ಅಮರಾವತಿ:ಪ್ರಿಯಕರನ ತೆಕ್ಕೆಯಲ್ಲಿರುವಾಗಲೇ ಪತ್ನಿಯು ಪತಿ ಕೈಗೆ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿರುವ ಘಟೆನ ಅಮರಾವತಿಯಲ್ಲಿ ನಡೆದಿದೆ.
ಇದನ್ನೂ ಓದಿ:ರೂಮ್‌ಮೇಟ್‌ ಹತ್ಯೆಗೈದು ಪರಾರಿ: ಸ್ವಂತ ಡಿಎನ್‌ಎ ಅಳಿಸಲು ಕೂಲ್​ಡ್ರಿಂಕ್​ ಬಳಸಿದ ಮಹಿಳೆ..ಈ ಘಟನೆ ತಾಳೇಗಾಂವ್ ದಶಸರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದ್ದು, ಪತಿಯ ದೂರಿನ ಮೇರೆಗೆ ಪತ್ನಿ ಪ್ರಿಯಕರನ ವಿರುದ್ಧ ಪ್ರಕರಣ ದಾಖಲಾಗಿದೆ. ಕಾರಣಾಂತರಗಳಿಂದಾಗಿ ಮೂವರ ಹೆಸರನ್ನು ಗೌಪ್ಯವಾಗಿಡಲಾಗಿದ್ದು, ಈ ಪ್ರಕರಣದಲ್ಲಿ ದೂರುದಾರನ 28 ವರ್ಷದ ಪತ್ನಿಯು ವಯಸ್ಸಿನಲ್ಲಿ ತನಗಿಂತ ಚಿಕ್ಕವನಾದ 20 ವರ್ಷದ ಯುವಕನೊಂದಿಗೆ ಇನ್​ಸ್ಟಾಗ್ರಾಮ್​​ ಮತ್ತು ವ್ಯಾಟ್ಸ್​​ಆ್ಯಪ್​ನಲ್ಲಿ ನಿರಂತರವಾಗಿ ಚಾಟ್ ಮಾಡುತ್ತಿದ್ದಳು. ಆದುದರಿಂದ ಪತಿಯು ಯುವಕನೊಂದಿಗೆ ತನ್ನ ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆಂದು ಶಂಕಿಸಿದ್ದು, ಆಕೆಗೆ ಬುದ್ದಿವಾದ ಹೇಳಿ ಮೊಬೈಲ್ ಫೋನ್ ಹೆಚ್ಚು ಬಳಸದಂತೆ ಪತ್ನಿಗೆ ತಾಕೀತು ಮಾಡಿದ್ದನು.
ಆದರೆ, ಆಕೆ ಆತನ ಮಾತುಗಳನ್ನು ಕೇಳುವ ಮೂಡ್‌ನಲ್ಲಿ ಪತ್ನಿ ಇರಲಿಲ್ಲ. ಹೀಗಾಗಿ ಪತ್ನಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಆಕೆಯ ಅನೈತಿಕ ಸಂಬಂಧಕ್ಕೆ ಬ್ರೇಕ್ ಹಾಕಲು ನಿರ್ಧರಿಸಿದ್ದ ಪತಿಯು ಅದೇ ದಿನ ರಾತ್ರಿ ಪತ್ನಿ ಮತ್ತೆ ಚಾಟ್ ಮಾಡುತ್ತಿದ್ದುದನ್ನು ನೋಡಿದ್ದಾನೆ. ಅದೇ ಸಮಯದಲ್ಲಿ, ತನ್ನ ಹೆಂಡತಿ ಯಾರನ್ನಾದರೂ ಭೇಟಿಯಾಗಲು ಹೋಗಬಹುದು ಎಂದು ಪತಿ ಅನುಮಾನಿಸಿ ಮಲಗಿದಂತೆ ನಟಿಸಿದ್ದಾನೆ. ಪತಿ ಮಲಗಿದ್ದನ್ನು ನೋಡಿ ಹೆಂಡತಿ ನಿಧಾನವಾಗಿ ಮನೆಯಿಂದ ಹೊರ ನಡೆದು ರೂಮಿನ ಬಾಗಿಲಿನ ಚಿಲಕವನ್ನು ಹಾಕಿಕೊಂಡಿದ್ದು, ಈ ವೇಳೆ ಪತಿಯ ಅನುಮಾನ ಬಲವಾಗಿದೆ.
ಇದನ್ನೂ ಓದಿ:ದೃಷ್ಟಿದೋಷ ಶಿಕ್ಷಕನನ್ನು ತರಗತಿಯಲ್ಲೇ ಅವಮಾನಿಸಿದ ವಿದ್ಯಾರ್ಥಿಗಳು..
ಕೂಡಲೇ ಪತಿ ಕಿಟಕಿ ಮೂಲಕ ಹೊರಹೋಗುವಲ್ಲಿ ಸಫಲವಾಗಿದ್ದು, ಆತ ಪಕ್ಕದ ರೂಮಿನ ಕೋಣೆಯೊಳಗೆ ಪ್ರಿಯಕರನ ತೋಳುಗಳಲ್ಲಿ ತನ್ನ ಹೆಂಡತಿಯನ್ನು ನೋಡಿದ್ದಾನೆ. ಪತಿ ಕಾಣಿಸಿಕೊಂಡ ತಕ್ಷಣವೇ ಹೆಂಡತಿಗೆ ಆಘಾತವಾಗಿದ್ದು, ಈ ಶಾಕ್ ನೋಡಿ ಪತಿಗೂ ತುಂಬಾ ಕೋಪ ಬಂದಿತ್ತು. ಕೂಡಲೇ ಆತ ಹೆಂಡತಿಯೊಡನೆ ವಾಗ್ವಾದಕ್ಕಿಳಿದಿದ್ದು, ಈ ವೇಳೆ ಪತ್ನಿಯ ಪ್ರಿಯಕರ ಅಲ್ಲಿಂದ ಓಡಿ ಹೋಗಿದ್ದಾನೆ. ಸದ್ಯ ಈ ವೇಳೆ ಪತಿಯ ದೂರಿನ ಮೇರೆಗೆ ಪತ್ನಿ ಪ್ರಿಯಕರನ ವಿರುದ್ಧ ಪ್ರಕರಣ ದಾಖಲಾಗಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × two =
Remember me
