ಪಟನಾ:ದೂರದ ಊರಲ್ಲಿ ಕಷ್ಟ ಪಟ್ಟು ದುಡಿದು, ಕುಟುಂಬವನ್ನು ಸಾಕುತ್ತಿದ್ದ ಗಂಡ ಮನೆಗೆ ಬಂದಾಗ ಅಘಾತಕ್ಕೆ ಒಳಗಾದ ಘಟನೆ ಬಿಹಾರದ ನಳಂದ ಜಿಲ್ಲೆಯಲ್ಲಿ ನಡೆದಿದೆ. ಮನೆಯ ಮುಂದಿನ ಬಾಗಿಲಿಂದ ಒಳಗೆ ಬಾರದ ಆತ ಹಿಂದಿನ ಬಾಗಿಲಿಂದ ಒಳಬಂದು ಮಾಡಿದ ಕೆಲಸವನ್ನು ಕೇಳಿದರೆ ನೀವು ಗಾಬರಿಯಾಗುತ್ತೀರ.
ನಳಂದ ಜಿಲ್ಲೆಯ ತಾರ್ತಾರಿ ಪೊಲೀಸ್ ಠಾಣೆ ಪ್ರದೇಶದ ರೂಪನ್‌ಬಿಘಾ ಗ್ರಾಮದ ಸಬ್ಲು ಕುಮಾರ್​ ದೆಹಲಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಹೆಂಡತಿಯನ್ನು ಊರಿನಲ್ಲೇ ಬಿಟ್ಟಿದ್ದ ಆತ ಆಗಾಗ ಬಂದು ಅವಳನ್ನು ನೋಡಿಕೊಂಡು ಹೋಗುತ್ತಿದ್ದನಂತೆ. ಅದೇ ರೀತಿ ಇತ್ತೀಚೆಗೆ ಒಮ್ಮೆ ಮನೆಗೆ ಬಂದಿದ್ದಾನೆ. ಮನೆಯ ಬಾಗಿಲನ್ನು ತಟ್ಟಿದ್ದಾನೆ. ಆದರೆ ಎಷ್ಟೊತ್ತಾದರೂ ಹೆಂಡತಿ ಬಾಗಿಲು ತೆರೆದಿಲ್ಲ. ಇದರಿಂದಾಗಿ ಅನುಮಾನ ಮೂಡಿದ ಆತ ಸೀದಾ ಹಿಂದಿನ ಬಾಗಿಲ ಬಳಿ ಹೋಗಿದ್ದಾನೆ.
ಹಿಂದಿನ ಬಾಗಿಲಿಂದ ಮನೆಯೊಳಗೆ ಬಂದ ಗಂಡನಿಗೆ ತನ್ನ ಹೆಂಡತಿ ಬೇರೊಬ್ಬ ಗಂಡಸಿನೊಂದಿಗೆ ಮಲಗಿರುವುದು ಕಂಡು ಬಂದಿದೆ. ತಕ್ಷಣ ಆಕೆಯ ಮೇಲೆ ರೇಗಾಡಲಾರಂಭಿಸಿದ್ದಾನೆ. ಈ ವಿಚಾರವಾಗಿ ಮೂವರ ನಡುವೆ ವಾದ ವಿವಾದಗಳು ನಡೆದಿವೆ. ಸಿಟ್ಟು ತಾರಕ್ಕೇರಿದ ಕಾರಣ ಸಬ್ಲು ತನ್ನ ಹೆಂಡತಿ ಮತ್ತು ಆಕೆಯೊಂದಿಗಿದ್ದ ವ್ಯಕ್ತಿಯನ್ನು ಚಾಕುವಿನಿಂದ ಚುಚ್ಚಿ ಕೊಂದಿದ್ದಾನೆ. ಸಲ್ಲುವಿನ ಪತ್ನಿಯೊಂದಿಗಿದ್ದ ವ್ಯಕ್ತಿಯನ್ನು ಪೊಲೀಸ್ ಠಾಣೆ ಪ್ರದೇಶದ ಧರ್ಮಪುರ ಗ್ರಾಮದ ನಿವಾಸಿ ನಿಶಾಂತ್ ಕುಮಾರ್ ಎಂದು ಗುರುತಿಸಲಾಗಿದೆ.
ಡಬಲ್​ ಮರ್ಡರ್​ ವಿಚಾರ ಪೊಲೀಸರಿಗೆ ತಿಳಿದುಬಂದಿದ್ದು, ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)
ಸೆಕ್ಸ್​ ಡಾಲ್​ ಮದ್ವೆಯಾಗಿರುವ ಬಾಡಿಬಿಲ್ಡರ್​ನಿಂದ ಮತ್ತೊಂದು ವಿಚಿತ್ರ ನಿರ್ಧಾರ..!​​

ಕರೊನಾ ಲಸಿಕೆ ನಂತರ ಮೃತಪಟ್ಟ ಸ್ವಯಂಸೇವಕಿ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + ten =
Remember me
