ಬೀಜಿಂಗ್‌: ಕೊರೊನಾ ವೈರಸ್‌ ಮೊದಲು ಪತ್ತೆಯಾದ ಚೀನಾದ ಹುಬೈ ಪ್ರಾಂತ್ಯದಲ್ಲಿ ಮತ್ತೊಂದು ಸಮಸ್ಯೆ ಎದುರಾಗಿದೆ.ಹುಬೈ ಪ್ರಾಂತ್ಯದ ಮೇಲೆ ಹೇರಲಾಗಿದ್ದ ಲಾಕ್‌ಡೌನ್‌ ಅನ್ನು ಇತ್ತೀಚೆಗೆ ತೆರವು ಮಾಡಿದ ನಂತರ ನಾಗರಿಕರು ಪ್ರಾಂತ್ಯ ತೊರೆದು ಪಕ್ಕದ ಪ್ರಾಂತ್ಯ ಜಿಯಾಂಗ್ಸಿಗೆ ಸಾಮೂಹಿಕವಾಗಿ ಗುಳೆ ಹೊರಟಿರುವುದು ಮತ್ತೆ ಸಮಸ್ಯೆಗೆ ಕಾರಣವಾಗಿದೆ,
ಗುಳೆ ಹೋಗುವವರನ್ನು ತಡೆಯುತ್ತಿರುವ ಪೊಲೀಸರ ಮೇಲೆ ರೊಚ್ಚಿಗೆದ್ದ ಜನರು ಹಲ್ಲೆ ನಡೆಸುತ್ತಿದ್ದಾರೆ. ಅಲ್ಲದೆ ವಾಹನಗಳನ್ನು ಧ್ವಂಸ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಸುಮಾರು 5.6 ಕೋಟಿ ಜನರು ಇರುವ ಹುಬೈ ಪ್ರಾಂತ್ಯವನ್ನು ಜನವರಿ 23 ರಿಂದ ಲಾಕ್‌ಡೌನ್‌ ಮಾಡಲಾಗಿತ್ತು. ಲಾಕ್​ಡೌನ್​ ತೆರವು ಮಾಡಿದ ಬಳಿಕ ಜನರು ಜಿಯಾಂಗ್ಸಿ ಪ್ರಾಂತ್ಯಕ್ಕೆ ಹೋಗಲು ಸಿದ್ಧರಾಗಿದ್ದಾರೆ. ಎರಡೂ ಪ್ರಾಂತ್ಯಗಳನ್ನು ಸಂಪರ್ಕಿಸುವ ಸೇತುವೆ ಬಳಿ ಜನರು ಬಂದಾಗ ಅವರನ್ನು ಪೊಲೀಸರು ತಡೆದಿದ್ದಾರೆ. ಇದು ಜನರ ಸಿಟ್ಟಿಗೆ ಕಾರಣವಾಗಿದೆ. ಎರಡೂ ಪ್ರಾಂತ್ಯಗಳ ಪೊಲೀಸರು ಕೂಡ ವಾಗ್ವಾದ ನಡೆಸಿದ್ದಾರೆ.
ಹಸಿರು ಕಾರ್ಡ್‌ (ಕೊರೊನಾ ಸೋಂಕಿತರ ಜತೆ ಸಂಪರ್ಕಕ್ಕೆ ಬಂದಿಲ್ಲ ಎಂಬ ಪ್ರಮಾಣಪತ್ರ) ಹೊಂದಿರುವ ಜನರು ಹುಬೈ ಪ್ರಾಂತ್ಯದಿಂದ ಹೊರಗೆ ಹೋಗಬಹುದು ಎಂದು ಸರ್ಕಾರ ಇತ್ತೀಚೆಗೆ ಹೇಳಿತ್ತು. ಆದರೆ, ಹುಬೈ ಮತ್ತು ಜಿಯಾಂಗ್ಸಿ ಪ್ರಾಂತ್ಯವನ್ನು ಪ್ರತ್ಯೇಕಿಸುವ ಯಾಂಗ್‌ತ್ಸೆ ನದಿಯ ಸೇತುವೆಯ ಬಳಿ ಜನರು ಬಂದಾಗ, ಆ ಸೇತುವೆಯನ್ನು ಬಂದ್‌ ಮಾಡಲಾಗಿತ್ತು. ಇದು ತಮ್ಮ ಮೇಲೆ ಕಳಂಕ ಹೊರಿಸುವ ಪ್ರಯತ್ನ ಎಂದು ಹುಬೆ ಪ್ರಾಂತ್ಯದ ಜನರು ಆರೋಪಿಸಿದ್ದಾರೆ.
ಬ್ಯಾರಿಕೇಡ್‌ಗಳನ್ನು ದಾಟಲು ಯತ್ನಿಸಿದ ಜನರನ್ನು ಪೊಲೀಸರು ತಡೆದಾಗ, ಜನರು ವಾಹನಗಳನ್ನು ಧ್ವಂಸ ಮಾಡಿದರು. ಈ ದೃಶ್ಯಗಳಿರುವ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.ಸಂಘರ್ಷ ಹೇಗೆ ಆರಂಭವಾಯಿತು ಎಂಬುದು ಸ್ಪಷ್ಟವಾಗಿಲ್ಲ. ಎರಡೂ ಪ್ರಾಂತ್ಯಗಳ ಪೊಲೀಸರು ಸಂಘರ್ಷದ ಬಗ್ಗೆ ತಮ್ಮದೇ ಹೇಳಿಕೆಗಳನ್ನು ಆನ್‌ಲೈನ್‌ನಲ್ಲಿ ಹಾಕಿದ್ದರು. ತಕ್ಷಣವೇ ಅದನ್ನು ಅಳಿಸಿ ಹಾಕಿದ್ದಾರೆ. (ಏಜೆನ್ಸೀಸ್​)

ಪೊಲೀಸರಿಗೆ ಕರೊನಾ ಸೋಂಕಿನ ಭೀತಿ: ಕರ್ತವ್ಯ ವೇಳೆ ಹರಡುವ ಸಾಧ್ಯತೆ, ಮಹಿಳಾ ಸಿಬ್ಬಂದಿಗೆ ಕುಟುಂಬದ ಚಿಂತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 10 =
Remember me
