ನವದೆಹಲಿ:ಗಂಡ ಮಾರ್ಕೆಟ್​ನಲ್ಲಿ ಬೇರೆ ಹೆಂಗಸಿನ ಜತೆಗೆ ಇದ್ದಿದ್ದನ್ನು ಆಕಸ್ಮಿಕವಾಗಿ ಕಂಡ ಹೆಂಡತಿ ಬೀದಿರಂಪ ಮಾಡಿದ್ದಲ್ಲದೆ, ಗಂಡನ ಜತೆ ಕಿತ್ತಾಡಿಕೊಂಡಿದ್ದಾಳೆ. ಗಂಡ-ಹೆಂಡಿರ ಜಗಳವನ್ನು ಕಂಡ ಸ್ಥಳೀಯರು ಠಾಣೆಗೆ ಕರೆ ಮಾಡಿ ತಿಳಿಸಿ, ಇಬ್ಬರನ್ನೂ ಪೊಲೀಸರಿಗೆ ಒಪ್ಪಿಸಿದ್ದಾರೆ. ವಿಶೇಷವೆಂದರೆ ಇಬ್ಬರೂ ಮದುವೆಯಾಗಿ ಒಂದು ವರ್ಷವಷ್ಟೇ ಕಳೆದಿದ್ದು, ಅಷ್ಟರೊಳಗೆ ಸಂಸಾರದಲ್ಲಿ ಸಾಕಷ್ಟು ಭಿನ್ನಾಭಿಪ್ರಾಯ ಉಂಟಾಗಿದ್ದಲ್ಲದೆ, ಇದೀಗ ಬೀದಿರಂಪವೂ ನಡೆದುಹೋಗಿದೆ. ಪರಿಣಾಮ, ಪತಿ ಅದ್ನಾನ್​ ಹಾಗೂ ಪತ್ನಿ ಆಯೇಷಾ ಇಬ್ಬರೂ ಪೊಲೀಸ್ ಠಾಣೆ ಮೆಟ್ಟಿಲೇರುವಂತಾಗಿದೆ.
ಅದ್ನಾನ್​ ಹಾಗೂ ಆಯೇಷಾಗೆ 2020ರ ಫೆಬ್ರವರಿಯಲ್ಲಿ ಮದುವೆಯಾಗಿತ್ತು. ಆದರೆ ಆ ಬಳಿಕ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದು, ಅದ್ನಾನ್​ ಆಯೇಷಾಳನ್ನು ಆಕೆಯ ತವರು ಮನೆಯಲ್ಲಿ ಬಿಟ್ಟಿದ್ದ. ಆದರೆ ಇಂದು ಪತಿ ಇನ್ನೊಬ್ಬಳೊಂದಿಗೆ ಮಾರುಕಟ್ಟೆಯಲ್ಲಿ ಕಾಣಿಸಿದ್ದೇ ಪತ್ನಿಯ ಸಿಟ್ಟು ನೆತ್ತಿಗೇರಲು ಕಾರಣವಾಗಿದೆ.
ಇದನ್ನೂ ಓದಿ:‘ಕಾಲೂರಲು’ ಸಿಗದ ‘ಬೆಂ’ಬಲ; ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ರಾಜಕೀಯ ನಿವೃತ್ತಿ?
ಪೊಲೀಸ್​ ಠಾಣೆಯಲ್ಲೂ ಗಂಡ-ಹೆಂಡತಿ ವಾಗ್ವಾದ ಮುಂದುವರಿದಿದೆ. ಇಬ್ಬರ ಮಧ್ಯೆ ವಿಚ್ಛೇದನದ ಅರ್ಜಿ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಗಂಡ ಹೇಳಿದರೆ, ಎಲ್ಲಿ ಡೈವೋರ್ಸ್ ಪೇಪರ್ ತೋರಿಸು ಎಂದು ಹೆಂಡತಿ ಪ್ರಶ್ನಿಸಿದ್ದಾಳೆ. ಡೈವೋರ್ಸ್ ಅರ್ಜಿ ಈಗಾಗಲೇ ನೀಡಲಾಗಿದೆ, ಆ ಬಗ್ಗೆ ನೀನಿನ್ನೂ ಸಹಿ ಹಾಕಿಲ್ಲ ಎಂದು ಗಂಡ ದಬಾಯಿಸಿದ್ದಾನೆ. ಇಬ್ಬರ ಮಧ್ಯೆ ಡೈವೋರ್ಸ್​ಗೆ ನಿರ್ಧಾರವಾಗಿದ್ದು, ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)
ತವರು ಮನೆಯಲ್ಲಿ ಮಗಳು ಆತ್ಮಹತ್ಯೆ! ಸಾವಿಗೂ ಮುನ್ನ ಮನದ ದುಃಖ ಅಕ್ಷರಕ್ಕಿಳಿಸಿದ ಸುಂದರಿ

ಅತ್ತ ತೋಟದಲ್ಲಿ ಪೂಜೆ ನಡೆಯುತ್ತಿತ್ತು, ಇತ್ತ ಮನೆಯಲ್ಲಿ ಮಗುವಿನೊಂದಿಗೆ ತಾಯಿ ಆತ್ಮಹತ್ಯೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 4 =
Remember me
