ ಯುವತಿಗೆ ಹೃತಿಕ್, ಅರ್ಬನ್ ಕಂಪೆನಿ ವತಿಯಿಂದ ಒಂದು ವರ್ಷದ ಎಸಿ ಸರ್ವೀಸ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ!
ಹೃತಿಕ್​​ನ ಕಟ್ಟಾ ಅಭಿಮಾನಿಯಾದ ರೂಪಾಲಿ ಎಂಬುವರು “ದ ವಾರ್​” ನಟ ಹೃತಿಕ್ ಎಂಡಾರ್ಸ್​ ಮಾಡುವ ವಿವಿಧ ಕಂಪೆನಿಗಳ ಹೆಸರನ್ನು ಸೇರಿಸಿ ಕಳೆದ ವಾರ ಒಂದು ಸಂದೇಶ ಕಳುಹಿಸಿದರು. “ಬೇಸಿಗೆ ಬರುತ್ತಿದೆ.. ಬಿಯರ್​ಡು ಅಸೆಸರಿಗಳಿಂದ ಗಡ್ಡ ಸೆಟ್​ ಮಾಡಿಕೊಂಡು, ಆರ್ರೋ ಶರ್ಟ್ ಹಾಕಿ ಪಾರಾಗಾನ್ ಚಪ್ಪಲ್ ಹಾಕಿಕೊಳ್ಳಿ; ಮೌಂಟೇನ್ ಡ್ಯು ಕುಡಿದು, ಜೆಬ್ರಾನಿಕ್ಸ್ ಹೆಡ್​ಫೋನ್ಸ್ ಹಾಕಿಕೊಂಡು ಹೆಚ್​ಆರ್​ಎಕ್ಸ್​ ವರ್ಕೌಟ್​ ಮಾಡಿ. ಮನೆಯಲ್ಲಿ ಪ್ಲಾಸ್ಟೋ ಟ್ಯಾಂಕ್ ಹಾಕಿಸಿ ವೈಟ್​ಹ್ಯಾಟ್​ ಜೂನಿಯರ್​​ನಿಂದ ಕೋಡಿಂಗ್ ಕಲಿಯಿರಿ” ಎಂದು ಟ್ವೀಟ್​ ಮಾಡಿದರು.
ಇದನ್ನೂ ಓದಿ:‘ಚೆಹ್ರೆ’ ತೋರಲಿದೆಯೇ ಬಿಗ್​ ಬಿ ಹೊಸ ಮುಖ ?!
ಇದಕ್ಕೆ ಗೃಹಬಳಕೆ ಉಪಕರಣಗಳ ಸರ್ವೀಸಿಂಗ್ ಮತ್ತು ಮನೆಯಲ್ಲೇ ಬ್ಯೂಟಿ ಇತ್ಯಾದಿ ಸರ್ವೀಸ್ ಒದಗಿಸುವ ‘ಅರ್ಬನ್ ಕಂಪೆನಿ’ ಪ್ರತಿಕ್ರಿಯೆ ನೀಡಿತು. “ಇಷ್ಟು ಮಾಡುತ್ತಿದ್ದೀರ ಅಂದ್ರೆ ಎಸಿ ಸರ್ವೀಸ್ ಕೂಡ ಮಾಡಿಸಿಕೊಂಡು ಬಿಡಿ” ಎಂದು ಟ್ವೀಟ್ ಮಾಡಿತು!
Itna kar rahe ho toh AC service bhi kara hi lo#SummerEssentialshttps://t.co/fRnwoAjppI— Urban Company (@urbancompany_UC)March 2, 2021
Itna kar rahe ho toh AC service bhi kara hi lo#SummerEssentialshttps://t.co/fRnwoAjppI
ಅದಕ್ಕೆ ಉತ್ತರವಾಗಿ, ರೂಪಾಲಿ, ಹೃತಿಕ್ ವೀಡಿಯೋ ಪೋಸ್ಟ್ ಒಂದಕ್ಕೆ “ಹೃತಿಕ್, ನೀವು ಎಸಿ ಸರ್ವೀಸ್ ಮಾಡಿಸಿಕೊಂಡಿದ್ದೀರಿ ಎಂದುಕೊಳ್ಳುತ್ತೇನೆ… ಏಕೆಂದರೆ ನೀವು ತುಂಬಾ ‘ಹಾಟ್’​ ಆಗಿದ್ದೀರಿ” ಎಂದು ಟ್ವೀಟ್ ಮಾಡಿದರು. ಜೊತೆಗೆ “ನನಗೆ ಫ್ರೀ ಎಸಿ ಸರ್ವೀಸ್ ಪಡೆಯಲು ಸಹಾಯ ಮಾಡ್ತೀರಾ ?” ಎಂದು ತಮಾಷೆ ಮಾಡಿದರು.
ರೂಪಾಲಿಯ ಈ ಟ್ವೀಟ್​ಗೆ ನಿನ್ನೆ ಮಧ್ಯಾಹ್ನ ಪ್ರತಿಕ್ರಿಯಿಸಿದ ಹೃತಿಕ್, “ಅಟ್​ ಯುವರ್ ಸರ್ವೀಸ್ ಮೇಡಂ” ಎಂದರು. ಹೃತಿಕ್​​ರ ಪ್ರತಿಕ್ರಿಯೆ ನೋಡೇ ತಣ್ಣಗಾದ ಅಭಿಮಾನಿ ರೂಪಾಲಿ “ಓ ದೇವರೆ…!” ಎಂದು ಉದ್ಗರಿಸಿದರು. ಸಂಜೆಯ ವೇಳೆಗೆ ಅರ್ಬನ್ ಕಂಪೆನಿ ರೂಪಾಲಿಗೆ “ಒಂದು ವರ್ಷದ ಎಸಿ ಸರ್ವೀಸ್​ ಸಬ್ಸ್​ಕ್ರಿಪ್ಷನ್​ನೊಂದಿಗೆ ಇತರ ಸೇವಾ ವೋಚರ್​ಗಳನ್ನು ರವಾನಿಸುತ್ತಿದ್ದೇವೆ.. ಇದು ಜಾದೂ! ಇದು ಜಾದೂ!” ಎಂದು ಟ್ವೀಟ್​ ಮಾಡಿತು.
At your service Ma'am!— Hrithik Roshan (@iHrithik)March 9, 2021
At your service Ma'am!
ಇನ್ನು ಅಭಿಮಾನಿ ರೂಪಾಲಿ, ತಮ್ಮ ನೆಚ್ಚಿನ ತಾರೆ ಹೃತಿಕ್ ರೋಶನ್ ತಮ್ಮ ಟ್ವೀಟ್​ಗೆ ಉತ್ತರ ಕೊಟ್ಟ ಬಗ್ಗೆ ಹೆಚ್ಚು ಸಂತೋಷ ಪಡುತ್ತಿದ್ದಾರೋ… ಅರ್ಬನ್ ಕಂಪೆನಿಯಿಂದ ಒಳ್ಳೇ ಗಿಫ್ಟ್​ ಡೀಲ್ ಸಿಕ್ಕಿದ್ದಕ್ಕೆ ಖುಷಿಯಾಗಿದ್ದಾರೋ… ಆ ದೇವರಿಗೇ ಗೊತ್ತು!(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಕೆಂಪು ಕೋಟೆ ಹಿಂಸಾಚಾರ : ಪರಾರಿ ಆಗುತ್ತಿದ್ದ ಡಚ್​ ಪ್ರಜೆ ಪೊಲೀಸರ ವಶಕ್ಕೆ
ನಟಿ ಪ್ರಿಯಾಂಕಾರ ಇತ್ತೀಚಿನ ಸಾಹಸ ಏನು ಗೊತ್ತೆ?!


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
