ಪಲಕ್ಕಾಡ್​:ಕೋಳಿ ಜಗಳದ ವೇಳೆ ವಶಕ್ಕೆ ಪಡೆದ ಎರಡು ಫೈಟರ್​ ಹುಂಜಗಳನ್ನು ಹರಾಜಿನಲ್ಲಿ ಖರೀದಿಸಲು ಭಾರಿ ಸಂಖ್ಯೆಯಲ್ಲಿ ಜನರು ಪೈಪೋಟಿ ನಡೆಸಿದ ಅಪರೂಪದ ಪ್ರಸಂಗ ಕೇರಳದ ಪಲಕ್ಕಾಡ್​ ಜಿಲ್ಲೆಯ ಚಿತ್ತೂರು ಪೊಲೀಸ್​ ಠಾಣೆಯ ಮುಂಭಾಗ ನಡೆದಿದೆ.
ಸಂಕ್ರಾಂತಿ ಅಥವಾ ಪೊಂಗಲ್​ ಹಿನ್ನೆಲೆಯಲ್ಲಿ ಕೋಳಿ ಜಗಳ ಸ್ಪರ್ಧೆ ಆಯೋಜಿಸಲಾಗಿತ್ತು. ಕಾನೂನಿನ ಪ್ರಕಾರ ಇದು ಅಕ್ರಮವಾಗಿದ್ದು, ಈ ಹಿನ್ನೆಲೆಯಲ್ಲಿ ದಾಳಿ ಮಾಡಿದ ಚಿತ್ತೂರು ಪೊಲೀಸರು ಎರಡು ಕೋಳಿಗಳನ್ನು ವಶಕ್ಕೆ ಪಡೆದು, ಅದರ ಮಾಲೀಕರಾದ ಸುಭಾಶ್​ ಮತ್ತು ಪ್ರದೀಪ್​ ಎಂಬುವರನ್ನು ಬಂಧಿಸಿದ್ದಾರೆ. ಅಲ್ಲದೆ, 11 ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವಶಕ್ಕೆ ಪಡೆದ ಕೋಳಿಗಳನ್ನು ಚಿತ್ತೂರ್​ನ ಅಥಿಕೋಡ್​ನಲ್ಲಿ ಹರಾಜು ಹಾಕಲಾಯಿತು. ಕೋಳಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಇರುವ ತಾಂತ್ರಿಕ ತೊಂದರೆಗಳನ್ನು ಪರಿಗಣಿಸಿ ಠಾಣೆಯಲ್ಲಿ ಹರಾಜು ನಡೆಸಲಾಯಿತು. ಪೊಲೀಸರು ಎರಡು ಹುಂಜಗಳಿಗೆ 7750 ರೂ. ಗಳಿಸಿದರು. ಚಿತ್ತೂರಿನವರಾದ ಕುಮಾರ್ ಮತ್ತು ವಿಷ್ಣು ಅವರು ಕೋಳಿಗಳನ್ನು ಹರಾಜಿನಲ್ಲಿ ತಮ್ಮದಾಗಿಸಿಕೊಂಡರು.
ಕಳೆದ ಡಿಸೆಂಬರ್‌ನಲ್ಲಿ ಇಡುಕ್ಕಿಯಲ್ಲಿ ನಡೆದ ಹರಾಜಿನಲ್ಲಿ ಒಂದು ಕೋಳಿಗೆ 13,300 ರೂ.ಗೆ ಮಾರಾಟವಾಗಿತ್ತು.(ಏಜೆನ್ಸೀಸ್​)
ಬ್ರಿಟಿಷ್​ ಕೌನ್ಸಿಲ್​ ಜಾಬ್​ ಬಿಟ್ಟು ಟೀ ಮಾರಾಟಕ್ಕಿಳಿದ ಎಂಎ ಇಂಗ್ಲಿಷ್​ ಪದವೀಧರೆಯ ಸ್ಫೂರ್ತಿದಾಯಕ ಕತೆ ಇದು!

ಮತ್ತೊಮ್ಮೆ ವಿಜಯ್​ ಜೊತೆ ಹಾಟ್​ ಆಗಿ ಕಾಣಿಸಿಕೊಂಡ ತಮನ್ನಾ: ಬೇಸರ ಹೊರಹಾಕಿದ ಅಭಿಮಾನಿಗಳು

ಪೂಜೆ ನಡೆಯುತ್ತಿರುವಾಗಲೇ ಶಿವ ದೇವಾಲಯ ಕುಸಿತ, ಭರದಿಂದ ಸಾಗಿದ ಭಕ್ತರ ರಕ್ಷಣಾ ಕಾರ್ಯಾಚರಣೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fifteen + two =
Remember me
