ಗಾಜಿಯಾಬಾದ್​​:ತಾಯಿಯೊಂದಿಗೆ ಹಾಲಿನ ವಿಚಾರವಾಗಿ ಜಗಳವಾಡಿದ್ದಕ್ಕೆ ಹೆಂಡತಿಗೆ ಥಳಿಸಿ ತಲಾಖ್​ ನೀಡಿರುವ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್​ನಲ್ಲಿ ನಡೆದಿದೆ. ಸಂತ್ರಸ್ತೆಯ ದೂರಿನ ಮೇರೆಗೆ ಪತಿ, ಅತ್ತೆ ಸೇರಿದಂತೆ ನಾಲ್ವರ ವಿರುದ್ಧ ದೂರು ದಾಖಲಾಗಿದೆ.
ಇದನ್ನೂ ಓದಿ:ಈಶ್ವರಪ್ಪಗೆ ಬಿಜೆಪಿಯಲ್ಲಿ ಉನ್ನತ ಹುದ್ದೆ ಸಿಗಲಿ; ಶ್ರೀ ಕಾಶಿ ಜಗದ್ಗುರುಗಳ ಸಲಹೆ
ಘಟನೆ ಹಿನ್ನೆಲೆ:2018ರಲ್ಲಿ ರಿಹಾನಾ ಭೋಜ್‌ಪುರ ಗ್ರಾಮದ ನಿವಾಸಿ ಅಮೀರ್​ ಎಂಬಾತನನ್ನು ವಿವಾಹವಾಗಿದ್ದಳು. ನಾಲ್ಕೈದು ವರ್ಷಗಳಿಂದ ಸಂಸಾರದಲ್ಲಿ ಯಾವುದೇ ಭಿನ್ನಾಭಿಪ್ರಾಯವಿರಲಿಲ್ಲ. ಆದರೆ ಗುರುವಾರ ಬೆಳಗ್ಗೆ ಅತ್ತೆ ಅನಿಶಾಳಿಂದ ಹಾಲು ಪಡೆಯಲು ರಿಹಾನಾ ತನ್ನ ಮನೆಯಿಂದ ಅತ್ತೆ ಮನೆಗೆ ಹೋಗಿದ್ದಳು. ಈ ವೇಳೆ ಅನಿಶಾ ಹಾಲು ಕೊಡಲು ನಿರಾಕರಿಸಿದಾಗ ಅತ್ತೆ ಮತ್ತು ಸೊಸೆ ನಡುವೆ ಜಗಳವಾಗಿತ್ತು.
ಗುರುವಾರ ಸಂಜೆ ಕೆಲಸ ಮುಗಿಸಿ ಮನೆಗೆ ಮರಳಿದ ಅಮೀರ್‌ಗೆ ಜಗಳದ ವಿಷಯ ತಿಳಿದಿದೆ. ಇದರಿಂದ ಕುಪಿತಗೊಂಡ ಅಮೀರ್ ಮನೆಗೆ ನುಗ್ಗಿ ರಿಹಾನಾಗೆ ಥಳಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದಾನೆ. ಕೊನೆಗೆ ತ್ರಿವಳಿ ತಲಾಖ್ ನೀಡಿ ಆಕೆಯನ್ನು ಅಮೀರ್ ತನ್ನ ಮನೆಯಿಂದ ಹೊರಹಾಕಿದ್ದಾನೆ.
ಈ ಕುರಿತು ರಿಹಾನಾ ತನ್ನ ಪತಿ ಅಮೀರ್, ಅತ್ತೆ ಅನಿಶಾ, ಮಾವ ಇಕ್ರಮ್ ಮತ್ತು ಸೋದರ ಮಾವ ಮನು ವಿರುದ್ಧ ದೂರು ನೀಡಿದ್ದಾಳೆ. ಆರೋಪಿಗಳು ಎಸ್ಕೇಪ್​ ಆಗಿದ್ದು, ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + seven =
Remember me
