ನವದೆಹಲಿ:ಅನೇಕ ವರ್ಷಗಳಿಂದ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಆಶ್ರಯ ಪಡೆದಿದ್ದ ಜಮ್ಮು ಮತ್ತು ಕಾಶ್ಮೀರದ ನೂರಾರು ಸ್ಥಳೀಯ ಉಗ್ರರು ತಮ್ಮ ಆಸ್ತಿಗಳನ್ನು ಕಳೆದುಕೊಳ್ಳುವ ಸನ್ನಿವೇಶ ಎದುರಾಗಿದೆ. ಜಮ್ಮು ಮತ್ತು ಕಾಶ್ಮೀರದ ಆಡಳಿತ ಉಗ್ರರನ್ನು ಘೋಷಿತ ಅಪರಾಧಿಗಳೆಂದು ಘೋಷಿಸುವುದು ಮತ್ತು ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಕ್ರಮವನ್ನು ಆರಂಭಿಸಿದೆ.
ದೇಶ ದ್ರೋಹಿಗಳು… ಪಾಕಿಸ್ತಾನದಲ್ಲಿ ಆಶ್ರಯ ಪಡೆದಿದ್ದ ಜನರು ಉಗ್ರ ಚಟುವಟಿಕೆಯಲ್ಲಿ ತೊಡಗಿದ ನಂತರ ಇದೀಗ ಭಯೋತ್ಪಾದನೆಯನ್ನು ಉತ್ತೇಜಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸ್​ ಮಹಾ ನಿರ್ದೇಶಕರಾದ ದಿಲ್ಬಾಗ್​ ಸಿಂಗ್ ಮಾಧ್ಯಮಗಳಿಗೆ​ ತಿಳಿಸಿದ್ದಾರೆ.
ಈಗಾಗಲೇ ದೊಡಾ ಜಿಲ್ಲೆಯಲ್ಲಿ ಕ್ರಮವನ್ನು ಆರಂಭಿಸಿದ್ದೇವೆ. ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಆಶ್ರಯ ಪಡೆದಿದ್ದ 16 ಸ್ಥಳೀಯರನ್ನು ಘೋಷಿತ ಅಪರಾಧಿಗಳೆಂದು ಘೋಷಣೆ ಮಾಡಿದ್ದೇವೆ. ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದೇವೆ ಎಂದು ದಿಲ್ಬಾಗ್​ ಸಿಂಗ್​ ಇದೇ ಸಂದರ್ಭದಲ್ಲಿ ಹೇಳಿದರು.
ಇದನ್ನೂ ಓದಿ:VIDEO: ಸೆಮಿಫೈನಲ್‌ಗೇರಿದ ಅಲ್ಕರಾಜ್, ಸಬಲೆಂಕಾ: ಪ್ರೇಕ್ಷಕರ ಗ್ಯಾಲರಿಯಲ್ಲಿ ಕಾಣಿಸಿಕೊಂಡ ಟೀಮ್ ಇಂಡಿಯಾ ಮಾಜಿ ನಾಯಕ
ಜಮ್ಮು ಮತ್ತು ಕಾಶ್ಮೀರದ ಪೋಲಿಸ್‌ನ ಗುಪ್ತಚರ ವಿಭಾಗವು ಈಗಾಗಲೇ 4,200 ಕ್ಕೂ ಹೆಚ್ಚು ಜನರ ಪಟ್ಟಿಯನ್ನು ಸಿದ್ಧಪಡಿಸಿದೆ. ಇವರಲ್ಲಿ ಹೆಚ್ಚಿನವರು 1990 ರಿಂದ ಪಾಕ್​ ಆಕ್ರಮಿತ ಪಾಕಿಸ್ತಾನದಲ್ಲಿದ್ದಾರೆ. ಅವರ ಆಸ್ತಿಗಳ ವಿವರಗಳನ್ನು ನೋಂದಣಿಗಳು ಮತ್ತು ಆದಾಯ ಇಲಾಖೆಯ ಇನ್‌ಸ್ಪೆಕ್ಟರ್-ಜನರಲ್ ಜೊತೆಗೆ ಹಂಚಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದರರ್ಥ “ಘೋಷಿತ ಅಪರಾಧಿ” ಎಂದು ಗೊತ್ತುಪಡಿಸಿದ ಯಾವುದೇ ವ್ಯಕ್ತಿಯ ಆಸ್ತಿಯನ್ನು ಮಾರಾಟ ಮಾಡಲಾಗುವುದಿಲ್ಲ ಅಥವಾ ವರ್ಗಾಯಿಸಲು ಆಗುವುದಿಲ್ಲ.
ಇದಿಷ್ಟೇ ಅಲ್ಲದೆ, ಉದ್ದೇಶಪೂರ್ವಕವಾಗಿ ಭಯೋತ್ಪಾದಕರಿಗೆ ಆಶ್ರಯ ನೀಡಿದ ಆರೋಪಿಗಳ ಆಸ್ತಿಗಳನ್ನೂ ಸಹ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜಪ್ತಿ ಮಾಡುತ್ತಿದ್ದಾರೆ. ಒಂದು ಕಾಲದಲ್ಲಿ ಭಯೋತ್ಪಾದನೆಯ ಕೇಂದ್ರವೆಂದು ಪರಿಗಣಿಸಲ್ಪಟ್ಟಿದ್ದ ಜಮ್ಮು ಮತ್ತು ಕಾಶ್ಮೀರದ ಸೋಪೋರ್‌ನಲ್ಲಿ ಗುರುವಾರ ಜನರನ್ನು ಉದ್ದೇಶಿಸಿ ಮಾತನಾಡಿದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಉಗ್ರರಿಗೆ ಆಶ್ರಯವನ್ನು ನೀಡದಂತೆ ಒತ್ತಾಯಿಸಿದರು ಮತ್ತು ಭಯೋತ್ಪಾದನೆ ಹಾಗೂ ಅದರ ಮುಳ್ಳನ್ನು ಜಮ್ಮು ಮತ್ತು ಕಾಶ್ಮೀರದಿಂದ ಬೇರು ಸಮೇತ ಕಿತ್ತು ಹಾಕಬೇಕಿದೆ ಎಂದು ಕೇಂದ್ರ ಸರ್ಕಾರದ ಬದ್ಧತೆಯನ್ನು ಇದೇ ಸಂದರ್ಭದಲ್ಲಿ ಪುನರುಚ್ಚರಿಸಿದರು.
1990ರಲ್ಲಿ ಶಸ್ತ್ರಾಸ್ತ್ರ ತರಬೇತಿಗಾಗಿ ಸಾವಿರಾರು ಯುವಕರು ಗಡಿ ನಿಯಂತ್ರಣ ರೇಖೆಯನ್ನು ದಾಟಿ ಪಿಒಕೆ ಸೇರಿದ್ದರು. ಇವರಲ್ಲಿ ಹೆಚ್ಚಿನವರು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಮರಳಿದರು. ಕಳೆದ ಮೂರು ದಶಕಗಳಲ್ಲಿ ಈ ಪ್ರದೇಶದಲ್ಲಿ ಎನ್​ಕೌಂಟರ್‌ಗಳಲ್ಲಿ 23,000ಕ್ಕೂ ಹೆಚ್ಚು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಕೊಂದಿದ್ದಾರೆ. 2010ರಲ್ಲಿ ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಪಿಒಕೆಯಿಂದ ಹಿಂತಿರುಗಲು ಬಯಸಿದವರಿಗೆ “ಶರಣಾಗತಿ ಮತ್ತು ಪುನರ್ವಸತಿ” ನೀತಿಯನ್ನು ಘೋಷಿಸಿತು. ಸುಮಾರು 300 ಜನರು ತಮ್ಮ ಕುಟುಂಬಗಳೊಂದಿಗೆ ಹಿಂತಿರುಗಿದರು. ಈಗಲೂ 4000ಕ್ಕೂ ಅಧಿಕ ಮಂದಿ ಅಲ್ಲಿಯೇ ಉಳಿದಿದ್ದಾರೆ.
ಇದನ್ನೂ ಓದಿ:3 ಪರೀಕ್ಷೆ ಶಿಕ್ಷಕರಿಗೆ ಹೊರೆ, ಕಲಿಕೆಗೆ ಬರೆ; ಪಠ್ಯೇತರ ಚಟುವಟಿಕೆ ಹೆಚ್ಚಳ, ಪರೀಕ್ಷಾ ಕೆಲಸ ಹೆಚ್ಚುವರಿ ಸೇರ್ಪಡೆ
ಉಗ್ರರ ಎನ್‌ಕೌಂಟರ್‌ಗಳ ಹೊರತಾಗಿ, ರಾಷ್ಟ್ರೀಯ ತನಿಖಾ ಸಂಸ್ಥೆ ಸೇರಿದಂತೆ ಭದ್ರತಾ ಏಜೆನ್ಸಿಗಳು ಭಯೋತ್ಪಾದನೆಯ ಹಣಕಾಸು ಚಟುವಟಿಕೆಗಳು ಮತ್ತು ಅದರ ಬೆಂಬಲ ನೆಲೆಗಳನ್ನು ಗುರಿಯಾಗಿಸಿಕೊಂಡಿವೆ. ಭಯೋತ್ಪಾದಕರಾಗಲು ಪಿಒಕೆಗೆ ದಾಟಿದ ಜಮ್ಮು ಮತ್ತು ಕಾಶ್ಮೀರದ ಸ್ಥಳೀಯರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದು ತನಿಖಾ ಸಂಸ್ಥೆಗಳ ದಾಳಿಯ ಭಾಗವಾಗಿದೆ.(ಏಜೆನ್ಸೀಸ್​)
ಬರ ಘೋಷಣೆಗೆ ಗರ; 134 ತಾಲೂಕಲ್ಲಿ ಮರುಸಮೀಕ್ಷೆ ನಂತರ ಕ್ರಮ

ದ್ವೇಷ ನಿರ್ಮೂಲನೆವರೆಗೆ ಭಾರತ್ ಜೋಡೋ ಯಾತ್ರೆ: ರಾಹುಲ್​ ಗಾಂಧಿ

VIDEO: ಸೆಮಿಫೈನಲ್‌ಗೇರಿದ ಅಲ್ಕರಾಜ್, ಸಬಲೆಂಕಾ: ಪ್ರೇಕ್ಷಕರ ಗ್ಯಾಲರಿಯಲ್ಲಿ ಕಾಣಿಸಿಕೊಂಡ ಟೀಮ್ ಇಂಡಿಯಾ ಮಾಜಿ ನಾಯಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 6 =
Remember me
