ಭೋಪಾಲ್​:ಗಂಡನ ಮರ್ಮಾಂಗಕ್ಕೆ ಒದ್ದು ಕೊಲೆ ಮಾಡಿರುವ ಆರೋಪ ಪತ್ನಿಯ ವಿರುದ್ಧ ಕೇಳಿಬಂದಿದ್ದು, ಈ ಘಟನೆ ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯ ಘುಗ್ರಿ ಗ್ರಾಮದಲ್ಲಿ ನಡೆದಿದೆ ಎನ್ನಲಾಗಿದೆ.
ಮೂಲಗಳ ಪ್ರಕಾರ ಮದುವೆ ಸಮಾರಂಭದಲ್ಲಿನ ಡ್ಯಾನ್ಸ್ ವಿಚಾರವಾಗಿ ದಂಪತಿ ನಡುವೆ ಉಂಟಾದ ಜಗಳವು ಪತಿಯ ದಾರುಣ ಸಾವಿನಲ್ಲಿ ಅಂತ್ಯವಾಗಿದೆ. ಮದುವೆ ಸಮಾರಂಭದ ಬೆನ್ನಲ್ಲೇ ದುರಂತ ಸಾವು ಸಂಭವಿಸಿದೆ.
ಇದನ್ನೂ ಓದಿರಿ:ಇನ್ನೆಷ್ಟು ತಲೆಮಾರು ಮೀಸಲಾತಿ ಮುಂದುವರಿಯಬೇಕು? ಸರ್ಕಾರಕ್ಕೆ ಸುಪ್ರೀಂಕೋರ್ಟ್​ ಪ್ರಶ್ನೆ
ಘಟನೆಯ ವಿವರಣೆಗೆ ಬರುವುದಾದರೆ, ಬುಧವಾರ ಘುಗ್ರಿ ಗ್ರಾಮದಲ್ಲಿ ಮದುವೆ ಸಮಾರಂಭ ನಡೆಯುತ್ತಿತ್ತು. ಈ ವೇಳೆ ಡ್ಯಾನ್ಸ್ ಮಾಡುವಾಗ ಅದೇ ಗ್ರಾಮದ ನಿವಾಸಿಗಳಾದ ಭಗತ್​ ಸಿಂಗ್​ ಧ್ರುವೆ ಮತ್ತು ಆತನ ಪತ್ನಿ ಆವಂತಿ ನಡುವೆ ಜಗಳ ಶುರುವಾಗಿದೆ. ಯಾವ ವಿಚಾರಕ್ಕೆ ಜಗಳ ನಡೆದಿದೆ ಎಂಬುದು ತಿಳಿದುಬಂದಿಲ್ಲ. ಆದರೆ, ಮನೆಗೆ ಹೋಗುವ ಮಾರ್ಗ ಮಧ್ಯೆಯು ದಂಪತಿ ಜಗಳ ಆಡಿದ್ದಾರೆ.
ಈ ವೇಳೆ ಕೋಪದ ನಿಯಂತ್ರಣ ಕಳೆದುಕೊಂಡ ಆವಂತಿ ಗಂಡನ ಮರ್ಮಾಂಗಕ್ಕೆ ಒದ್ದಿದ್ದಾಳೆ. ತಕ್ಷಣ ನೋವಿನಿಂದ ಭಗತ್​ ಕುಸಿದು ಬಿದ್ದಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿದಾದರೂ ಆತ ಬದುಕುಳಿಯಲೇ ಇಲ್ಲ. ಈ ಸಂಬಂಧ ಭಗತ್​ ಅತ್ತಿಗೆ ಆವಂತಿ ವಿರುದ್ಧ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿರಿ:ಸಾವಿನಲ್ಲಿ ಒಂದಾದ ಅಣ್ಣ-ತಮ್ಮ: ಅಯ್ಯೋ ದುರ್ವಿಧಿಯೇ! ಮತ್ತೊಬ್ಬ ಸಹೋದರನೂ ಆಸ್ಪತ್ರೆಯಲ್ಲಿ!
ಇದು ಉದ್ದೇಶಪೂರ್ವಕವೋ? ಅಥವಾ ಅಚಾತುರ್ಯವೋ? ಎಂಬುದು ತನಿಖೆಯ ನಂತರವೇ ತಿಳಿದುಬರಲಿದೆ. ಸದ್ಯ ಭಗತ್​ ಮೃತದೇಹಕ್ಕೆ ಮರಣೋತ್ತರ ಪರೀಕ್ಷೆಯ ನಂತರ ಅಂತ್ಯಕ್ರಿಯೆ ನೆರವೇರಿದೆ.(ಏಜೆನ್ಸೀಸ್​)
ಜಾಲತಾಣದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಈ ಸುಂದರಿಯ ಹಿಂದಿದೆ ಮತ್ತೊಂದು ಕರಾಳ ಮುಖ!

ಎರಡು ಮಕ್ಕಳ ತಾಯಿ ಆತ್ಮಹತ್ಯೆ! ಇಂಥ ನೀಚ ಕೆಲಸಕ್ಕೆ ಇಳಿದನಾ ಗಂಡ?

‘ಸಿಡಿ ಲೇಡಿ’ ಹೆಸರಲ್ಲಿ ರಿಜಿಸ್ಟರ್ ಆಯ್ತು ಸಿನಿಮಾ ಟೈಟಲ್! ಸ್ಯಾಂಡಲ್​ವುಡ್​ನಲ್ಲಿ ವಿವಾದ ಎಬ್ಬಿಸಲಿದ್ಯಾ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eleven + ten =
Remember me
