ಮಧುರೈ:ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದ ಪತ್ನಿ ತನ್ನ ಪತಿಯ ಗುಪ್ತಾಂಗಗಳನ್ನು ಕೊಯ್ಯುವ ಜತೆಗೆ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ.
ಮಧುರೈ ಬಳಿಯ ತಿರುಮಂಗಲಂ ನಿವಾಸಿ ಇ. ಸುಂದರ್​ ಅಲಿಯಾಸ್​ ಸುಧೀರ್​ (34) ಹತ್ಯೆಯಾದವ. ಸರ್ಕಾರಿ ಶಾಲೆಯ ಶಿಕ್ಷಕಿ ಎಸ್​. ಅರಿವುಸೆಲ್ವಂ ಹತ್ಯೆ ಮಾಡಿದಾಕೆ. ಇಂಜಿನಿಯರಿಂಗ್​ ಪದವೀಧರನಾಗಿದ್ದ ಸುಧೀರ್​ ಭೂಮಾಪನ ಅಧಿಕಾರಿಗಳಿಗೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಸುಧೀರ್​ ಮತ್ತು ಅರಿವುಸೆಲ್ವಂ 8 ವರ್ಷಗಳ ಹಿಂದೆ ವಿವಾಹವಾಗಿದ್ದರು. ಇವರಿಗೆ ಒಬ್ಬ ಪುತ್ರಿಯೂ ಇದ್ದಾಳೆ.
ಶುಕ್ರವಾರ ಬೆಳಗ್ಗೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸುಧೀರ್​ನನ್ನು ಆಸ್ಪತ್ರೆಗೆ ಕರೆದೊಯ್ದ ಅರಿವುಸೆಲ್ವಂ, ಹಾಸಿಗೆಯಿಂದ ಕೆಳಗೆ ಬಿದ್ದಿದ್ದರಿಂದ ಪ್ರಜ್ಞೆ ತಪ್ಪಿಸುವುದಾಗಿ ಹೇಳಿದ್ದಳು. ಆತನನ್ನು ಪರೀಕ್ಷಿಸಿದ ವೈದ್ಯರು ಆತ ಅದಾಗಲೇ ಸತ್ತು ತುಂಬಾ ಹೊತ್ತಾಗಿರುವುದಾಗಿ ಹೇಳಿದ್ದರು.
ಇದನ್ನೂ ಓದಿ:ನಾಲ್ವರ ಮೇಲೆ ಐಷಾರಾಮಿ ಕಾರು ಹರಿಸಿದಳು, ಕೇಳಿದ್ದಕ್ಕೆ ನಾಯಿ ಕಾರಣ ಎಂದಳು
ವಿಷಯ ತಿಳಿದ ತಿರುಮಂಗಲಂ ಪೊಲೀಸರು ಆಸ್ಪತ್ರೆಗೆ ಬಂದಿದ್ದರು. ಇದು ಹಾಸಿಗೆಯಿಂದ ಬಿದ್ದು ಆಗಿರುವ ಸಾವಲ್ಲ ಎಂಬ ಶಂಕೆಯಲ್ಲಿ ಸುಧೀರ್​ನ ಶವವನ್ನು ಸಂಪೂರ್ಣ ಪರಿಶೀಲಸಿದ್ದರು. ಆಗ ಆತನ ಗುಪ್ತಾಂಗಗಳ ಮೇಲೆ ಗಾಯಗಳಾಗಿರುವುದು ಕಂಡು ಬಂದಿತ್ತು.
ಅನುಮಾನದ ಮೇಲೆ ಅರಿವುಸೆಲ್ವಂಳನ್ನು ಠಾಣೆಗೆ ಕರೆಯಿಸಿಕೊಂಡ ಅವರು, ವಿಚಾರಣೆಗೆ ಒಳಪಡಿಸಿದಾಗ ಆಕೆ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಳು. ಅಲ್ಲದೆ, ಇದಕ್ಕೆ ತನ್ನ ಸಂಬಂಧಿಕರಾದ ಬಿ. ಬಾಲಾಮಣಿ ಮತ್ತು ಬಿ. ಸುಮೈಯಾರ್​ ಅವರ ಸಹಾಯ ಪಡೆದುಕೊಂಡಿದ್ದಾಗಿ ತಿಳಿಸಿದಳು ಎಂದು ಪೊಲಿಸರು ಹೇಳಿದ್ದಾರೆ.
ಪತಿ ಅಸಹಜ ಲೈಂಗಿಕಕ್ರಿಯೆಗೆ ಆಗ್ರಹಿಸುತ್ತಿದ್ದ. ಒಪ್ಪದಿದ್ದರೆ, ಮನಸೋಇಚ್ಛೆ ಥಳಿಸುತ್ತಿದ್ದ. ಇದರಿಂದ ಬೇಸತ್ತು ಗುರುವಾರ ರಾತ್ರಿ ಹಾಲಿನಲ್ಲಿ ನಿದ್ದೆ ಮಾತ್ರೆ ಬರೆಸಿ ಸುಧೀರ್​ಗೆ ಕುಡಿಸಿದೆ. ಆತ ಗಾಢ ನಿದ್ದೆಗೆ ಜಾರಿದ ಬಳಿಕ ಸಂಬಂಧಿಕರ ಸಹಾಯದಿಂದ ಆತನ ಗುಪ್ತಾಂಗಗಳ ಮೇಲೆ ಗಾಯ ಮಾಡಿದ್ದಲ್ಲದೆ, ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾಗಿ ಅರಿವುಸೆಲ್ವಂ ತಪ್ಪೊಪ್ಪಿಗೆಯಲ್ಲಿ ಹೇಳಿರುವುದಾಗಿ ತಿಳಿಸಿದ್ದಾರೆ.
ಕರೊನಾ ಕೇಸ್​: ಸಕ್ರಾ ಸೇರಿ ಐದು ಆಸ್ಪತ್ರೆಗಳ ವಿರುದ್ಧ ಎಫ್​ಐಆರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + nine =
Remember me
