ನವದೆಹಲಿ:ಕರೊನಾ ವೈರಸ್ ಹಾವಳಿ ತಡೆಯಲು ವಿಧಿಸಲಾಗಿರುವ ಮೂರನೇ ಹಂತದ ಲಾಕ್‌ಡೌನ್ ಅಂತಿಮ ಹಂತಕ್ಕೆ ಬರುತ್ತಿದ್ದಂತೆಯೇ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ವಿಡಿಯೋ ಕಾನ್ಫರೆನ್ಸ್ ನಡೆಸಿದರು.
ಇದನ್ನೂ ಓದಿ:ಸಿಎಂಗಳೊಂದಿಗಿನ ವಿಡಿಯೋ ಕಾನ್ಫರೆನ್ಸ್​ ಪ್ರಾರಂಭಿಸಿದ ಪ್ರಧಾನಿ; ಪ್ರತಿಯೊಬ್ಬರಿಗೂ 20 ನಿಮಿಷ ಅವಕಾಶ
‘‘ಈ ಹೋರಾಟದಲ್ಲಿ ಇಡೀ ವಿಶ್ವವೇ ನಮ್ಮ ಪ್ರಯತ್ನವನ್ನು ಮತ್ತು ಯಶಸ್ಸನ್ನು ಕೊಂಡಾಡುತ್ತಿದೆ. ಇದರಲ್ಲಿ ರಾಜ್ಯ ಸರ್ಕಾರಗಳು ಬಹು ಮಹತ್ವದ ಪಾತ್ರ ನಿಭಾಯಿಸಿವೆ. ತಮ್ಮ ಹೊಣೆಗಾರಿಕೆ ಏನು ಎಂಬುದನ್ನು ಅರಿತು ಆ ಪ್ರಕಾರ ನಡೆದುಕೊಂಡಿವೆ’’ ಎಂದು ಮೋದಿ ಪ್ರಶಂಸೆ ವ್ಯಕ್ತಪಡಿಸಿದರು.
‘‘ಜನ ಎಲ್ಲಿದ್ದಾರೋ ಅಲ್ಲೇ ಇರಬೇಕು ಎಂಬುದಾಗಿ ನಾವು ಹೇಳಿದ್ದೆವು. ಆದರೆ ಕಷ್ಟ ಕಾಲದಲ್ಲಿ ತನ್ನ ಮನೆಗೆ ಹೋಗುವುದು ಮನುಷ್ಯನ ಮೂಲ ಸ್ವಭಾವಗಳಲ್ಲೊಂದು. ಆದ್ದರಿಂದಲೇ ನಾವು ನಮ್ಮ ನೀತಿ-ನಿರ್ಧಾರಗಳಲ್ಲಿ ಅಲ್ಪ ಬದಲಾವಣೆ ಮಾಡಿಕೊಂಡೆವು. ಅದೇ ವೇಳೆ, ಕರೊನಾ ವೈರಸ್ ಹಳ್ಳಿಗಳಿಗೂ ಹರಡದಂತೆ ನೋಡಿಕೊಳ್ಳಬೇಕಾದ್ದು ನಮ್ಮ ಕರ್ತವ್ಯ. ಅದು ದೊಡ್ಡ ಸವಾಲೂ ಹೌದು’’ ಎಂದು ಮೋದಿ ಹೇಳಿದರು. ಇದು ಕರೊನಾಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಜತೆಗಿನ ಮೋದಿಯವರ ಐದನೇ ವಿಡಿಯೋ ಕಾನ್ಫರೆನ್ಸ್.
ಇದನ್ನೂ ಓದಿ:ತವರಿಗೆ ತೆರಳಲು ವಲಸಿಗರ ಕಾತುರ
ಸಭೆಯಲ್ಲಿ ಉಪಸ್ಥಿತರಿದ್ದ ಗೃಹ ಸಚಿವ ಅಮಿತ್ ಶಾ ಮಾತನಾಡಿ, ‘‘ಆರೋಗ್ಯಸೇತು ಮೊಬೈಲ್ ಅಪ್ಲಿಕೇಶನ್ ಅತ್ಯಂತ ಮಹತ್ವದ ಪಾತ್ರ ನಿಭಾಯಿಸುವ ಶಕ್ತಿ ಹೊಂದಿದೆ. ಅದನ್ನು ಜನಪ್ರಿಯಗೊಳಿಸಲು ಮತ್ತು ಎಲ್ಲರೂ ಬಳಸುವಂತೆ ಮಾಡಲು ಸಹಕಾರ ನೀಡಿ’’ ಎಂದು ಎಲ್ಲ ಮುಖ್ಯಮಂತ್ರಿಗಳನ್ನು ಕೋರಿದರು.
ಈ ಸಭೆಯಲ್ಲಿ 19ನೇಯವರಾಗಿ ನಮ್ಮ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಾತನಾಡಲಿದ್ದಾರೆ. ಪ್ರತಿಯೊಬ್ಬ ಸಿಎಂಗೂ ತಲಾ 20 ನಿಮಿಷ ಮಾತನಾಡಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿ:ಕರೊನಾದೊಂದಿಗೆ ಬದುಕಲು ಕಲಿಯಿರಿ, ಇನ್ನೆರಡು ವರ್ಷ ಲಸಿಕೆ ಅನುಮಾನ…!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
