ನವದೆಹಲಿ:ಹೆಂಡತಿ ತನ್ನ ಮೇಲೆ ಪೊಲೀಸರಿಗೆ ದೂರು ನೀಡಿದಳೆಂದು ಬಂದೂಕಿನಿಂದ ಹಲ್ಲೆ ನಡೆಸುತ್ತಿದ್ದ ಗಂಡನನ್ನು ಸರಿಯಾದ ಸಮಯಕ್ಕೆ ತಡೆದಿರುವ ಸಿನಿಮೀಯ ಘಟನೆ ದೆಹಲಿಯಲ್ಲಿ ನಡೆದಿದೆ. ಈ ಸಂಬಂಧವಾಗಿ, ವಾಯುವ್ಯ ದೆಹಲಿಯ ಮಂಗೋಲ್​ಪುರಿ ಯು-ಬ್ಲಾಕ್​ನ ನಿವಾಸಿಯಾದ 27 ವರ್ಷದ ಮೋಹಿತ್​ ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ.
ಮೋಹಿತ್​ ಮತ್ತು ಮೊನಿಕಾ ಒಂದು ವರ್ಷದ ಹಿಂದೆ ಮದುವೆಯಾಗಿದ್ದು, ವಿವಾದದಿಂದಾಗಿ ಆಕೆ ಮಂಗೋಲ್​ಪುರಿಯ ಎಸ್​-ಬ್ಲಾಕ್​​ನಲ್ಲಿದ್ದ ತವರುಮನೆಯಲ್ಲಿ ವಾಸಿಸುತ್ತಿದ್ದಳು. ಬುಧವಾರ ಬೆಳಿಗ್ಗೆ 9 ಗಂಟೆಗೆ ಮೊನಿಕಾ ಗಂಡ ತನ್ನೊಡನೆ ಜಗಳವಾಡುತ್ತಿದ್ದಾನೆ ಎಂದು ಪೊಲೀಸರಿಗೆ ಫೋನು ಮಾಡಿದ್ದಳು. ಮಧ್ಯಾಹ್ನ 2 ಗಂಟೆಗೆ ರಾಜ್​ ಪಾರ್ಕ್​ ಪೊಲೀಸ್​ ಠಾಣೆ ತಲುಪಿ ಗಂಡನ ವಿರುದ್ಧ ದೂರು ನೀಡಿದ್ದಳು ಎನ್ನಲಾಗಿದೆ.
ಇದನ್ನೂ ಓದಿ:ಆಸ್ತಿಗಾಗಿ ಮಗನನ್ನು ಕಾಲುವೆಗೆ ನೂಕಿ ಕೊಂದಿದ್ದ ತಂದೆಗೆ ಜೈಲಲ್ಲಿ ಕಾದುಕುಳಿತಿದ್ದ ಯಮರಾಯ!
ಈ ಸಂಬಂಧವಾಗಿ ಪೊಲೀಸರು ಮೋಹಿತ್​​ಗೆ ಕರೆ ಮಾಡಿದಾಗ ಆತ ಮನೆಯಿಂದ ಹೊರಗಿದ್ದು, ಸಂಜೆ ವೇಳೆಗೆ ತಲುಪುವುದಾಗಿ ಹೇಳಿದ್ದಾನೆ. ಆದರೆ ಸಂಜೆ 4 ಗಂಟೆಗೆ ಮೊನಿಕಾ ಪೊಲೀಸರಿಗೆ ಮತ್ತೆ ಕರೆ ಮಾಡಿ, ಗಂಡ ಮೋಹಿತ್​ ತನ್ನ ಮನೆಗೆ ಬಂದಿದ್ದಾನೆ ಎಂದು ತಿಳಿಸಿದ್ದಾಳೆ. ಪೊಲೀಸರು ಸ್ಥಳಕ್ಕೆ ತಲುಪಿದಾಗ, ಮೋಹಿತ್​ ಕೈಯಲ್ಲಿ ಗನ್ನು ಹಿಡಿದುಕೊಂಡಿದ್ದ. ಮೊನಿಕಾ ಕೂಗಿಕೊಳ್ಳುತ್ತಿದ್ದಳು. ಅಕ್ಕಪಕ್ಕದವರ ಸಹಾಯದಿಂದ ಆತನ ಕೈಯಿಂದ ಗನ್​​ ಕಿತ್ತುಕೊಂಡ ಪೊಲೀಸರು, ಆತನನ್ನು ಬಂಧಿಸಿದರು ಎಂದು ಡಿಸಿಪಿ ಪರ್ವಿಂದರ್​ ಸಿಂಗ್​ ತಿಳಿಸಿದ್ದಾರೆ.
ಮೊನಿಕಾ ಪೊಲೀಸರಿಗೆ ಸಲ್ಲಿಸಿದ್ದ ದೂರನ್ನು ವಾಪಸ್​ ಪಡೆಯಬೇಕೆಂದು ಆರೋಪಿ ಮೋಹಿತ್​ ಅವಳ ಮೇಲೆ ಗುಂಡು ಹಾರಿಸಿದ್ದ. ಆಕೆಗೆ ಗುಂಡು ತಗುಲದೆ, ಅದೃಷ್ಟವಶಾತ್​ ಬಚಾವಾದಳು ಎನ್ನಲಾಗಿದೆ. ಮೊನಿಕಾಳನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ ಪೊಲೀಸರು, ಮೋಹಿತ್​ನನ್ನು ಬಂಧನದಲ್ಲಿಟ್ಟಿದ್ದಾರೆ. ಆತನ ಮೇಲೆ ಎಫ್​ಐಆರ್​ ದಾಖಲಿಸಿ, ಗನ್​ ಹೇಗೆ ಪಡೆದುಕೊಂಡ ಎಂದು ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್)
ಮಗನ ಅಗಲಿಕೆ ತಾಳಲಾರದೆ, ಅವನ ದಾರಿಯಲ್ಲೇ ನಡೆದ ತಾಯಿ! ಇದು ಮನ ಕಲಕುವ ಘಟನೆ

ಕಾಲಿನ ನರಗಳ ಸೆಳೆತ ಮತ್ತು ಬೊಜ್ಜು ನಿವಾರಕ, ಈ ಆಸನ! ಋತುಚಕ್ರದ ದೋಷವನ್ನೂ ಪರಿಹರಿಸುತ್ತದೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 10 =
Remember me
