ನವದೆಹಲಿ:ಪ್ರಧಾನಿ, ರಾಷ್ಟ್ರಪತಿ, ಸಿಜೆಐ ಸೇರಿ 10 ಸಾವಿರಕ್ಕೂ ಅಧಿಕ ಭಾರತೀಯರ ಮೇಲೆ ಚೀನಾ ಮೂಲದ ಐಟಿ ಕಂಪನಿ ಡಿಜಿಟಲ್ ಬೇಹುಗಾರಿಕೆ ನಡೆಸಿದ್ದ ವಿಚಾರ ಬಯಲಾದ ಬೆನ್ನಲ್ಲೇ ಸೆಪ್ಟೆಂಬರ್ ಮೊದಲ ವಾರದಲ್ಲಿ ಭಾರತದ ಮೇಲೆ ದೊಡ್ಡ ಮಟ್ಟದ ಸೈಬರ್ ದಾಳಿ ನಡೆದಿತ್ತೆಂಬ ಮತ್ತೊಂದು ಆಘಾತಕಾರಿ ಸುದ್ದಿ ಬಹಿರಂಗವಾಗಿದೆ.
ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಮಹತ್ವದ ಮಾಹಿತಿ ಸಂಗ್ರಹ ಕೇಂದ್ರವಾಗಿರುವ ರಾಷ್ಟ್ರೀಯ ಇನ್ಪಾರ್ವೆಟಿಕ್ ಸೆಂಟರ್​ನ (ಎನ್​ಐಸಿ) ಕಂಪ್ಯೂಟರ್ ಅನ್ನು ಸೈಬರ್ ಕಳ್ಳರು ಹ್ಯಾಕ್ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸಹಿತ ದೇಶದ ಅನೇಕ ಗಣ್ಯರ, ಸರ್ಕಾರಕ್ಕೆ ಸಂಬಂಧಿಸಿದ ಡೇಟಾ ಎನ್​ಐಸಿ ಸರ್ವರ್​ನಲ್ಲಿ ಸಂಗ್ರಹವಾಗಿರುವುದರಿಂದ ಆತಂಕ ಮೂಡಿಸಿದೆ. ಮೂಲಗಳ ಪ್ರಕಾರ ಎನ್​ಐಸಿಯ ಸುಮಾರು 100 ಕಂಪ್ಯೂಟರ್​ಗಳ ಮೇಲೆ ಸೈಬರ್ ದಾಳಿ ನಡೆದಿದೆ. ಆದರೆ ಸೈಬರ್ ಕಳ್ಳರು ಡೇಟಾವನ್ನು ಕಳ್ಳತನ ಮಾಡಿದ್ದಾರೆಯೇ? ಎಷ್ಟು ಡೇಟಾ ಸೋರಿಕೆಯಾಗಿದೆ ಎಂಬ ಕುರಿತು ಇನ್ನಷ್ಟೇ ಸ್ಪಷ್ಟ ಮಾಹಿತಿ ಸಿಗಬೇಕಿದೆ.
ಕಂಪ್ಯೂಟರ್​ನಲ್ಲೇನಿತ್ತು?:ಸರ್ಕಾರದ ಪ್ರಮುಖ ಯೋಜನೆ, ಭದ್ರತೆಗೆ ಸಂಬಂಧಿಸಿದ ಮಾಹಿತಿ, ಭಾರತೀಯ ನಾಗರಿಕರ ಕುರಿತ ಡೇಟಾ, ಪ್ರಧಾನಿ, ಪ್ರಮುಖ ಸಚಿವರು, ರಾಷ್ಟ್ರೀಯ ಭದ್ರತಾ ಸಲಹೆಗಾರರು, ಸೇನೆಗೆ ಸಂಬಂಧಿಸಿದ ದಾಖಲೆಗಳು ಹ್ಯಾಕ್ ಆದ ಕಂಪ್ಯೂಟರ್​ನಲ್ಲಿದ್ದವೆಂದು ಹೇಳಲಾಗುತ್ತಿದೆ.
ಬೆಂಗಳೂರಿಗೆ ನಂಟು?
ಬೆಂಗಳೂರಿನ ಕಂಪನಿಯೊಂದರ ಹೆಸರಿನಲ್ಲಿ ಕಳಿಸಲಾಗಿದ್ದ ಇ-ಮೇಲ್ ಮೂಲಕ ಹ್ಯಾಕಿಂಗ್ ಪ್ರಕ್ರಿಯೆ ಆರಂಭ ಆಗಿರಬಹುದೆಂಬ ಶಂಕೆ ಮೂಡಿದೆ. ಇ-ಮೇಲ್​ಗೆ ಮಾಲ್​ವೇರ್ ಅಟ್ಯಾಚ್ ಮಾಡಿ ಕಳಿಸಲಾಗಿತ್ತು. ಇದರ ಲಿಂಕ್ ಡೌನ್​ಲೋಡ್ ಮಾಡುತ್ತಿದ್ದಂತೆ ಮಾಲ್​ವೇರ್ ಕೂಡ ಕಂಪ್ಯೂಟರ್​ಗೆ ಸ್ಥಳಾಂತರಗೊಂಡಿದೆ. ಈ ಮೂಲಕ ಕಂಪ್ಯೂಟರ್​ಗಳಲ್ಲಿನ ಡೇಟಾ ಕಳವಿಗೆ ಯತ್ನಿಸಲಾಗಿದೆ. ಇದು ಬೆಂಗಳೂರು ಕಂಪನಿಯ ಕೃತ್ಯವೇ ಎಂಬ ಬಗ್ಗೆಯೂ ಸಾಕಷ್ಟು ಅನುಮಾನ ಇದೆ. ನಕಲಿ ಐಪಿ ವಿಳಾಸದ ಮೂಲಕ ಬೆಂಗಳೂರಿನ ಕಂಪನಿಯ ಹೆಸರಿನಲ್ಲಿ ಇ-ಮೇಲ್ ಕಳಿಸಿರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಈ ಕೃತ್ಯದ ಹಿಂದೆ ವಿದೇಶಿ (ಚೀನಾ) ವಂಚಕರ ಕೈವಾಡ ಇರುವ ಸಾಧ್ಯತೆ ಇದೆ ಎಂದೂ ಸೈಬರ್ ತಜ್ಞರು ಶಂಕಿಸಿದ್ದಾರೆ.
ಬಯಲಾಗಿದ್ಹೇಗೆ?
ಸೆಪ್ಟೆಂಬರ್ ಮೊದಲ ವಾರದಲ್ಲಿ ಎನ್​ಐಸಿಗೆ ಬೆಂಗಳೂರಿನ ಕಂಪನಿಯೊಂದರಿಂದ ಇ ಮೇಲ್ ಬಂದಿತ್ತು. ಅದನ್ನು ಎನ್​ಐಸಿಯ ಓರ್ವ ಸಿಬ್ಬಂದಿ ಓಪನ್ ಮಾಡಿದ್ದರು. ಇದಾದ ಬಳಿಕ ಆ ಕಂಪ್ಯೂಟರ್​ನಲ್ಲಿ ಅನೇಕ ತಾಂತ್ರಿಕ ಸಮಸ್ಯೆ ಎದುರಾಯಿತು. ಇದನ್ನು ಪರಿಶೀಲಿಸಿದಾಗ ಕಂಪ್ಯೂಟರ್ ಹ್ಯಾಕ್ ಆಗಿರುವುದು ಬೆಳಕಿಗೆ ಬಂದಿದೆ. ದೆಹಲಿ ಪೊಲೀಸ್ ವಿಶೇಷ ವಿಭಾಗಕ್ಕೆ ದೂರು ನೀಡಲಾಗಿದ್ದು, ತನಿಖೆ ನಡೆಯುತ್ತಿದೆ.
ಚೀನಾ ಕೈವಾಡ?
ಭಾರತದ ಗಣ್ಯ ವ್ಯಕ್ತಿಗಳು, ಸರ್ಕಾರದ ಸೂಕ್ಷ್ಮ ಮಾಹಿತಿಗಳ ಮೇಲೆ ಕಣ್ಣಿಟ್ಟಿರುವ ಚೀನಾ ಈ ಕೃತ್ಯ ಎಸಗಿರಬಹುದೆಂಬ ಅನುಮಾನ ಮೂಡಿದೆ. ಆದರೆ ಈ ಕುರಿತು ಯಾವುದೇ ಸುಳಿವು ಸಿಕ್ಕಿಲ್ಲ. ಸರ್ಕಾರ ಅಥವಾ ತನಿಖಾ ಸಂಸ್ಥೆಗಳೂ ಕೂಡ ಈವರೆಗೆ ಅಧಿಕೃತ ಮಾಹಿತಿ ನೀಡಿಲ್ಲ. ನಕಲಿ ಖಾತೆ ಮೂಲಕ ಅಮೆರಿಕದಿಂದ ಇ-ಮೇಲ್ ಕಳಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಇ-ಗವರ್ನ್​ವೆುಂಟ್ ಉಸ್ತುವಾರಿ
ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆಯ ಅಡಿ ಎನ್​ಐಸಿ ಕಾರ್ಯನಿರ್ವಹಿಸುತ್ತದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯಗಳ ಇ-ಗವರ್ನ್​ವೆುಂಟ್ ಯೋಜನೆಗಳ ಉಸ್ತುವಾರಿಯನ್ನು ಇದು ನೋಡಿಕೊಳ್ಳುತ್ತದೆ. ವಿವಿಧ ಸರ್ಕಾರಿ ವಿಭಾಗಗಳಿಗೆ ಇದು ಸೇವೆ ಒದಗಿಸುತ್ತದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರ ಕುರಿತು ಸಂಶೋಧನೆ, ಅಭಿವೃದ್ಧಿ ಹಾಗೂ ಸಾಮರ್ಥ್ಯ ಹೆಚ್ಚಳ ಇದರ ಪ್ರಮುಖ ಜವಾಬ್ದಾರಿಯಾಗಿದೆ. ಜತೆಗೆ ಸೈಬರ್ ಕ್ಷೇತ್ರಕ್ಕೆ ಮೂಲ ಸೌಕರ್ಯಗಳನ್ನು ಇದು ಒದಗಿಸುತ್ತದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
