ಸೂರತ್:ಪತ್ನಿಯು ತಿಂಗಳಲ್ಲಿ ಎರಡು ವಾರಾಂತ್ಯಗಳಲ್ಲಷ್ಟೇ ತನಗೆ ಸಿಗುತ್ತಿರುವುದರ ಕುರಿತು ನೊಂದಿರುವ ಪತಿ ಕೌಟುಂಬಿಕ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದು, ಆತನ ವಿರುದ್ಧ ಪತ್ನಿಯು ಹೈಕೋರ್ಟ್ ಮೊರೆ ಹೋಗಿರುವ ಪ್ರಕರಣ ನಡೆದಿದೆ.
ಸೂರತ್​ನಲ್ಲಿನ ದಂಪತಿ ಮಧ್ಯೆ ಇಂಥದ್ದೊಂದು ಪ್ರಕರಣ ನಡೆಯುತ್ತಿದೆ. ಉದ್ಯೋಗದಲ್ಲಿರುವ ಪತ್ನಿ, ಪುತ್ರ ಜನಿಸಿದ ಬಳಿಕ ಕೆಲಸದ ನೆಪ ಹೇಳಿ ತವರಿಗೆ ಹೋಗಿ ನೆಲೆಸಿದ್ದು, ತಿಂಗಳಲ್ಲಿ ಎರಡು ಮತ್ತು ನಾಲ್ಕನೇ ವಾರಾಂತ್ಯಗಳಲ್ಲಷ್ಟೇ ತನ್ನ ಮನೆಗೆ ಬಂದು ನೆಲೆಸುತ್ತಿದ್ದಾಳೆ. ಜತೆಗೆ ಆಕೆ ಪುತ್ರನ ಆರೈಕೆ ಮಾತ್ರವಲ್ಲದೆ ಪತಿಯ ದಾಂಪತ್ಯದ ಹಕ್ಕನ್ನೂ ನಿರ್ಲಕ್ಷಿಸುತ್ತಿದ್ದಾಳೆ ಎಂದು ಪತಿ ಆರೋಪಿಸಿದ್ದಾರೆ. ಈ ಬಗ್ಗೆ ಹಿಂದೂ ವಿವಾಹ ಕಾಯ್ದೆ ಅನ್ವಯ ಕಳೆದ ವರ್ಷ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಪ್ರತಿಯಾಗಿ ಗುಜರಾತ್ ಹೈಕೋರ್ಟ್ ಮೊರೆ ಹೋಗಿರುವ ಪತ್ನಿ, ತಿಂಗಳಲ್ಲಿ 2 ವಾರಾಂತ್ಯಗಳಲ್ಲಷ್ಟೇ ಪತಿಯೊಂದಿಗೆ ಇರುವುದು ತನ್ನ ದಾಂಪತ್ಯದ ಜವಾಬ್ದಾರಿಯನ್ನು ಪೂರೈಸುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಪತ್ನಿ ವಾದ ಏನು?:ನಾನು ತಿಂಗಳ 2 ಮತ್ತು 4ನೇ ವಾರಾಂತ್ಯಗಳಲ್ಲಿ ಪತಿ ಇದ್ದಲ್ಲಿಗೆ ಹೋಗಿ ನೆಲೆಸುತ್ತಿದ್ದು, ‘ಹೆಂಡತಿ ನನ್ನನ್ನು ತೊರೆದಿದ್ದಾಳೆ, ಅವಳನ್ನು ನನ್ನ ಜೊತೆ ಬಂದು ನೆಲೆಸಲು ನಿರ್ದೇಶಿಸಿ’ ಎಂದು ಪತಿ ಆರೋಪಿಸಿರುವುದು ತಪು್ಪ ಎಂಬುದಾಗಿ ಪತ್ನಿ ಕೋರ್ಟ್​ಗೆ ಮನವಿ ಮಾಡಿಕೊಂಡಿದ್ದಳು. ಕೌಟುಂಬಿಕ ನ್ಯಾಯಾಲಯ ಪತ್ನಿಯ ಮನವಿ ನಿರಾಕರಿಸಿದ ಕಾರಣ ಆಕೆ ಹೈಕೋರ್ಟ್ ಮೊರೆ ಹೋಗಿದ್ದಾಳೆ.
ಕೋರ್ಟ್ ನಿರ್ದೇಶನ ಏನು?:ಪತ್ನಿಯು ಪತಿಯ ಸಾಂಗತ್ಯದಿಂದ ದೂರವಾಗಿದ್ದರೆ ಆಕೆಗೆ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 9ರ ಪ್ರಕಾರ ಜೊತೆಗೆ ವಾಸಿಸುವಂತೆ ನಿರ್ದೇಶಿಸಬಹುದು. ಆದರೆ ಈ ಪ್ರಕರಣದಲ್ಲಿ ಪತ್ನಿ ಆತನನ್ನು ತೊರೆದಿಲ್ಲ, ಎರಡು ವಾರಾಂತ್ಯಗಳಲ್ಲಿ ಜೊತೆ ಆಗುತ್ತಿದ್ದಾರೆ ಎಂದು ಮಹಿಳೆಯ ಪರ ವಕೀಲರು ವಾದಿಸಿದ್ದಾರೆ. ವಾದವನ್ನು ಆಲಿಸಿದ ನ್ಯಾಯಮೂರ್ತಿ ವಿ.ಡಿ.ನಾನಾವತಿ, ಪತ್ನಿ ತನ್ನೊಂದಿಗೆ ಬಂದು ನೆಲೆಸುವಂತೆ ಪತಿ ಕೋರಿಕೊಂಡರೆ ಅದರಲ್ಲಿ ತಪ್ಪೇನು? ಈ ಕುರಿತು ಮೊಕದ್ದಮೆ ಹೂಡುವ ಹಕ್ಕು ಆತನಿಗಿಲ್ಲವೇ? ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ಸಂಬಂಧ ಜ. 25ರ ಒಳಗೆ ಪ್ರತಿಕ್ರಿಯೆ ನೀಡುವಂತೆ ಪತಿಗೆ ಸೂಚಿಸಿದರು.
ಜಾಮೀನು ಅರ್ಜಿಗಳು ಬೇಗ ವಿಲೇವಾರಿ ಆಗಲಿ:ಜಾಮೀನು ಹಾಗೂ ನಿರೀಕ್ಷಣಾ ಜಾಮೀನು ಅರ್ಜಿಗಳು ವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ್ದಾಗಿದ್ದು, ಉಚ್ಚ ನ್ಯಾಯಾಲಯಗಳು ಆ ಕುರಿತ ಅರ್ಜಿಗಳನ್ನು ಪಟ್ಟಿ ಮಾಡಿ ತ್ವರಿತಗತಿಯಲ್ಲಿ ವಿಲೇವಾರಿ ಮಾಡಬೇಕು ಎಂದು ಸವೋಚ್ಚ ನ್ಯಾಯಾಲಯ ಹೇಳಿದೆ.
ವಂಚನೆ ಹಾಗೂ ಫೋರ್ಜರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಸಿ.ಟಿ. ರವಿಕುಮಾರ್ ಮತ್ತು ಸಂಜಯ್ ಕುಮಾರ್ ನೇತೃತ್ವದ ಪೀಠವು ಇತ್ತೀಚಿನ ಆದೇಶವೊಂದರಲ್ಲಿ ಇದನ್ನು ಪುನರುಚ್ಚರಿಸಿದೆ. ಜಾಮೀನು ಮತ್ತು ನಿರೀಕ್ಷಣಾ ಜಾಮೀನುಗಳು ವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ್ದು ಎಂದು ಈ ನ್ಯಾಯಾಲಯ ಪುನರಚ್ಚರಿಸಿದ್ದು, ಅವುಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಿಸಲಾಗುವುದು ಎಂದಿದೆ. ಜಾಮೀನು ಮತ್ತು ನಿರೀಕ್ಷಣಾ ಜಾಮೀನು ಅರ್ಜಿಗಳಿಗೆ ಸಂಬಂಧಿಸಿದಂತೆ ಸವೋಚ್ಚ ನ್ಯಾಯಾಲಯವು 2022ರಲ್ಲೂ ಇದೇ ಅಭಿಪ್ರಾಯ ವ್ಯಕ್ತಪಡಿಸಿತ್ತು.
ವಿವಿಧ ನ್ಯಾಯಾಲಯಗಳಲ್ಲಿ ಇದೇ ಪರಿಸ್ಥಿತಿ ಮುಂದುವರಿದಿರುವುದನ್ನು ಗಮನದಲ್ಲಿ ಇರಿಸಿಕೊಂಡು, ರಿಜಿಸ್ಟ್ರಾರ್ ಜನರಲ್ ಮತ್ತು ಸಂಬಂಧಿತ ಎಲ್ಲ ಹೈಕೋರ್ಟ್​ಗಳಿಗೆ ರಿಜಿಸ್ಟ್ರಿಯು ಈ ಆದೇಶದ ಕಾಪಿ ಕಳುಹಿಸಿಕೊಡಲಿದ್ದು, ಜಾಮೀನು ಮತ್ತು ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಬೇಗ ವಿಲೇವಾರಿ ಮಾಡುವಂತೆ ಸೂಚಿಸಲಾಗುವುದು ಎಂದು ಡಿ. 11ರ ಆದೇಶದಲ್ಲಿ ಹೇಳಲಾಗಿದೆ. ವಂಚನೆ ಮತ್ತು ಫೋರ್ಜರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಛತ್ತೀಸ್​ಗಢ ಹೈಕೋರ್ಟ್ ಆದೇಶವನ್ನು ಉಲ್ಲೇಖಿಸಿದ ಸುಪ್ರೀಂಕೋರ್ಟ್, ನ್ಯಾಯಾಲಯವು ಪುನಃ ಪುನಃ ಸೂಚನೆ ನೀಡಿದ್ದರೂ ಅದೇ ಪರಿಸ್ಥಿತಿ ಮರುಕಳಿಸುತ್ತಿದೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ ಎಂದು ಈ ಆದೇಶವನ್ನು ನೀಡಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − ten =
Remember me
