ನವದೆಹಲಿ:ಇಂಡಿಯನ್​ ಪ್ರೀಮಿಯರ್ ಲೀಗ್(IPL) ಪಂದ್ಯಗಳು ಕ್ರೀಡಾಭಿಮಾನಿಗಳಲ್ಲಿ ಯಾವ ಮಟ್ಟಿಗೆ ಕ್ರೇಜ್​ ಹುಟ್ಟಿಸಿದೆ ಎಂದರೆ ಪ್ರತಿ ಪಂದ್ಯಕ್ಕೂ ಮೈದಾನದಲ್ಲಿ ಜನ ಕಿಕ್ಕಿರಿದು ಸೇರಿರುತ್ತಾರೆ.
ಇನ್ನು ಐಪಿಎಲ್​ ಪಂದ್ಯಗಳು ನಡೆಯುವ ವೇಳೆ ಅಭಿಮಾನಿಗಳ ನಡುವೆ ವಾಗ್ವಾದ ನಡೆಯುತ್ತವೆ ಕೆಲವೊಮ್ಮೆ ಇದು ವಿಕೋಪಕ್ಕೆ ತಿರುಗಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪುತ್ತದೆ.
ಇನ್ನು ಶನಿವಾರ ರಾಷ್ಟ್ರ ರಾಜಧಾನಿ ದೆಹಲಿಯ ಅರುಣ್​ ಜೇಟ್ಲಿ ಕ್ರೀಡಾಂಗಣದಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ಹಾಗೂ ಡೆಲ್ಲಿ ಕ್ಯಾಪಿಟಲ್ಸ್​​ ನಡುವೆ ನಡೆದ ಪಂದ್ಯದಲ್ಲಿ ಇಂತಹದೊಂದು ಘಟನೆ ನಡೆದಿದೆ.
A fight took place between fans in Delhi during their match against SRH.pic.twitter.com/MYPj6dqejb
ಇದನ್ನೂ ಓದಿ:VIDEO | ಟೀಕೆಗೆ ಗುರಿಯಾಯ್ತು ಪಾಕಿಸ್ತಾನ-ನ್ಯೂಜಿಲ್ಯಾಂಡ್​ ನಡುವಿನ ಏಕದಿನ ಪಂದ್ಯ; ಏನಿದು ವಿವಾದ?
ಪಂದ್ಯ ನಡೆಯುವ ವೇಳೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಇದ್ದ ಅಭಿಮಾನಿಗಳ ನಡುವೆ ಜಗಳವಾಗಿದ್ದು ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ಬಡಿದಾಟಕ್ಕೆ ಕಾರಣ ಏನಿರಬಹುದು ಎಂದು ನೆಟ್ಟಿಗರು ಯೋಚಿಸುತ್ತಿದ್ದಾರೆ.
ವಿಡಿಯೋದಲ್ಲಿ ಕಂಡು ಬರುವ ಹಾಗೆ 5-6 ಮಂದಿ ನಡುವೆ ಹೊಡೆದಾಟವಾಗಿದ್ದು ಇವರ ಕೈಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಧ್ವಜವನ್ನು ಹಿಡಿದಿರುವುದು ಕಂಡು ಬರುತ್ತದೆ ಮತ್ತು ಯಾವ ವಿಚಾರವಾಗಿ ಇವರ ನಡುವೆ ಜಗಳ ನಡೆದಿದೆ ಎಂಬುದರ ಕಾರಣ ಇನ್ನು ಬಹಿರಂಗವಾಗಿಲ್ಲ
ಇನ್ನು ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲಗ್​ ಆದ ಬೆನ್ನಲ್ಲೇ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಹೊಡೆದಾಟದಲ್ಲಿ ಭಾಗಿಯಾಗುರುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − three =
Remember me
