ಮುಂಬೈ:ಷೇರು ಮಾರುಕಟ್ಟೆಯಲ್ಲಿ ಸೂಚ್ಯಂಕ ಏರುಗತಿ ಮುಂದುವರಿದೆ. ಈ ಸಂದರ್ಭದಲ್ಲಿ ಮುಖೇಶ್ ಅಂಬಾನಿಯವರ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಷೇರುಗಳ ಬೆಲೆಯೂ ಭಾರಿ ಹೆಚ್ಚಳವನ್ನು ಕಂಡಿದೆ.
ಬುಧವಾರದ ಇಂಟ್ರಾ ಡೇ ವಹಿವಾಟಿನಲ್ಲಿ ಈ ಷೇರುಗಳ ಬೆಲೆ ಶೇ. 4ಕ್ಕಿಂತ ಹೆಚ್ಚು ಏರಿಕೆ ಕಂಡು 3037 ರೂ. ಮುಟ್ಟಿದೆ. ಇದು ಈ ಷೇರಿನ 52 ವಾರಗಳ ಗರಿಷ್ಠ ಬೆಲೆಯಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳ ಬೆಲೆ ಏರಿಕೆಯಿಂದಾಗಿ, ಸೂಚ್ಯಂಕ ಕೂಡ ಭಾರೀ ಏರಿಕೆ ಕಾಣುವಂತಾಗಿದೆ.
ಈ ತಿಂಗಳು ಷೇರುಪೇಟೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಷೇರು ಬೆಲೆ ಸಾಕಷ್ಟು ಏರಿಳಿತ ಕಂಡಿದೆ. ಚುನಾವಣೆ ಫಲಿತಾಂಶದ ನಂತರ ಕಂಪನಿ ಷೇರುಗಳ ಬೆಲೆ ಸಾಕಷ್ಟು ಕುಸಿತವಾಗಿದ್ದು, ತದನಂತ ಚೇತರಿಕೆ ಕಂಡುಬಂದಿದೆ. ಈ ಸ್ಟಾಕ್ ಕಳೆದ ವರ್ಷದಲ್ಲಿ 32% ಏರಿಕೆಯಾಗಿದೆ. 2024ರಲ್ಲಿ ಇದುವರೆಗೆ 17% ಹೆಚ್ಚಾಗಿದೆ.
ದೇಶೀಯ ಬ್ರೋಕರೇಜ್ ಸಂಸ್ಥೆ ನುವಾಮಾ ಈ ಷೇರಿನಲ್ಲಿ ರೂ 3,500 ಗುರಿಯ ಬೆಲೆಯನ್ನು ಸೂಚಿಸಿದೆ. ಜಾಗತಿಕ ಬ್ರೋಕರೇಜ್ ಸಂಸ್ಥೆಯಾದ ಜೆಫರೀಸ್ ರಿಲಯನ್ಸ್ ಷೇರುಗಳ ಬೆಲೆ ಏರಲಿದೆ ಎಂದು ಹೇಳಿದೆ. ಈ ಷೇರಿನ ಗುರಿ ಬೆಲೆಯನ್ನು 3,380 ರೂ.ಗೆ ಈ ಬ್ರೋಕರೇಜ್​ ನಿಗದಿಪಡಿಸಿದೆ. ಇನ್ನೊಂದು ಬ್ರೋಕರೇಜ್ ಸಂಸ್ಥೆ ಯುಬಿಎಸ್​, ಈ ಷೇರಿನ ಗುರಿ ಬೆಲೆಯನ್ನು 3,420 ರೂ.ಗೆ ನಿಗದಿಪಡಿಸಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಹೊರತಾಗಿ, ಭಾರ್ತಿ ಏರ್‌ಟೆಲ್, ಅಲ್ಟ್ರಾಟೆಕ್ ಸಿಮೆಂಟ್, ಸನ್ ಫಾರ್ಮಾ, ಆಕ್ಸಿಸ್ ಬ್ಯಾಂಕ್, ಎನ್‌ಟಿಪಿಸಿ ಮತ್ತು ಬಜಾಜ್ ಫೈನಾನ್ಸ್ ಷೇರುಗಳ ಬೆಲೆಗಳು ಕೂಡ ಬುಧವಾರ ಏರಿಕೆ ಕಂಡಿವೆ.
ಮೂರನೇ ದಿನವೂ ಗುಳಿಯ ಗುಟುರು: ಷೇರು ಸೂಚ್ಯಂಕ ಮತ್ತೆ ಸಾರ್ವಕಾಲಿಕ ಉನ್ನತ ಮಟ್ಟಕ್ಕೆ

ಭಾರತೀಯ ಆರ್ಥಿಕತೆ 7%ಕ್ಕಿಂತ ಹೆಚ್ಚು ಬೆಳವಣಿಗೆ: ಎನ್​ಸಿಎಇಆರ್​ ಭವಿಷ್ಯ

5ಜಿ ತರಂಗಾಂತರ ಹರಾಜು: ರೂ. 11,300 ಕೋಟಿ ಮೊತ್ತದ ಬಿಡ್‌ಗಳೊಂದಿಗೆ ಮುಕ್ತಾಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + four =
Remember me
