ಅಹಮದಾಬಾದ್​:ಪ್ರೇಮಿಗಳ ದಿನಕ್ಕೆ ಪ್ರೇಮಿಗಳು ಏನೇನೋ ಉಡುಗೊರೆಯನ್ನು ಪರಸ್ಪರ ಹಂಚಿಕೊಳ್ಳುತ್ತಾರೆ. ಆದರೆ ಇಲ್ಲೊಂದು ದಂಪತಿ ಮಾತ್ರ ಈ ಪ್ರೇಮಿಗಳ ದಿನಕ್ಕೆ ಹಂಚಿಕೊಂಡ ಉಡುಗೊರೆಯ ಬಗ್ಗೆ ಕೇಳಿದರೆ ನೀವು ನಿಜಕ್ಕೂ ವಾವ್​ ಎಂದು ಒಮ್ಮೆ ಹೇಳುತ್ತೀರಿ.
ಗುಜರಾತ್​ನ ಅಹಮದಾಬಾದ್​ ಮೂಲದ ವಿನೋದ್​ ಪಟೇಲ್​ ಮತ್ತು ರೀತಾ ಪಟೇಲ್​ ಆದರ್ಶ ದಂಪತಿ ಸಾಲಿಗೆ ಸೇರಬಹುದಾದಂತಹ ದಂಪತಿ. 44 ವರ್ಷದವರಾಗಿರುವ ರೀತಾ ಕಳೆದ ಮೂರು ವರ್ಷಗಳಿಂದ ಒಂದು ಕಾಯಿಲೆಯಿಂದ ಬಳಲುತ್ತಿದ್ದಾರೆ. ಅವರ ದೇಹದ ಇಮ್ಯೂನ್​ ಸಿಸ್ಟಮ್​ ತೊಂದರೆಯಿಂದಾಗಿ ಕಿಡ್ನಿ ಕೆಲಸ ಮಾಡುವುದನ್ನು ನಿಲ್ಲಿಸಿದೆಯಂತೆ. ಇದಕ್ಕಾಗಿ ಚಿಕಿತ್ಸೆ ತೆಗೆದುಕೊಳ್ಳಲಾಗುತ್ತಿದೆಯಾದರೂ ಆಗಾಗ ಆರೋಗ್ಯ ಹದಗೆಡುತ್ತಲೇ ಇದೆ. ಬೇರೆ ಕಿಡ್ನಿ ಹಾಕಿದರೆ ಸಮಸ್ಯೆ ಸರಿ ಹೋಗುವುದಾಗಿ ವೈದ್ಯರು ತಿಳಿಸಿದ್ದರಂತೆ.
ಅಂದ ಹಾಗೆ ಈ ದಂಪತಿ ಮದುವೆಯಾಗಿ ಈ 14ಕ್ಕೆ 23 ವರ್ಷ ತುಂಬಿತಂತೆ. ಮದುವೆ ವಾರ್ಷಿಕೋತ್ಸವ ಹಾಗೂ ಪ್ರೇಮಿಗಳ ದಿನವಾಗಿರುವ ಈ ದಿನವನ್ನು ನೆನಪಿನಲ್ಲಿಡಬೇಕೆನ್ನುವ ಕಾರಣಕ್ಕೆ ವಿನೋದ್​ ಒಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ತನ್ನ ಒಂದು ಕಿಡ್ನಿಯನ್ನು ಹೆಂಡತಿಗೆ ಕೊಟ್ಟು ಆಕೆಯ ಆರೋಗ್ಯ ಸರಿ ಮಾಡುವ ನಿರ್ಧಾರ ಮಾಡಿದ್ದು, ಅದರಂತೆ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದ್ದಾರೆ. ಅವರ ಕಿಡ್ನಿ ರೀತಾ ಅವರಿಗೆ ಸೂಕ್ತವಾಗಿ ಹೊಂದುತ್ತದೆ ಎಂದು ತಿಳಿದುಬಂದಿದೆ. ಆ ಹಿನ್ನೆಲೆಯಲ್ಲಿ ಪ್ರೇಮಿಗಳ ದಿನವಾದ ಇಂದು ಅವರು ತಮ್ಮ ಹೆಂಡತಿಗೆ ಒಂದು ಕಿಡ್ನಿಯನ್ನು ಕೊಟ್ಟಿದ್ದಾರೆ. ಗಂಡನ ಕಿಡ್ನಿಯನ್ನು ಪಡೆದ ರೀತಾ ಇದು ಆಕೆಯ ಜೀವನದ ಅತ್ಯಂತ ಅಮೂಲ್ಯವಾದ ಉಡುಗೊರೆ ಎಂದು ತಿಳಿಸಿದ್ದಾರೆ.
ಗಂಡ ಹೆಂಡತಿ ಎಂದರೆ ಒಬ್ಬರ ನೋವನ್ನು ಒಬ್ಬರು ಹಂಚಿಕೊಳ್ಳಬೇಕು. ನನ್ನ ಹೆಂಡತಿಯ ನೋವನ್ನು ನನಗೆ ನೋಡಲಾಗುತ್ತಿರಲಿಲ್ಲ. ಆಕೆಯ ನೋವಿಗೆ ನನ್ನ ಬಳಿಯೇ ಪರಿಹಾರವಿದೆ ಎಂದು ಗೊತ್ತಾದ ಮೇಲೆ ಈ ನಿರ್ಧಾರ ತೆಗೆದುಕೊಂಡೆ ಎಂದಿದ್ದಾರೆ ಕಿಡ್ನಿ ಕೊಟ್ಟಿರುವ ವಿನೋದ್​. (ಏಜೆನ್ಸೀಸ್​)
ಬೇರೆ ಹುಡುಗಿಯರ ಫೋಟೋ ಲೈಕ್​ ಮಾಡಿದ್ದ ಪ್ರಿಯತಮನಿಗೆ ಸರ್ಪೈಸ್​ ಗಿಫ್ಟ್​! ಅಯ್ಯಯ್ಯೋ ಪ್ರೀತಿನೇ ಬೇಡ ಎನ್ನುತ್ತಿದ್ದಾರೆ ನೆಟ್ಟಿಗರು!

ಡೇಟ್​ಗೆ ಬರಲೊಪ್ಪದ ಮಾಜಿ ಪ್ರಿಯತಮೆಗೆ ಕಾರಿನಲ್ಲಿ ಪ್ರಿಯಕರ ಹೀಗಾ ಮಾಡೋದು?

ಹೆಂಡತಿ ನೋಡಲು ದೂರದ ಊರಿಂದ ಬಂದ ಗಂಡನಿಗೆ ಕಾದಿತ್ತು ಬಿಗ್​ ಶಾಕ್​! ಹಿಂಬದಿ ಬಾಗಿಲಿಂದ ಬಂದವ ಹೀಗೇಕೆ ಮಾಡಿದ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × four =
Remember me
