ಪಾಟ್ನಾ:ಬಿಹಾರದ ರೋಹ್ತಾಸ್ ಜಿಲ್ಲೆಯಲ್ಲಿ ಪತಿರಾಯನೊಬ್ಬ ಫೋನ್ ಮೂಲಕ ತ್ರಿವಳಿ ತಲಾಖ್ ನೀಡಿದ್ದಾನೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.
ತರನ್ನುಮ್ ಎನ್ನುವ ಮಹಿಳೆಗೆ ಶೊಯಬ್​ ಎನ್ನುವಾತ ತ್ರಿವಳಿ ತಲಾಖ್​ ನೀಡಿದ್ದಾನೆ. ಈ ವಿಷಯದಲ್ಲಿ ನ್ಯಾಯ ಕೋರಿ ಅವರು ರೋಹ್ತಾಸ್‌ನ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮುಸ್ಲಿಂ ಮಹಿಳೆಯರ ವಿವಾಹದ ಹಕ್ಕುಗಳ ರಕ್ಷಣೆ ಕಾಯ್ದೆಯಡಿ ತ್ರಿವಳಿ ತಲಾಖ್ ನೀಡಿದ ಆರೋಪ ಸಾಬೀತಾದರೆ ಆರೋಪಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ‘ನನ್ನ ಪತಿ ರಾಂಚಿಯಲ್ಲಿ ನೆಲೆಸಿದ್ದು ಈಗ ಬೇರೆ ಹುಡುಗಿಯನ್ನು ಮದುವೆಯಾಗಿದ್ದಾರೆ. ಈ ವಿಷಯ ನನಗೆ ತಿಳಿದಿರಲಿಲ್ಲ. ಕೆಲವು ಸಂಬಂಧಿಕರು ಶೋಯಬ್​ ಇದ್ದ ರೋಹ್ತಾಸ್ ಜಿಲ್ಲೆಯ ಡೆಹ್ರಿ ಪಟ್ಟಣದ ನೀಲ್ ಕೋಠಿ ಪ್ರದೇಶಕ್ಕೆ ಭೇಟಿ ನೀಡಿದ್ದರು. ಅವರು ತನ್ನ ಕೃತ್ಯವನ್ನು ಏಕೆ ವಿರೋಧಿಸಿಲ್ಲ ಎಂದು ಕೇಳಿದ ಶೊಯಬ್​ ತನ್ನನ್ನು ತಾನು ಸಮರ್ಥಿಸಿಕೊಂಡಿದ್ದಾರೆ. ನನ್ನ ಪತಿ ಶೋಯಬ್​ನನ್ನು ನಾನು ವಿಚಾರಿಸಿದಾಗ ನನ್ನನ್ನು ನಿಂದಿಸಿ ಮೂರು ಬಾರಿ ತಲಾಖ್ ಹೇಳಿದರು. ಅವರು ನನ್ನನ್ನು ರೋಹ್ತಾಸ್‌ನಲ್ಲಿರುವ ಅವರ ಮನೆಯಿಂದ ಹೊರಹೋಗುವಂತೆ ಹೇಲಿ ಫೋನ್​ ಕಟ್​ ಮಾಡಿದ್ದಾರೆ’ ಎಂದು ತರನ್ನುಮ್ ಮಾಹಿತಿ ನೀಡಿದರು.
‘ನಾನು ಮೇ 30, 2014 ರಂದು ಶೋಯಾಬ್ ಅವರನ್ನು ವಿವಾಹವಾಗಿದ್ದೆ. ಅವರು ನನ್ನನ್ನು ರಾಂಚಿಯ ತಮ್ಮ ಕರೆದೊಯ್ದರು. ಆದರೆ ನನ್ನೊಂದಿಗೆ ಅವರ ವರ್ತನೆ ತೀರಾ ಕೆಟ್ಟದಾಗಿತ್ತು. ಅವರು ಹುಡುಗಿಯರನ್ನು ಮನೆಯೊಳಗೆ ಕರೆದುಕೊಂಡು ಹೋಗಿ ನನಗೆ ಗಂಟೆಗಟ್ಟಲೆ ಇರುವಂತೆ ಒತ್ತಾಯಿಸುತ್ತಿದ್ದರು. ನಾನು 10 ದಿನಗಳ ಕಾಲ ಅಲ್ಲಿಯೇ ಇದ್ದೆ. ಅದಾದ ಮೇಲೆ ಅವರು ರೋಹ್ತಾಸ್‌ಗೆ ಹಿಂತಿರುಗಿದರು. ನಾನು ಶೋಯಬ್‌ನ ತಾಯಿಗೆ ಅವನ ಅನೈತಿಕ ಚಟುವಟಿಕೆಗಳ ಬಗ್ಗೆ ತಿಳಿಸಿದಾಗ, ಅವರಿಗೆ ಅದು ತಿಳಿದಿತ್ತು ಎಂದಿದ್ದಾರೆ. ಆದರೆ ನಾನೇ ಶೋಯಬ್​ನನ್ನು ಸರಿದಾರಿಗೆ ತರಬೇಕು ಎಂದು ನಿರೀಕ್ಷಿಸಿದ್ದರು’ ಎಂದು ತರನ್ನುಮ್ ತಮ್ಮ ದುಃಖವನ್ನು ತೋಡಿಕೊಂಡರು.
‘ಮದುವೆಯ ಆರಂಭಿಕ ಹಂತದಲ್ಲಿ ಶೋಯಬ್ ಹಣಕ್ಕೆ ಕೂಡ ಬೇಡಿಕೆ ಇಟ್ಟಿದ್ದು, ನನ್ನ ತಂದೆ-ತಾಯಿ ಹೇಗೋ ಹಣ ಹೊಂದಿಸಿ ನೀಡಿದ್ದಾರೆ.ದಿನದಿಂದ ದಿನಕ್ಕೆ ಆತನ ಬೇಡಿಕೆ ಹೆಚ್ಚಾದಂತೆ ನನ್ನ ತಂದೆ-ತಾಯಿ ಹಣ ನೀಡಲು ನಿರಾಕರಿಸಿದ್ದಾರೆ. ಈಗ, ನನಗೆ ಐದು ವರ್ಷದ ಮಗಳಿದ್ದಾಳೆ. ನಮ್ಮ ಭವಿಷ್ಯ ಕತ್ತಲೆಯಲ್ಲಿದೆ’ ಎಂದು ತರನ್ನುಮ್ ಮಾಹಿತಿ ನೀಡಿದ್ದಾರೆ.
ರೋಹ್ತಾಸ್‌ನ ಮಹಿಳಾ ಪೊಲೀಸ್ ಠಾಣೆಯ ಎಸ್‌ಎಚ್‌ಒ ಲಕ್ಷ್ಮಿ ಪಟೇಲ್ ‘ನಾವು ಅರ್ಜಿಯನ್ನು ಸ್ವೀಕರಿಸಿದ್ದು ಎಫ್‌ಐಆರ್ ದಾಖಲಿಸಿದ್ದೇವೆ. ಪ್ರಸ್ತುತ ತನಿಖೆ ನಡೆಯುತ್ತಿದೆ. ಜೊತೆಗೆ ಆರೋಪಿಯನ್ನು ಬಂಧಿಸುವ ಪ್ರಯತ್ನಗಳು ಕೂಡ ನಡೆಯುತ್ತಿವೆ’ ಎಂದರು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − one =
Remember me
