ತಿರುವನಂತಪುರ:ಕೊಲೆಗಡುಕರು ಸುಳಿವೇ ಸಿಗದಂತೆ ಹತ್ಯೆ ಮಾಡಲು ನಾನಾ ಅಡ್ಡದಾರಿ ಕಂಡುಕೊಳ್ಳುತ್ತಾರೆ. ಅಂಥವರ ಪೈಕಿ ಇಲ್ಲೊಬ್ಬ ಕೊಲೆ ಮಾಡಿದ್ದು ಸುಲಭದಲ್ಲಿ ಗೊತ್ತಾಗಬಾರದು ಎಂಬ ಅಂದಾಜಿನಲ್ಲಿ ಹೆಂಡತಿಯನ್ನು ಹಾವಿನಿಂದ ಕಚ್ಚಿಸಿ ಸಾಯಿಸಿದ್ದಾನೆ.
ಹೀಗೆ ಅತ್ಯಂತ ವಿಚಿತ್ರ ರೀತಿಯಲ್ಲಿ ಹೆಂಡತಿಯನ್ನು ಕೊಲೆ ಮಾಡಿದ್ದ ವ್ಯಕ್ತಿಯ ಅಪರಾಧ ಕೊನೆಗೂ ಸಾಬೀತಾಗಿದ್ದು, ನ್ಯಾಯಾಲಯ ಬುಧವಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ. ಕೊಲ್ಲಮ್​ನ ಹೆಚ್ಚುವರಿ ಸೆಷನ್ಸ್​ ಕೋರ್ಟ್​ ಈ ತೀರ್ಪನ್ನು ಪ್ರಕಟಿಸಿದೆ. ಈ ಪ್ರಕರಣದಲ್ಲಿ ಸೂರಜ್​ ಎಂಬಾತನೇ ಅಪರಾಧಿಯಾಗಿದ್ದು, ಆತ ಪತ್ನಿ ಉತ್ತರಾಳನ್ನು ಕೊಲೆ ಮಾಡಿದ್ದ.
ಇದನ್ನೂ ಓದಿ:ಮಗನ ಕಣ್ಣೆದುರೇ ಸಿಡಿಲೆರಗಿ ಸ್ಥಳದಲ್ಲೇ ಮೃತಪಟ್ಟ ತಂದೆ: ಮಳೆಯಲ್ಲೇ ಹೋದರೆ ಅಪಾಯ ಎಂದು ಮರದ ಕೆಳಗೆ ನಿಂತಾಗ ಅವಘಡ
2020ರ ಮೇ 7ರಂದು ಈ ಕೊಲೆ ನಡೆದಿದ್ದು. ಕೇರಳದ ಕೊಲ್ಲಮ್​ನ ಅಂಚಲ್​ ಎಂಬಲ್ಲಿನ ಮನೆಯಲ್ಲಿ ಈ ಕೊಲೆ ಮಾಡಲಾಗಿತ್ತು. ಅಷ್ಟಕ್ಕೂ ಆರ್ಥಿಕ ಲಾಭಕ್ಕಾಗಿಯೇ ಮದುವೆಯಾಗಿದ್ದ ಸೂರಜ್​, ಹಾವಿನಿಂದ ಕಚ್ಚಿಸಿ ಸಾಯಿಸಿದರೆ ಇದು ಕೊಲೆ ಎಂಬ ಅನುಮಾನ ಬರುವುದಿಲ್ಲ ಎಂದು ಪತಿ ಹೀಗೆ ಮಾಡಿಸಿದ್ದ.
ಇದನ್ನೂ ಓದಿ:ಇನ್ನೆರಡು ವಾರದಲ್ಲಿ ಮದ್ವೆ ಆಗಬೇಕಿದ್ದವ, 2 ವರ್ಷದ ಮಗು ಸೇರಿ ಮೂವರು ಅಪಘಾತಕ್ಕೆ ಬಲಿ; ವಿವಾಹಕ್ಕೆಂದು ಬಟ್ಟೆ ತರಲು ಹೋಗಿದ್ದಾಗ ಆ್ಯಕ್ಸಿಡೆಂಟ್​
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆಗೆ ಇಳಿದಿದ್ದು, ಅದಾಗಿ 82ನೇ ದಿನಕ್ಕೆ ಪ್ರಕರಣವನ್ನು ಭೇದಿಸಿದ ಪೊಲೀಸರು ಸೂರಜ್​ನನ್ನು ಬಂಧಿಸಿದ್ದರು. ಈ ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯ ಇಂದು ಆರೋಪವನ್ನು ಸಾಬೀತುಪಡಿಸಿಕೊಂಡು ಅಪರಾಧಿ ಎಂದು ಘೋಷಿಸಿದೆ. (ಏಜೆನ್ಸೀಸ್​)
ಮೂತ್ರ ವಿಸರ್ಜನೆಗೆ ಹೋಗಿ ಪ್ರಾಣ ಕಳೆದುಕೊಂಡ ಯುವಕ; ಕ್ಷಣಮಾತ್ರದಲ್ಲಿ ಸ್ಥಳದಲ್ಲೇ ಸಾವು!

‘ಸಮಂತಾಗೆ ಅಫೇರ್ಸ್​ ಇತ್ತು, ಮಕ್ಕಳನ್ನು ಬಯಸಿರಲಿಲ್ಲ, ಗರ್ಭಪಾತ ಆಗಿತ್ತು..’ ಎಂಬೆಲ್ಲ ಆರೋಪಗಳಿಗೆ ಅವರಿಂದಲೇ ಬಂತು ದಿಟ್ಟ ಉತ್ತರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + two =
Remember me
