ನವದೆಹಲಿ:ಪ್ರವಾಸಿಗರು ಎಸೆದಂತಹ ಕಸದ ರಾಶಿಯಲ್ಲಿ ಹಸಿವಿನಿಂದ ಬಳಲುತ್ತಿದ್ದ ಆನೆಯೊಂದು ಆಹಾರ ಹುಡುಕುತ್ತಾ ಕೊನೆಗೆ ಪ್ಲಾಸ್ಟಿಕ್​ ತಿಂದಂತಹ ಘಟನೆ ಮನಕಲಕುವಂತಿದೆ.
ಪಶ್ಚಿಮ ಬಂಗಾಳದದಲ್ಲಿ ಈ ಹೃದಯ ಬಿರಿಯುವ ಘಟನೆ ವರದಿಯಾಗಿದೆ. ಪ್ರವಾಸಿಗರು ಬೀಸಾಡಿದ ತ್ಯಾಜ್ಯದ ರಾಶಿಯಲ್ಲಿ ಏನಾದರೂ ಸಿಗಬಹುದೆಂದು ಆಸೆಯಿಂದ ಹೋದ ಆನೆಗೆ ನಿರಾಸೆಯಾಗಿದ್ದಲ್ಲದೆ, ತನ್ನ ಹಸಿವು ನೀಗಿಸಿಕೊಳ್ಳಲು ಕೊನೆಗೆ ಪ್ಲಾಸ್ಟಿಕ್​ ತಿಂದಿದೆ.
ಇದನ್ನೂ ಓದಿ:ಸ್ಯಾಂಡಲ್​ವುಡ್​ನಲ್ಲಿ ಸಂಜನಾ ಗಲ್ರಾನಿ ಆದ್ರೆ, ಮನೆಯಲ್ಲೇ ಬೇರೆ… ಕಾರ್​ ನಂಬರ್​ ರಿಜಿಸ್ಟ್ರೇಷನ್​ನಿಂದ ಬಹಿರಂಗ!
ಸಾಮಾನ್ಯವಾಗಿ ಆನೆಗಳು ಬೇರು, ಹುಲ್ಲು, ಹಣ್ಣು ಮತ್ತು ತೊಗಟೆಗಳನ್ನು ತಿನ್ನುತ್ತವೆ. ಫೋಟೋ ಹಿಂಬದಿಯಲ್ಲಿ ಸಾಕಷ್ಟು ಹಸಿರುವ ಇರುವುದು ಕಂಡರೂ ಸಹ, ಈ ಆನೆಯು ಕಾಡಿನಲ್ಲಿ ಎಸೆಯಲ್ಪಟ್ಟ ಕೊಳೆತ ತ್ಯಾಜ್ಯದ ವಾಸನೆಗೆ ಹೆಚ್ಚು ಆಕರ್ಷಿತವಾದದ್ದು ವಿಚಿತ್ರ ಎನಿಸಿದೆ.
ಈ ಚಿತ್ರವನ್ನು ಪ್ರಣಾಬ್​ ದಾಸ್​ ಎಂಬುವವರು ಕ್ಲಿಕ್ಕಿಸಿದ್ದು, ಈ ರೀತಿ ಎಲ್ಲೆಂದರಲ್ಲಿ ಕಸವನ್ನು ಎಸೆಯದಂತೆ ಪ್ರವಾಸಿಗರಿಗೆ ಎಚ್ಚರಿಕೆ ನೀಡಿದ್ದು, ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಮನವಿ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಸಾಕಷ್ಟು ವೈರಲ್​ ಆಗಿದ್ದು, ಅನೇಕ ನೆಟ್ಟಿಗರು ಪ್ರವಾಸಿಗರ ಕ್ರಮವನ್ನು ಖಂಡಿಸಿದ್ದಾರೆ.(ಏಜೆನ್ಸೀಸ್​)
ನಿಮ್ಮ ಮಗಳು ಇಷ್ಟು ಹಾಟ್​ ಆಗಿದ್ದು ಯಾವಾಗ? ‘ರಸಿಕ’ ಟ್ರಂಪ್​ ವಿರುದ್ಧ ಪುಸ್ತಕ ಬರೆದ ವಕೀಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 2 =
Remember me
