ಚೆನ್ನೈ:ಪಾಪಿ ಪತಿರಾಯನೊಬ್ಬ ಪವಿತ್ರ ಮಂಗಳ ಸೂತ್ರದಿಂದಲೇ ಕುತ್ತಿಗೆ ಬಿಗಿದು ಪತ್ನಿಯನ್ನು ಬರ್ಬರ ಹತ್ಯೆ ಮಾಡಿರುವ ಘಟನೆ ಚೆನ್ನೈ ಸಮೀಪದ ಅಂಬಾಥೂರ್​ನಲ್ಲಿ ನಡೆದಿದೆ.
ಕೊಲೆಯಾದ ಮಹಿಳೆಯನ್ನು ಪವಿತ್ರ (28) ಎಂದು ಗುರುತಿಸಲಾಗಿದೆ. ಹತ್ಯೆಗೈದ ಬಳಿಕ ಆಕೆಯ ಗಂಡ ರಾಜ್​ (35) ಪರಾರಿಯಾಗಿದ್ದಾನೆ. ಪವಿತ್ರ ಜವಳಿ ಅಂಗಡಿಯಲ್ಲಿ ಸೇಲ್ಸ್​ ಗರ್ಲ್​ ಆಗಿ ಕೆಲಲ ಮಾಡುತ್ತಿದ್ದಳು. ತನ್ನ ನೆರೆಮನೆಯ ರಾಜ್​ ಜೊತೆ ಆರು ತಿಂಗಳ ಹಿಂದೆ ಮದುವೆ ಆಗಿದ್ದಳು.
ಪವಿತ್ರ ಮತ್ತು ರಾಜ್​ ಇಬ್ಬರಿಗು ಇದು ಎರಡನೇ ಮದುವೆ. ಕಳೆದ ವಾರ ಯಾವುದೋ ಮಾತಿಗೆ ಇಬ್ಬರು ಜಗಳ ಆರಂಭವಾಗಿತ್ತು. ಈ ವೇಳೆ ತಾಳ್ಮೆ ಕಳೆದುಕೊಂಡಿದ್ದ ರಾಜ್​, ಮಂಗಳಸೂತ್ರದಿಂದಲೇ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ.
ಮಗಳು ಗಂಡನೊಂದಿಗೆ ಜಗಳ ಆಡಿದ್ದಾಳೆ ಎಂಬ ಸಂಗತಿಯನ್ನು ತಿಳಿದ ಕೂಡಲೇ ಪವಿತ್ರಳ ತಾಯಿ ಮನೆಗೆ ಹೋಗಿ ನೋಡಿದಾಗ ಮಗಳು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ರಾಜ್​ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.(ಏಜೆನ್ಸೀಸ್​)

ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ: 30 ಮಂದಿಗೆ ಗಂಭೀರ ಗಾಯ, 48 ವಾಹನಗಳು ಜಖಂ

ಬೈಕ್ ಮತ್ತು ಫಾರ್ಚೂನರ್ ಭೀಕರ ಅಪಘಾತ: ಕಾರಿನಲ್ಲಿ ಸಿಕ್ತು ಶಾಸಕರ ಪಾಸ್; ಇದಕ್ಕೂ ಶಾಸಕರಿಗೂ ನಂಟೇನು?

ಹೆಚ್ಚುತ್ತಿರುವ ಮಕ್ಕಳ ಆತ್ಮಹತ್ಯೆ!; ಓದಿನ ಒತ್ತಡ ತಾಳಲಾಗದೆ ನೇಣು ಹಾಕಿಕೊಂಡ ವಿದ್ಯಾರ್ಥಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + eighteen =
Remember me
