ವಿಯೆನ್ನಾ (ಆಸ್ಟ್ರಿಯಾ):ಕೆಲವು ದೇಶಗಳಲ್ಲಿ ಏನೆಲ್ಲಾ ಚಿತ್ರವಿಚಿತ್ರ ಕಾನೂನು, ನಿಯಮಗಳು ಇರುತ್ತವೆ. ಅವುಗಳನ್ನು ಕೇಳಿದರೆ ನಂಬಲು ಸಾಧ್ಯವೇ ಅನಿಸುವುದಿಲ್ಲ. ಹಲವು ನಿಯಮಗಳು ಹಾಸ್ಯಾಸ್ಪದವಾಗಿದ್ದರೆ, ಇನ್ನು ಕೆಲವು ಅತ್ಯಂತ ಕಠೋರವೂ ಎನಿಸುತ್ತದೆ.
ಅದೇನೇ ಇರಲಿ. ಇಲ್ಲಿ ಹೇಳಹೊರಟಿರುವ ವಿಷಯ ಮಾತ್ರ ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸುವಂತಿದೆ. ಆಸ್ಟ್ರಿಯಾದ ವಿಯೆನ್ನಾದಲ್ಲಿ ನಡೆದ ಘಟನೆ ಇದು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದ್ದು, ಚರ್ಚೆಗೂ ಗ್ರಾಸವಾಗಿದೆ.
ಅದೇನೆಂದರೆ, ಇಲ್ಲಿಯ ವ್ಯಕ್ತಿಯೊಬ್ಬನಿಗೆ ಪೊಲೀಸರು 500 ಯುರೋ (ಸುಮಾರು 43 ಸಾವಿರ ರೂಪಾಯಿ) ದಂಡ ವಿಧಿಸಿದ್ದಾರೆ. ಅದೂ ಯಾವುದಕ್ಕೆ ಗೊತ್ತಾ? ಹೂಸು ಬಿಟ್ಟಿರುವುದಕ್ಕೆ!
ಇದನ್ನೂ ಓದಿ:ಮೌನ ಮುರಿದ ಪ್ರಧಾನಿ: ಇಚ್ಛಿಸಿದರೆ ಶಾಂತಿ, ಪ್ರಚೋದಿಸಿದರೆ ತಕ್ಕಶಾಸ್ತಿ!
ಹೌದು! ವಿಯೆನ್ನಾದಲ್ಲಿ ನಾಕಾಬಂದಿ ವೇಳೆ ತಪಾಸಣೆ ನಡೆಸುವ ಸಂದರ್ಭದಲ್ಲಿ ಪೊಲೀಸರು ಈ ವ್ಯಕ್ತಿಯನ್ನು ತಡೆಯುತ್ತಿದ್ದಂತೆಯೇ ಜೋರಾಗಿ ಹೂಸು ಬಿಟ್ಟಿದ್ದಾನಂತೆ. ವಾಸನೆ ತಡೆಯಲಾರದೇ ಅತಿ ಕೋಪಗೊಂಡ ಪೊಲೀಸರು ದಂಡ ವಿಧಿಸಿದ್ದಾರೆ! ಉದ್ದೇಶಪೂರ್ವಕವಾಗಿ ಹೊಸು ಬಿಡಲಾಗಿದ್ದು, ಈತ ದಂಡಕ್ಕೆ ಅರ್ಹನಾಗಿದ್ದಾನೆ ಎಂದಿದ್ದಾರೆ ಪೊಲೀಸರು.
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಈ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ. ಇದನ್ನು ಓದಿದ ಅನೇಕ ಮುಸಿಮುಸಿ ನಕ್ಕರೆ, ಇನ್ನು ಕೆಲವರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಪೊಲೀಸರು ಮಾತ್ರ ಪರಿಶೀಲನೆಗೆ ಬಂದ ಅಧಿಕಾರಿಗೆ ಅಸಹಕಾರ ತೋರಿದ್ದಾನೆ ಈ ವ್ಯಕ್ತಿ, ಉದ್ದೇಶಪೂರ್ವಕವಾಗಿ ಹೂಸು ಬಿಟ್ಟಿದ್ದಾನೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಈ ದಂಡವನ್ನು ಬೇಕಿದ್ದರೆ ಕೋರ್ಟ್​ನಲ್ಲಿ ಪ್ರಶ್ನಿಸಿಕೊಳ್ಳಲಿ ಎಂದೂ ಅವರು ಹೇಳಿದ್ದಾರೆ.(ಏಜೆನ್ಸೀಸ್​)
ವಕೀಲನ ಹತ್ಯೆ: ಭೂಗತ ಪಾತಕಿ ರವಿ ಪೂಜಾರಿ ಸಿಸಿಬಿ ವಶಕ್ಕೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × 1 =
Remember me
