ಲಖನೌ:ಬಾಲಿವುಡ್​ನಲ್ಲಿ 1999ರಲ್ಲಿ ತೆರೆಕಂಡ “ಹುಮ್​ ದಿಲ್​ ದೆ ಚುಕೆ ಸನಾಮ್​” ಹೆಸರಿನ ಬ್ಲಾಕ್​​ಬಸ್ಟರ್​ ಸಿನಿಮಾ ಕತೆಯನ್ನೇ ಹೋಲುವ ಪ್ರಸಂಗವೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ. ಪತ್ನಿಯ ಪ್ರಿಯಕರನನ್ನು ಹುಡುಕಲು ನೆರವಾದ ಪತಿರಾಯ, ಆತನೊಂದಿಗೆ ಮದುವೆ ಮಾಡಿಸಿರುವ ಘಟನೆ ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯಲ್ಲಿ ನಡೆದಿದೆ.
ಈ ನೈಜ ಘಟನೆಯಲ್ಲಿ ಹುಮ್​ ದಿಲ್​ ದೆ ಚುಕೆ ಸನಾಮ್​ ಸಿನಿಮಾ ಕತೆಯ ಏಕೈಕ ಬದಲಾವಣೆ ಏನೆಂದರೆ, ಇಲ್ಲಿ ಮಹಿಳೆ ತನ್ನ ಪ್ರಿಯಕರನೊಂದಿಗೆ ಮುಂದಿನ ಜೀವನ ಸಾಗಿಸಲು ಒಪ್ಪಿಕೊಂಡು ಆತನೊಂದಿಗೆ ತೆರಳಿದಳು.
ಕಳೆದ ಶುಕ್ರವಾರ ರಾತ್ರಿ ಮಹಿಳೆಯ ಪ್ರಿಯಕರ ಆಕಾಶ್ ಷಾ, ಆಕೆಯನ್ನು ಭೇಟಿಯಾಗಲು ಡಿಯೋರಿಯಾದಲ್ಲಿರುವ ಆಕೆಯ ಅತ್ತೆಯ ಮನೆಗೆ ಬಂದಾಗ ಈ ಪ್ರೇಮ ಸಂಬಂಧ ಬೆಳಕಿಗೆ ಬಂದಿದೆ. ವಿಷಯ ತಿಳಿದ ಸ್ಥಳೀಯರು ಆಕಾಶ್ ಷಾನನ್ನು ಹಿಡಿದು ಸ್ಥಳದಲ್ಲೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಇದನ್ನೂ ಓದಿ:ಇದು ಜಗತ್ತಿನಲ್ಲೇ ಅತೀ ದೊಡ್ಡ ಸೌತೆಕಾಯಿ..! ಇದನ್ನು ಕತ್ತರಿಸಿದರೆ ಮದುವೆಯ ಔತಣದಲ್ಲಿ ಅತಿಥಿಗಳೆಲ್ಲ ತಿನ್ನಬಹುದು…
ಅಂದಹಾಗೆ ಆಕಾಶ್​, ಬಿಹಾರದ ಗೋಪಾಲ್‌ಗಂಜ್‌ನ ನಿವಾಸಿ. ಮಹಿಳೆಯೊಂದಿಗೆ ಎರಡು ವರ್ಷಗಳಿಂದ ಪ್ರೇಮ ಸಂಬಂಧ ಹೊಂದಿದ್ದನು. ತನ್ನ ಪ್ರೇಯಸಿ, ಬೇರೆಯೊಬ್ಬನನ್ನು ಮದುವೆಯಾದ ನಂತರವೂ ಆಕೆಯನ್ನು ಮರೆಯಲು ಸಾಧ್ಯವಾಗದೇ ಆಕೆಯನ್ನು ಭೇಟಿಯಾಗಲು ನಿರ್ಧರಿಸಿದನು ಮತ್ತು ಆಕೆಯ ಅತ್ತೆ ಮನೆಗೆ ಬಂದಾಗ ಸಿಕ್ಕಬಿದ್ದು ಧರ್ಮದೇಟು ತಿಂದಿದ್ದಾನೆ.
ಆದರೆ, ಇಡೀ ಸನ್ನಿವೇಶ ಅನಿರೀಕ್ಷಿತ ತಿರುವು ಪಡೆದುಕೊಂಡಿದ್ದು, ಮಹಿಳೆಯ ಪತಿ ತೆಗೆದುಕೊಂಡ ನಿರ್ಧಾರದಿಂದ. ಸ್ಥಳದಲ್ಲಿ ಇನ್ನಷ್ಟು ಕಿರುಚಾಟವನ್ನು ಮಾಡದೇ ತಾಳ್ಮೆಯಿಂದಲೇ ಪರಿಸ್ಥಿತಿಯನ್ನು ನಿಭಾಯಿಸಿದ ಪತಿ, ತನ್ನ ಪತ್ನಿಯನ್ನು ಪ್ರಿಯಕರನೊಂದಿಗೆ ಹೋಗಲು ಅನುಮತಿಸಿದ್ದಲ್ಲದೆ, ಮದುವೆ ಸಹ ಮಾಡಿಸಿದನು. ಪ್ರಿಯಕರನೊಂದಿಗೆ ಹೋಗಲು ಬಿಡುವಂತೆ ಪತ್ನಿ ತನ್ನ ಪತಿಗೆ ಮನವಿ ಮಾಡಿದ್ದರಿಂದ ಇದಕ್ಕೆ ಪತಿ ಒಪ್ಪಿ, ಮದುವೆ ಮಾಡಿಸಿದ್ದಾನೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಎರಡೂ ಕುಟುಂಬಗಳ ಒಪ್ಪಿಗೆ ಪಡೆದ ನಂತರ ವ್ಯಕ್ತಿ, ತನ್ನ ಪತ್ನಿ ಮತ್ತು ಆಕೆಯ ಗೆಳೆಯನನ್ನು ದೇವಸ್ಥಾನಕ್ಕೆ ಕರೆದೊಯ್ದು ಮದುವೆ ಮಾಡಿದ್ದಾನೆ. ನಂತರ ಪ್ರೇಮಿ ಬಂದಿದ್ದ ಮೋಟಾರ್ ಸೈಕಲ್​ನಲ್ಲಿಯೇ ಇಬ್ಬರನ್ನೂ ಕಳುಹಿಸಿದ್ದಾನೆಂದು ತಿಳಿದುಬಂದಿದೆ.(ಏಜೆನ್ಸೀಸ್​)
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:4 × 2 =
Remember me
