ಹೈದರಾಬಾದ್​:ವಿಶಾಖಪಟ್ಟಣದ ಹಡಗುಗಟ್ಟೆಯಲ್ಲಿ ಹೊಸದಾಗಿ ಅಳವಡಿಸಿದ್ದ ಬೃಹತ್​ ಕ್ರೇನ್​ ಕುಸಿದು 11ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಬೃಹತ್​ ಕ್ರೇನ್​ ಅನ್ನು ಸರಿಯಾಗಿ ನಿಲ್ಲಿಸಿರುವ ಬಗ್ಗೆ ಮತ್ತು ಅದು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವುದುನ್ನು ಖಚಿಪಡಿಸಿಕೊಳ್ಳಲು ಪರೀಕ್ಷೆ ಮಾಡುವ ಸಂದರ್ಭದಲ್ಲಿ ಅದು ಭಾರಿ ಸದ್ದಿನೊಂದಿಗೆ ಕುಸಿದು ಬಿದ್ದಿದೆ.
ಅಂದಾಜು 20 ಕಾರ್ಮಿಕರು ಕ್ರೇನ್​ನ ಪರೀಕ್ಷೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಕ್ರೇನ್​ ಕುಸಿಯಿತು. ಕೆಲವರು ಓಡಿ ಹೋಗಿ ಅಪಾಯದಿಂದ ಪಾರಾದರು. ಕೆಲವರಿಗೆ ಗಾಯಗಳಾಗಿವೆ. ಕ್ರೇನ್​ನ ಅವಶೇಷದಡಿ ಸಿಲುಕಿಕೊಂಡು 10ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಅವರಿನ್ನು ನನ್ನ ಜವಾಬ್ದಾರಿ … ಮೂರು ಮಕ್ಕಳನ್ನು ದತ್ತು ಪಡೆದ ಸೋನು
ಸದ್ಯ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಇದುವರೆಗೆ ಅವಶೇಷಗಳಡಿಯಿಂದ ಮೂರು ದೇಹಗಳನ್ನು ಹೊರತೆಯಲಾಗಿದೆ. ಬಹುತೇಕ ಕಾರ್ಮಿಕರ ದೇಹಗಳು ಸಂಪೂರ್ಣ ನಜ್ಜುಗುಜ್ಜಾಗಿರುವುದರಿಂದ ಅವರನ್ನು ಗುರುತಿಸಲಾಗದಂಥ ಸ್ಥಿತಿ ಇದೆ. ಹಡಗುಗಟ್ಟೆಯ ಸಿಬ್ಬಂದಿ ಜತೆಗೂಡಿ ಪೊಲೀಸರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
10 ವರ್ಷ ಹಳೆಯದ್ದು:ಇದೀಗ ಕುಸಿದು ಬಿದ್ದಿರುವ ಬೃಹತ್​ ಕ್ರೇನ್​ ಅನ್ನು ಹಿಂದೂಸ್ಥಾನ ಹಡಗುಗಟ್ಟೆ ನಿಯಮಿತದವರು 10 ವರ್ಷಗಳ ಹಿಂದೆ ಖರೀದಿಸಿದ್ದರು. ಇದನ್ನು ಕಾರ್ಯಾಚರಿಸುವ ಕೆಲಸವನ್ನು ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು. ಆ ಸಂಸ್ಥೆಯ ಕಾರ್ಮಿಕರು ಬೃಹತ್​ ಕ್ರೇನ್​ ಅನ್ನು ಬೇರೆಡೆಗೆ ಸ್ಥಳಾಂತರಿಸಿ ಹೊಸದಾಗಿ ಸ್ಥಾಪಿಸಿದ್ದರು. ಅದನ್ನು ಪರೀಕ್ಷಿಸಲು ಮುಂದಾದಾಗ ಈ ಅವಘಡ ಸಂಭವಿಸಿದೆ.
https://www.vijayavani.net/police-unearth-human-foetus-at-home-of-madrassa-teacher-accused-of-sexual-assault/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 2 =
Remember me
