ಉತ್ತರಪ್ರದೇಶ:ಕಳೆದುಹೋದ ಮೊಬೈಲ್​ಗಾಗಿ(Mobile)ಗಂಡ-ಹೆಂಡತಿ ನಡುವೆ ಪದೇ ಪದೇ ಜಗಳ ನಡೆದಿದ್ದು, ಒಂದೇ ಬುಲೆಟ್​ನಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆ ಇದೀಗ ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ:ಅಖಿಲೇಶ್​ ಯಾದವ್​-ನಿಖಿಲ್​ ಕುಮಾರಸ್ವಾಮಿ ಭೇಟಿ ಹಿಂದಿನ ರಹಸ್ಯವೇನು?
ಉತ್ತರಪ್ರದೇಶದ(Uttarpradesh)ಮೊರಾದಾಬಾದ್‌ನಲ್ಲಿ ಗಂಡ ತನ್ನ ಹೆಂಡತಿಯನ್ನು ತಬ್ಬಿಕೊಂಡು ಹಿಂದಿನಿಂದ ಗುಂಡು ಹಾರಿಸಿದ್ದಾನೆ. ಹೆಂಡತಿಗೆ ತಗುಲಿದ ಗುಂಡು ಗಂಡನಿಗೂ ತಗುಲಿ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತ ದಂಪತಿಗಳನ್ನು ಅನೇಕ್ ಪಾಲ್(40) ಮತ್ತು ಆತನ ಪತ್ನಿ ಸುಮನ್ ಪಾಲ್(38) ಎಂದು ಗುರುತಿಸಲಾಗಿದ್ದು, ದಂಪತಿಗಳು ಕಳೆದುಹೋದ ಮೊಬೈಲ್ ಫೋನ್‌ಗಾಗಿ ವಿಪರೀತ ಜಗಳ ಮಾಡುತ್ತಿದ್ದರು. ಜಗಳ ತೀವ್ರವಾದ ಬೆನ್ನಲ್ಲೇ ಗುಂಡು ಹಾರಿಸಿಕೊಂಡು ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ವರದಿಯಲ್ಲಿ(Report)ತಿಳಿಸಿದ್ದಾರೆ.
ಇದನ್ನೂ ಓದಿ:ಅಖಿಲೇಶ್​ ಯಾದವ್​-ನಿಖಿಲ್​ ಕುಮಾರಸ್ವಾಮಿ ಭೇಟಿ ಹಿಂದಿನ ರಹಸ್ಯವೇನು?
“ಜೂನ್ 13ರ ರಾತ್ರಿ, ಅನೇಕ್ ಪಾಲ್ ತನ್ನ ಮನೆಯಲ್ಲಿ ಎಂದಿನಂತೆ ಪ್ರಾರ್ಥನೆಯನ್ನು ಮುಗಿಸಿದ್ದಾನೆ. ತದನಂತರ ಹೆಂಡತಿಯನ್ನು ತಬ್ಬಿಕೊಂಡ ಅನೇಕ್, ಹಿಂದಿನಿಂದ ಹೆಂಡತಿಗೆ ಗುಂಡು ಹಾರಿಸಿದ್ದಾನೆ. ಗುಂಡು ಮೊದಲು ಹೆಂಡತಿಯ ದೇಹಕ್ಕೆ ನುಗ್ಗಿದೆ, ಬಳಿಕ ಆತನ ದೇಹಕ್ಕೆ ನುಗ್ಗಿದೆ. ದಂಪತಿಗಳು ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದರು, ಕೂಡಲೇ ಸ್ಥಳೀಯರು ಇಬ್ಬರನ್ನು ಹತ್ತಿರದ ಆಸ್ಪತ್ರೆಗೆ ಕರೆದ್ಯೊಯ್ದಿದ್ದಾರೆ. ಆದ್ರೆ, ಆಸ್ಪತ್ರೆಗೆ ಹೋಗುವ ಮುನ್ನವೇ ದಂಪತಿಗಳು ಸಾವನ್ನಪ್ಪಿದ್ದಾರೆ” ಎಂದು ಮೊರಾದಾಬಾದ್ ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ:ಎರಡು ಚಪ್ಪಲಿಗಳಿವೆ ಹುಷಾರ್​! ಪವನ್​ ಕಲ್ಯಾಣ್​ಗೆ ಎಚ್ಚರಿಕೆ ಸಂದೇಶ ರವಾನಿಸಿದ ಮಾಜಿ ಸಚಿವ
ಮೃತ ದಂಪತಿಗಳಿಗೆ ನಾಲ್ಕು ಮಕ್ಕಳಿದ್ದು, ಒಬ್ಬ ಮಗಳು ಮತ್ತು ಮೂವರು ಗಂಡು ಮಕ್ಕಳಿದ್ದಾರೆ. ಅನೇಕ್ ಪಾಲ್ ಬಳಸಿದ ಬಂದೂಕು ದೇಶ ನಿರ್ಮಿತ ಆಯುಧವಾಗಿತ್ತು!ಅದನ್ನು ಹೇಗೆ ಸಂಗ್ರಹಿಸಲಾಗಿದೆ ಎಂಬುದನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ವರದಿಯಲ್ಲಿ ತಿಳಿಸಿದ್ದಾರೆ,(ಏಜೆನ್ಸೀಸ್).
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + nineteen =
Remember me
