ನವದೆಹಲಿ:ಸ್ಮಾರ್ಟ್​ಫೋನ್​ಗಳ ವಿಪರೀತ ಬಳಕೆ ದಾಂಪತ್ಯ ಸಂಬಂಧದ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತಿದೆ. ಸ್ಮಾರ್ಟ್​ಫೋನ್ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿ ಪರಿಣಮಿಸಿದ್ದರೂ , ಅದರ ಮಿತಿಮೀರಿದ ಬಳಕೆಯಿಂದಾಗಿ ಸತಿ-ಪತಿ ಬಾಂಧವ್ಯ ಕೆಡುತ್ತಿದೆ ಎಂದು ಬೆಂಗಳೂರು ಸಹಿತ ದೇಶದ ಹಲವು ಪ್ರಮುಖ ನಗರಗಳಲ್ಲಿ ನಡೆಸಿದ ಸಮೀಕ್ಷೆ ಹೇಳಿದೆ. ಅದರಲ್ಲೂ ಶೇಕಡ 88ರಷ್ಟು ಸಮೀಕ್ಷಿತರು ಸ್ಮಾರ್ಟ್​ಫೋನ್​ಗಳ ಬಳಕೆಯ ಅಪಾಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಸಮೀಕ್ಷೆ ಸಂಘಟಿಸಿದ್ದ ವಿವೋ ಸಂಸ್ಥೆ ಸೋಮವಾರ ಅಧ್ಯಯನ ವರದಿಯನ್ನು ಬಿಡುಗಡೆ ಮಾಡಿದೆ. ಸೈಬರ್​ವಿುೕಡಿಯಾ ರೀಸರ್ಚ್ ಸಂಸ್ಥೆಯೊಂದಿಗೆ ಸೇರಿಕೊಂಡು ‘ಸ್ವಿಚ್ ಆಫ್’ ಶೀರ್ಷಿಕೆಯಡಿ ಈ ಅಧ್ಯಯನ ನಡೆಸಿತ್ತು.
‘ಸ್ಮಾರ್ಟ್​ಫೋನ್​ಗಳು ಮತ್ತು ಮಾನವ ಸಂಬಂಧಗಳ ಮೇಲೆ ಅವುಗಳ ಪರಿಣಾಮಗಳು-2022’ ಎನ್ನುವುದು ಅಧ್ಯಯನದ ವಿಷಯವಾಗಿತ್ತು. ದಾಂಪತ್ಯ ಸಂಗಾತಿಯೊಂದಿಗೆ ಸಮಯ ಕಳೆಯುತ್ತಿರುವಾಗಲೂ ತಾವು ಫೋನ್ ಬಳಸುತ್ತಿರುವುದಾಗಿ ಶೇಕಡ 67 ಜನರು ತಪ್ಪೊಪ್ಪಿಕೊಂಡಿದ್ದಾರೆ. ಆದರೆ, ಸಂಗಾತಿ ಜತೆ ಸಮಯ ಕಳೆಯಲು ಸಾಧ್ಯ ಇರುವುದಕ್ಕಿಂತಲೂ ಕಡಿಮೆ ವೇಳೆಯನ್ನು ವ್ಯಯಿಸುತ್ತಿರುವುದಾಗಿ ಶೇ.89ರಷ್ಟು ಜನರು ಹೇಳಿದ್ದಾರೆ.
1.5 ತಾಸಷ್ಟೇ ಬಿಡುವು:ಪ್ರತಿ ಸ್ಮಾರ್ಟ್​ಫೋನ್ ಬಳಕೆದಾರರಿಗೆ ದೈನಿಕ 1.5 ಗಂಟೆ ಬಿಡುವಿನ ವೇಳೆ ದೊರೆಯುತ್ತದೆ. ಅವರಲ್ಲಿ ಬಹಳಷ್ಟು ಜನರು ಕುಟುಂಬದೊಂದಿಗೆ ಸಮಯ ಕಳೆಯಲು ಬಯಸುತ್ತಾರೆ. ವ್ಯವಹಾರಕ್ಕೆ ಹಾಗೂ ವಿರಾಮವಾಗಿ ನಡೆಸುವ ಸಂಭಾಷಣೆ ಅವಧಿ ಬಹುತೇಕ ಒಂದೇ, ಅಂದರೆ ಅಂದಾಜು 2 ಗಂಟೆಯಾಗಿದೆ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡವರು ಹೇಳಿದ್ದಾರೆ.
ಎಲ್ಲಿ ಸಮೀಕ್ಷೆ?:ಬೆಂಗಳೂರು, ದೆಹಲಿ, ಮುಂಬೈ, ಕೋಲ್ಕತ್ತ, ಚೆನ್ನೈ, ಹೈದರಾಬಾದ್, ಅಹಮದಾಬಾದ್ ಮತ್ತು ಪುಣೆ ನಗರಗಳ ಒಟ್ಟು 1,000 ಗ್ರಾಹಕರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು.
ಗಮನ ಭಂಗ:ಸ್ಮಾರ್ಟ್​ಫೋನ್​ನಿಂದಾಗಿ ತಮ್ಮ ಗಮನ ಆಗಾಗ ಬೇರೆಡೆ ಹೋಗುತ್ತದೆ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇಕಡ 69ರಷ್ಟು ಮಂದಿ ಹೇಳಿದ್ದಾರೆ. ಇದಲ್ಲದೆ, ಜೀವನ ಸಂಗಾತಿಗೆ ಸಾಕಷ್ಟು ಗಮನ ಕೊಡಲಾಗುತ್ತಿಲ್ಲ ಎಂದೂ ಹೇಳಿದ್ದಾರೆ. ಜೀವನ ಸಂಗಾತಿಗಳು ಒಟ್ಟಿಗೆ ಸಮಯ ಕಳೆಯುತ್ತಿದ್ದಾಗ ಸ್ಮಾರ್ಟ್​ಫೋನ್ ರಿಂಗಣದಿಂದಾಗಿ ಗಮನ ಭಂಗವಾಗುತ್ತದೆ ಎಂದವರು ಶೇಕಡ 68 ಮಂದಿ. ಬಿಡುವಿನ ಸಮಯವನ್ನು ಸ್ಮಾರ್ಟ್​ಫೋನ್ ಜತೆ ಕಳೆಯುತ್ತಿದ್ದು, ತಮ್ಮ ವರ್ತನೆಯ ಭಾಗವಾಗಿರುವುದಾಗಿ ಶೇಕಡ 88 ಜನರು ಹೇಳಿದ್ದಾರೆ ಎಂದು ವರದಿ ತಿಳಿಸಿದೆ. ಶೇಕಡ 90ರಷ್ಟು ಸಮೀಕ್ಷಿತರಿಗೆ ಸ್ಮಾರ್ಟ್​ಫೋನೇ ವಿರಾಮವಾಗಿರಲು ಸಾಧನವಂತೆ!
‘ಸತ್ತವಳು’ 6 ವರ್ಷಗಳ ಬಳಿಕ 2ನೇ ಗಂಡನೊಂದಿಗೆ ಪತ್ತೆ!; ಈಕೆಯ ಕೊಲೆ ಪ್ರಕರಣ ಭೇದಿಸಿದ್ದ ಪೊಲೀಸರಿಗೆ ಸಿಕ್ಕಿತ್ತು ಬಹುಮಾನ!

ಮೇಲಿಂದ ಮೇಲೆ ಸಂಭವಿಸುತ್ತಲೇ ಇದೆ ಹೃದಯಾಘಾತ; ಇಂದು ಮತ್ತೊಂದು ಪ್ರಕರಣ, ವಿಚಾರಣಾಧೀನ ಕೈದಿ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + eleven =
Remember me
