ಅಗರ್ತಲಾ: ತ್ರಿಪುರಾದ ಗೋಮತಿ ಜಿಲ್ಲೆಯ ಶಕ್ತಿ ಪೀಠಗಳಲ್ಲಿ ಒಂದಾದ ತ್ರಿಪುರೇಶ್ವರಿ ದೇವಸ್ಥಾನದ ಪವಿತ್ರ ಕೊಳದಲ್ಲಿ ಮಾನವನ ತಲೆಬುರುಡೆ ಪತ್ತೆಯಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ:ಗೋವಾ ಬೀಚ್‌ನಲ್ಲಿ ಕನ್ನಡತಿ ಖ್ಯಾತಿಯ ಸಾರಾ ಅಣ್ಣಯ್ಯ; ನಿಜ ಜೀವನದಲ್ಲಿ ಹೀಗಿದ್ದಾರಾ ಎಂದ ಫ್ಯಾನ್ಸ್​​​!
ಗುರುವಾರ ಬೆಳಗ್ಗೆ ಕಲ್ಯಾಣ್ ಸಾಗರದಲ್ಲಿ ತಲೆಬುರುಡೆ ತೇಲುತ್ತಿರುವುದನ್ನು ಗಮನಿಸಿದ ಜನರ ಗುಂಪೊಂದು ಪೊಲೀಸ್​​ ಅಧಿಕಾರಿಗಳಿಗೆ ಮಾಹಿತಿ ನೀಡಿದೆ. ತ್ರಿಪುರ ಸುಂದರಿ ದೇವಸ್ಥಾನ ಎಂದು ಕರೆಯಲ್ಪಡುವ 500 ವರ್ಷಗಳಷ್ಟು ಹಳೆಯದಾದ ಕಲ್ಯಾಣ್ ಸಾಗರ ಕೊಳಕ್ಕೆ ತಲೆಬುರುಡೆ ಹೇಗೆ ಬಂದಿವೆ ಎಂದು ಪೊಲೀರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:Alternative To Tomatoes; ಟೊಮ್ಯಾಟೋ ಬದಲಿಗೆ ಅಡುಗೆಗೆ ಈ 5 ಪದಾರ್ಥ ಬಳಸಿ…
ತಲೆಬುರುಡೆ ಪತ್ತೆಯಾದ ನಂತರ ಕಲ್ಯಾಣ್ ಸಾಗರದ ನೀರು ಅಶುದ್ಧವಾಗಿರುವ ಕಾರಣ ಮುಂದಿನ 45 ದಿನಗಳವರೆಗೆ ಬಳಸಲಾಗುವುದಿಲ್ಲ ಎಂದು ದೇವಾಲಯದ ವ್ಯವಸ್ಥಾಪಕ ಮಾಣಿಕ್ ದತ್ತಾ ತಿಳಿಸಿದ್ದಾರೆ. ಕಲ್ಯಾಣ ಸಾಗರವನ್ನು ಮತ್ತೆ ಪವಿತ್ರಗೊಳಿಸಲು ನಾವು 45 ದಿನಗಳ ನಂತರ ಪೂಜೆ ಮಾಡಬೇಕಾಗಿದೆ. ಈ ದೇವಾಲಯವನ್ನು 1501 ರಲ್ಲಿ ಮಹಾರಾಜ ಧಾನ್ಯ ಮಾಣಿಕ್ಯ ನಿರ್ಮಿಸಿದನು. ಸದ್ಯ ಇದರ ಕಾರ್ಯಾಚರಣೆ ರಾಜ್ಯ ಸರ್ಕಾರದ ಕೈಯಲ್ಲಿದೆ.
ಇದನ್ನೂ ಓದಿ:Alternative To Tomatoes; ಟೊಮ್ಯಾಟೋ ಬದಲಿಗೆ ಅಡುಗೆಗೆ ಈ 5 ಪದಾರ್ಥ ಬಳಸಿ…
ಮಾತನಾಡಿದ ಮುಖ್ಯಮಂತ್ರಿ ಮಾಣಿಕ್ ಸಹಾ, “ಪೊಲೀಸರು ತಲೆಬುರುಡೆಯನ್ನು ಪತ್ತೆಹಚ್ಚಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ. ತ್ರಿಪುರಾ ಸ್ಟೇಟ್ ರೈಫಲ್ಸ್ (ಟಿಎಸ್‌ಆರ್) ನ ಡೈವರ್‌ಗಳು ಹೆಚ್ಚಿನ ಮಾನವ ಅವಶೇಷಗಳಿವೆಯೇ ಎಂದು ಕಂಡುಹಿಡಿಯಲು ಕೊಳವನ್ನು ಹುಡುಕಿದರು, ಆದರೆ ಬೇರೆ ಏನೂ ಕಂಡುಬಂದಿಲ್ಲ” ಎಂದಿದ್ದಾರೆ.
ಇದನ್ನೂ ಓದಿ:ಮಳೆಗಾಲದಲ್ಲಿ ಹೆಚ್ಚಾಗುತ್ತೆ ಜಿಗಣೆಗಳ ಭೀತಿ..!; ರಕ್ತ ಹೀರುವ ಇವುಗಳನ್ನು ಓಡಿಸಲು ಈ 5 ಸಲಹೆಗಳನ್ನು ಪಾಲಿಸಿ…
ಸ್ಥಳೀಯ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿ ಬಾಬುಲ್ ದಾಸ್ ಮಾತನಾಡಿ, “ಪೊಲೀಸರು ದೇವಸ್ಥಾನ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ, ಆದರೆ ಇದುವರೆಗೆ ಯಾವುದೇ ಸುಳಿವು ಸಿಕ್ಕಿಲ್ಲ. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ನಾವು ಇಡೀ ಗೋಮತಿ ಜಿಲ್ಲೆಯಲ್ಲಿ ಕಾಣೆಯಾದವರ ಪಟ್ಟಿಯನ್ನು ಪರಿಶೀಲಿಸುತ್ತಿದ್ದೇವೆ, ಆದರೆ ಇದುವರೆಗೆ ಯಾವುದೇ ಅನುಮಾನಾಸ್ಪದವಾಗಿ ಕಂಡುಬಂದಿಲ್ಲ “ಎಂದು ಹೇಳಿದರು.
5 ನದಿಗಳ ಸಂಗಮವಿರುವ ವಿಶ್ವದ ಏಕೈಕ ಸ್ಥಳ ಯಾವುದು ಗೊತ್ತಾ?
5 ನದಿಗಳ ಸಂಗಮವಿರುವ ವಿಶ್ವದ ಏಕೈಕ ಸ್ಥಳ ಯಾವುದು ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 3 =
Remember me
