ರಿಯೊ:ಕರೊನಾದ ಈ ಸಮಯದಲ್ಲಿ ಸಾಮಾಜಿಕ ಅಂತರ ಎಂಬುದು ಬಹಳ ಮುಖ್ಯವಾಗಿ ಬೇಕಾದದ್ದು. ಯಾರನ್ನೂ ಯಾರೂ ನಂಬದ ಪರಿಸ್ಥಿತಿ ಇದು. ಬೇರೆ ಯಾರನ್ನು ಏಕೆ? ನಮ್ಮನ್ನೇ ನಾವು ಮಾಡದ ಸ್ಥಿತಿ ಇದು.
ಇಂಥ ಸಮಯದಲ್ಲಿ ಪ್ರೀತಿ ಪಾತ್ರರಾದವನ್ನು ತಬ್ಬಿಕೊಳ್ಳುವುದು ಅಸಾಧ್ಯವೇ ಸರಿ. ಕೈಕುಲುಕಿದರೂ ಸೋಂಕು ದೇಹ ಪ್ರವೇಶಿಸುವ ಈ ಹೊತ್ತಿನಲ್ಲಿ ಅಪ್ಪಿಕೊಳ್ಳುವುದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ.
ಇದಕ್ಕಾಗಿಯೇ ಬ್ರೆಜಿಲ್‌ನ ಉದ್ಯಮಿಯೊಬ್ಬರು ಪರಿಹಾರ ಕಂಡು ಹಿಡಿದಿದ್ದಾರೆ. ’ಹಗ್‌ ಕರ್ಟನ್‌’ ಎಂಬ ಸುರಕ್ಷಿತ ಕವಚವನ್ನು ಇವರು ತಯಾರಿಸಿದ್ದಾರೆ.
ಇದನ್ನೂ ಓದಿ:ಕರೊನಾದಿಂದ ಚೇತರಿಸಿಕೊಳ್ಳುತ್ತಿರುವವರ ಪ್ರಮಾಣದಲ್ಲಿ ರಾಷ್ಟ್ರವನ್ನು ಹಿಂದಿಕ್ಕಿದ ದೆಹಲಿ….
ಪಿಪಿಇ ಕಿಟ್‌ ಹಾಕಿಕೊಂಡು ವೈದ್ಯರು ಕರೊನಾ ಸೋಂಕಿತರ ಸೇವೆಯಲ್ಲಿ ತೊಡಗುವಂತೆ ಹಗ್‌ ಕರ್ಟನ್‌ ಹಾಕಿಕೊಂಡು ಅಪ್ಪಿಮುದ್ದಾಡಬಹುದು ಎನ್ನುವುದು ಅವರ ವಾದ. ಲಾಕ್‌ಡೌನ್‌ ವೇಳೆ ತಮ್ಮ ಪ್ರೀತಿ ಪಾತ್ರರಾದವರನ್ನು ಸನಿಹದಿಂದ ನೋಡಲಾಗದೇ ಬೇಸರಗೊಂಡಿದ್ದಾರೆ. ಅವರು ಏಕಾಏಕಿ ಎದುರಾದಾಗ ಅಪ್ಪಿಕೊಳ್ಳುವಂತೆಯೂ ಇಲ್ಲ. ಮಾತ್ರವಲ್ಲದೇ ತಮ್ಮ ತೀರಾ ಹತ್ತಿರ ಸಂಬಂಧಿಗಳೂ ಚಿಕಿತ್ಸೆಗೆ ಒಳಗಾಗುತ್ತಿದ್ದ ವೇಳೆ ಅವರ ಬಳಿ ಇದ್ದು ಹಾರೈಕೆ ಮಾಡಲಾಗದೇ ವ್ಯಥೆ ಪಟ್ಟಿದ್ದಾರೆ. ಈ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಇದನ್ನು ತಯಾರಿಸಿದ್ದೇನೆ ಎಂದು ಅವರು ಹೇಳಿದ್ದಾರೆ.
ಇದನ್ನು ಬ್ರೆಜಿಲ್‌ನ ನರ್ಸಿಂಗ್‌ ಹೋಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 93 ವರ್ಷದ ಡೀಸರ್‌ ಎಂಬಾಕೆ, 70 ದಿನಗಳ ಬಳಿಕ ಮೊದಲ ಬಾರಿಗೆ ತಮ್ಮ ಮಗಳನ್ನು ಭೇಟಿಯಾಗಿದ್ದು, “ಹಗ್‌ ಕಾರ್ಟನ್‌’ ಧರಿಸುವ ಮೂಲಕ ಪ್ರೀತಿಯ ಅಪ್ಪುಗೆ ನೀಡಿದ್ದಾರೆ.
ಸಾಮಾಜಿಕ ಅಂತರ ನಿಯಮವೂ ಪಾಲನೆಯೊಂದಿಗೆ ಪ್ರೀತಿ ಪಾತ್ರರನ್ನು ಸನಿಹದಿಂದ ನೋಡಲು ಅವಕಾಶ ಮಾಡಿಕೊಟ್ಟ ಉದ್ಯಮಿಯ ಈ ನಡೆಗೆ ಮೆಚ್ಚುಗೆ ವ್ಯಕ್ತವಾಗಿದ್ದು, ವೈದ್ಯರು ಕೂಡ “ಹಗ್‌ ಕಾರ್ಟನ್‌’ ಬಳಕೆಗೆ ಅರ್ಹ ಎಂದು ಹೇಳಿದ್ದಾರೆ ಎನ್ನಲಾಗಿದೆ. ಇದು ಯಶಸ್ವಿಯಾದರೆ ಬೇರೆ ದೇಶಗಳಿಂದ ಬರುವ ದಿನಗಳು ದೂರವಿಲ್ಲ.(ಏಜೆನ್ಸೀಸ್‌)
ಟಿಕ್‌ಟಾಕ್‌ ಬ್ಯಾನ್‌ ಬೆನ್ನಲ್ಲೇ ಚಿಗುರಿತು ‘ಚಿಂಗಾರಿ’: ಲಕ್ಷ ಲಕ್ಷ ಡೌನ್‌ಲೋಡ್‌

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:11 − seven =
Remember me
