ನವದೆಹಲಿ:ಮಹಿಳಾ ಕುಸ್ತಿಪಟುಗಳಿಗೆ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಷನ್(WFI)​ನ ನಿರ್ಗಮಿತ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್​ ಭೂಷಣ್​ ಶರಣ್​ ಸಿಂಗ್ ಲೈಂಗಿಕ ಉದ್ದೇಶವಿಲ್ಲದೆ ಮಹಿಳೆಯರನ್ನು ತಬ್ಬಿಕೊಳ್ಳುವುದು ಅಥವಾ ಅವರನ್ನು ಮುಟ್ಟುವುದು ಯಾವುದೇ ತರಹದ ಅಪರಾಧವಲ್ಲ ಎಂದು ನ್ಯಾಯಾಲಯದ ಮುಂದೆ ಹೇಳಿದ್ದಾರೆ.
ಪ್ರಕರಣ ಸಂಬಂಧ ಬುಧವಾರ ದೆಹಲಿಯ ರೂಸ್​ ಅವೆನ್ಯೂ ನ್ಯಾಯಾಲಯಕ್ಕೆ ಹಾಜರಾದ ಬ್ರಿಜ್​ ಭೂಷಣ್​ ತಮ್ಮ ವಿರುದ್ಧ ಮಾಡಿರುವ ಆರೋಪಗಳನ್ನು ವಿರೋಧಿಸಿ ವಕೀಲರ ಮೂಲಕ ವಾದವನ್ನು ಮಂಡಿಸಿದ್ದಾರೆ. ಬ್ರಿಜ್​ ಭೂಷಣ್​ ಪರ ಹಿರಿಯ ವಕೀಲ್​ ರಾಜೀವ್​ ಮೋಹನ್ ವಕಾಲತ್ತು ವಹಿಸಿದ್ದಾರೆ. ನ್ಯಾಯಮೂರ್ತಿ ಹರ್ಜಿತ್​ಸಿಂಗ್​ ಜಸ್ಬಾಲ್​ ಅರ್ಜಿ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:VIDEO| ನೋಡ ನೋಡುತ್ತಿದ್ದಂತೆ ಕಾರುಗಳ ಮೇಲೆ ಪಲ್ಟಿಯಾದ ಲಾರಿ; ಇಬ್ಬರು ಮೃತ್ಯು
ಸಂಸದ ಬ್ರಿಜ್​ ಭೂಷಣ್​ ಪರ ವಾದ ಮಂಡಿಸಿದ ವಕೀಲ ರಾಜೀವ್​ ಮೋಹನ್​ ನಮ್ಮ ಕಕ್ಷಿದಾರರು ಆಟಗಾರರನ್ನು ದೆಹಲಿಯ ಅಶೋಕ ರಸ್ತೆ ಹಾಗೂ ಸಿರಿ ಫೋರ್ಟ್​ ಆಡಿಟೋರಿಯಂನಲ್ಲಿ 20-25 ಸೆಕೆಂಡುಗಳ ಕಾಲ ತಬ್ಬಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಭಾರತದ ಹೊರಡಗೆ ಕೂಡ ಅಪರಾಧ ನಡೆದಿದೆ ಎಂದು ಆರೋಪಿಸಲಾಗಿರುವುದರಿಂದ ನ್ಯಾಯಾಲಯಕ್ಕೆ ಈ ಪ್ರಕರಣ ವಿಚಾರಣೆ ನಡೆಸುವ ಯಾವುದೇ ಅಧಿಕಾರವಿಲ್ಲ ಎಂದು ವಕೀಲರು ವಾದ ಮಂಡಿಸಿದ್ದಾರೆ.
ಕುಸ್ತಿಪಟುಗಳು ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ಯಾವುದೇ ಲೈಂಗಿಕ ಉದ್ದೇಶವಿಲ್ಲದೆ ಆಟಗಾರರನ್ನು ತಬ್ಬಿಕೊಳ್ಳಲಾಗಿದೆ. ಇದು ಯಾವುದೇ ತರಹದ ಅಪರಾಧವಲ್ಲ. ಕುಸ್ತಿಯಂತಹ ಕ್ರೀಡೆಗಳಲ್ಲಿ ಕೋಚ್​ ಹೆಚ್ಚಿನವರು ಪುರುಷರೇ ಆಗಿರುತ್ತಾರೆ. ಮಹಿಳಾ ಕೋಚ್​ಗಳು ತರಬೇತಿ ನೀಡುವುದು ತೀರಾ ಅಪರೂಪ. ಆಟದಲ್ಲಿ ಗೆದ್ದಾಗ-ಸೋತಾಗ ತಬ್ಬಿಕೊಳ್ಳುವುದು ಸಹಜ. ಹಾಗೆಂದ ಮಾತ್ರಕ್ಕೆ ಅದನ್ನು ಅಪರಾಧ ಎಂದು ಹೇಳಲಾಗದು. ಬ್ರಿಜ್​ ಭೂಷಣ್​ ಅವರ ವಿಚಾರದಲ್ಲೂ ಇದೇ ನಡೆದಿದ್ದು, ಪುರುಷ ಕೋಷ್​ ಆಟಗಾರರನ್ನು ತಬ್ಬಿಕೊಂಡರೆ ತಪ್ಪಲ್ಲ ಎಂದು ವಕೀಲರು ವಾದ ಮಂಡಿಸಿದ್ದಾರೆ. ವಾದ-ಪ್ರತಿವಾದವನ್ನೂ ಸುಧೀರ್ಘವಾಗಿ ಆಲಿಸಿದ ನ್ಯಾಯಾಲಯವೂ ವಿವಾರಣೆಯನ್ನೂ ಗುರುವಾರ ನಡೆಸುವುದಾಗಿ ತಿಳಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × five =
Remember me
