ನವದೆಹಲಿ/ಡೆಹ್ರಾಡೂನ್​:ಉತ್ತರಾಖಂಡದಲ್ಲಿ ನಿರ್ಮಾಣ ಹಂತದಲ್ಲಿದ್ದ ಸುರಂಗ ಕುಸಿದು ಸುಮಾರು 40 ಕಾರ್ಮಿಕರು ಸಿಲುಕಿಕೊಂಡಿದ್ದು, ನಿನ್ನೆ (ನ.12) ಬೆಳಗ್ಗೆಯಿಂದ ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ.
ಉತ್ತರಕಾಶಿ ಜಿಲ್ಲೆಯ ಬ್ರಹ್ಮಖಾಲ್​-ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣ ಹಂತದಲ್ಲಿರುವ ಸುರಂಗವು ನಿನ್ನೆ ಬೆಳಗ್ಗೆ 5 ಗಂಟೆ ಸುಮಾರಿಗೆ ಭಾಗಶಃ ಕುಸಿದಿದೆ. ಈ ವೇಳೆ ಕೆಲಸ ಮಾಡುತ್ತಿದ್ದ ಕಾರ್ಮಿಕರು ಸುರಂಗದ ಒಳಗೆ ಸಿಲುಕಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್​ಡಿಆರ್​ಎಫ್​), ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್​ಡಿಆರ್​ಎಫ್​) ಮತ್ತು ರಾಜ್ಯ ಪೊಲೀಸರು ಜಂಟಿಯಾಗಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.
40 ಕಾರ್ಮಿಕರು ಸುರಕ್ಷಿತವಾಗಿದ್ದು, ಪೈಪ್​ ಮೂಲಕ ಅವರಿಗೆ ಆಮ್ಲಜನಕ ಪೂರೈಕೆ ಮಾಡುತ್ತಿರುವುದಾಗಿ ಮತ್ತು ನಿರಂತರ ಸಂಪರ್ಕದಲ್ಲಿ ಇರುವುದಾಗಿ ಉತ್ತರಕಾಶಿಯ ಸರ್ಕಲ್ ಇನ್ಸ್​ಪೆಕ್ಟರ್​ ಪ್ರಶಾಂತ್​ ಕುಮಾರ್​ ತಿಳಿಸಿದ್ದಾರೆ. ಆಹಾರ ಮತ್ತು ನೀರನ್ನು ಕೂಡ ಸರಬರಾಜು ಮಾಡಿದ್ದೇವೆ ಎಂದಿದ್ದಾರೆ.
ಸುರಂಗವನ್ನು ತೆರೆಯಲು ಈವರೆಗೂ 20 ಮೀಟರ್​ ದೂರ ಚಪ್ಪಡಿಗಳನ್ನು ತೆಗೆಯಲಾಗಿದ್ದು, ಕಾರ್ಮಿಕರನ್ನು ಹೊರಗೆ ಕರೆತರಲು ದಾರಿ ಮಾಡಲಾಗುತ್ತಿದೆ. ಇನ್ನೂ 35 ಮೀಟರ್​ ದಾರಿ ಮಾಡಬೇಕಿದೆ. ಭಾರೀ ಗಾತ್ರದ ಅಗೆಯುವ ಯಂತ್ರಗಳ ಮೂಲಕ ಅವಶೇಷಗಳನ್ನು ಹೊರತೆಗೆಯಲಾಗುತ್ತಿದೆ ಎಂದು ಪ್ರಶಾಂತ್​ ಕುಮಾರ್​ ಮಾಹಿತಿ ನೀಡಿದ್ದಾರೆ.
ಸುರಂಗವು ಉತ್ತರಾಖಂಡದ ಉತ್ತರಾಕಾಶಿಯ ಸಿಲ್ಕ್ಯಾರಾ ದಿಂದ ದಂಡಲ್ಗೌನ್ ಸಂಪರ್ಕಿಸುತ್ತದೆ. ಉತ್ತರಾಕಾಶಿಯಿಂದ ಯಮುನೋತ್ರಿ ಧಾಮ್​ವರೆಗೆ ಸುಮಾರು 26 ಕಿ.ಮೀ ದೂರ ಕಡಿತಗೊಳಿಸಲು ಇದನ್ನು ಚಾರ್​​ಧಾಮ್​ ರಸ್ತೆ ಯೋಜನೆ ಅಡಿಯಲ್ಲಿ ಇದನ್ನು ನಿರ್ಮಿಸಲಾಗುತ್ತಿದೆ.
ಕುಸಿದ ಸುರಂಗದ ಅಡಿಯಲ್ಲಿ ಬಿಹಾರ, ಜಾರ್ಖಂಡ್​, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದ ಕಾರ್ಮಿಕರು ಸಿಲುಕಿಕೊಂಡಿದ್ದಾರೆ. ಉತ್ತರಾಖಂಡದ ಸಿಎಂ ಪುಷ್ಕರ್​ ಸಿಂಗ್​ ಧಾಮಿ ಇಂದು ಘಟನಾ ಸ್ಥಳಕ್ಕೆ ಭೇಟಿ ನೀಡಿ, ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲಿಸಿದರು. ಎಲ್ಲರ ಸುರಕ್ಷಿತ ಮರುಳುವಿಕೆಗಾಗಿ ಪ್ರಾರ್ಥಿಸುತ್ತೇನೆ ಎಂದರು.(ಏಜೆನ್ಸೀಸ್​)
ಪಾಕ್‌ನಲ್ಲಿ ಅಪರಿಚಿತರ ಗುಂಡೇಟಿಗೆ ಜೈಶ್​ ಎ ಮೊಹಮ್ಮದ್‌ ಉಗ್ರ ಬಲಿ: ವಾರದಲ್ಲಿ ಇಬ್ಬರು ಉಗ್ರರ ಹತ್ಯೆ!

ಲಂಡನ್​ನಲ್ಲಿ ರಿಷಿ ಸುನಕ್ ಕುಟುಂಬದಿಂದ ದೀಪಾವಳಿ ಆಚರಣೆ; ರಾಯಲ್ ಬ್ಲೂ ಸೀರೆ ತೊಟ್ಟು ಗಮನ ಸೆಳೆದ ಅಕ್ಷತಾ ಮೂರ್ತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
