ಮುಂಬೈ:ಪೆನ್ನಿ ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡುವುದು ಸವಾಲಿನ ಸಂಗತಿ. ಆದರೆ ಕೆಲವೊಮ್ಮೆ ಈ ಷೇರುಗಳು ಅತ್ಯುತ್ತಮ ಆದಾಯವನ್ನು ನೀಡುತ್ತದೆ.ಇಂತಹ ಪೆನ್ನಿ ಸ್ಟಾಕ್ ತನ್ನ ಹೂಡಿಕೆದಾರರಿಗೆ ಸಾಕಷ್ಟು ಆದಾಯವನ್ನು ನೀಡಿದೆ. ಇದು ಫ್ರೇಸರ್ ಆ್ಯಂಡ್​ ಕಂಪನಿ ಲಿಮಿಟೆಡ್​ (Fraser and Company Ltd) ಸಂಸ್ಥೆಯ ಷೇರು. ಈ ಷೇರುಗಳು ಮಂಗಳವಾರ ಇಂಟ್ರಾ ಡೇ ವಹಿವಾಟಿನಲ್ಲಿ 15% ರಷ್ಟು ಏರಿಕೆಯಾಗಿ 5.57 ರೂಪಾಯಿ ತಲುಪಿದವು.
ಫ್ರೇಸರ್​ ಆ್ಯಂಡ್​ ಕಂಪನಿ ಲಿಮಿಟೆಡ್ ಷೇರುಗಳು ದೀರ್ಘಾವಧಿಯಲ್ಲಿ ಋಣಾತ್ಮಕ ಆದಾಯವನ್ನು ನೀಡಿವೆ. ಕಳೆದ ಒಂದು ವರ್ಷದಲ್ಲಿ ಈ ಷೇರು ಶೇ. 45ರಷ್ಟು ಕುಸಿದಿದೆ. ಒಂದು ವರ್ಷದ ಹಿಂದೆ ಈ ಷೇರಿನ ಬೆಲೆ 10 ರೂ. ಆಗಿತ್ತು. 2016 ರಲ್ಲಿ ಈ ಷೇರಿನ ಬೆಲೆ 62 ರೂ. ಆಗಿತ್ತು. ಅಂದರೆ ಈ ಅವಧಿಯಲ್ಲಿ ಇದುವರೆಗೆ ಶೇ. 92ರಷ್ಟು ಕುಸಿದಿದೆ.
ಈ ಷೇರಿನ 52 ವಾರಗಳ ಗರಿಷ್ಠ ಬೆಲೆ ರೂ 10.59 ಮತ್ತು ಕನಿಷ್ಠ ಬೆಲೆ ರೂ 4.85 ಆಗಿದೆ. ಕಂಪನಿಯ ಮಾರುಕಟ್ಟೆ ಮೌಲ್ಯ 4.52 ಕೋಟಿ ರೂ. ಇದೆ.
ಕಂಪನಿಗಳ ಕಾಯಿದೆ 2013 ರ ಅಡಿಯಲ್ಲಿ 1917 ರಲ್ಲಿ ಫ್ರೇಸರ್​ ಆ್ಯಂಡ್​ ಕಂಪನಿ ಲಿಮಿಟೆಡ್​ ಸ್ಥಾಪಿಸಲಾಗಿದ್ದು, ಅಂದಿನಿಂದ 100 ವರ್ಷಗಳಿಗಿಂತ ಹೆಚ್ಚು ಪೂರ್ಣಗೊಂಡಿದೆ. ಈ ಕಂಪನಿಯು ನಿರ್ಮಾಣ ಮತ್ತು ರಿಯಲ್ ಎಸ್ಟೇಟ್ ವಸ್ತುಗಳ ಪೂರೈಕೆ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ. ಕಂಪನಿಯು ಬಿಲ್ಡರ್‌ಗಳಿಗೆ ಎಲ್ಲಾ ರೀತಿಯ ನಿರ್ಮಾಣ ಸಾಮಗ್ರಿಗಳನ್ನು ಪೂರೈಕೆ ಮಾಡುತ್ತದೆ.

84 ಪೈಸೆಯ ಪೆನ್ನಿ ಸ್ಟಾಕ್​: ಖಾದ್ಯ ತೈಲ ಕಂಪನಿಯ ಷೇರು ಅಪ್ಪರ್​ ಸರ್ಕ್ಯೂಟ್​ ಹಿಟ್​

ಎರಡು ಸಂಸ್ಥೆಗಳಾಗಿ ವಿಭಜನೆಯಾಗಲಿದೆ ಟಾಟಾ ಮೋಟಾರ್ಸ್​: ಷೇರು ಹೂಡಿಕೆದಾರರ ಮೇಲೆ ಪರಿಣಾಮವೇನು?

ದಾಖಲೆ ಬರೆದ ರಿಲಯನ್ಸ್​ ಷೇರು ಬೆಲೆ: ಮತ್ತಷ್ಟು ಹೆಚ್ಚಳವಾಗಲಿದೆ ಎನ್ನುತ್ತಾರೆ ತಜ್ಞರು; ವಿವಿಧ ಬ್ರೋಕರೇಜ್​ ಸಂಸ್ಥೆಗಳ ಟಾರ್ಗೆಟ್​ ಪ್ರೈಸ್​ ಹೀಗಿದೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + nine =
Remember me
