ಚೆನ್ನೈ:ಎರಡನೇ ಮದುವೆಗೆ ಪ್ಲಾನ್​ ಮಾಡಿದ್ದ ಗಂಡನನ್ನು ಪತ್ನಿಯೊಬ್ಬಳು ಕೊಲೆ ಮಾಡಿರುವ ಘಟನೆ ತಮಿಳುನಾಡಿನ ತೂತುಕುಡಿ ಜಿಲ್ಲೆಯ ಕೋವಿಲ್​​ಪಟ್ಟಿಯಲ್ಲಿ ನಡೆದಿದೆ.
ಪ್ರಭು ಕೊಲೆಯಾದ ದುರ್ದೈವಿ. ಮೊದಲ ಪತ್ನಿ ಜೀವಂತವಾಗಿರುವಾಗಲೇ ಎರಡನೇ ಮದುವೆಗೆ ಮುಂದಾಗಿದ್ದಕ್ಕೆ ಆತನ ಪತ್ನಿ ಉಮಾಮಹೇಶ್ವರಿ ಕೊಲೆ ಮಾಡಿದ್ದಾಳೆನ್ನಲಾಗಿದೆ. ದಂಪತಿ ಕೋವಿಲ್​ಪಟ್ಟಿಯ ಲಾಯಲ್​ ಮಿಲ್​ ಕಾಲನಿಯಲ್ಲಿ ವಾಸವಿದ್ದರು. ದಂಪತಿಗೆ 7 ವರ್ಷದ ಮಗ ಮತ್ತು 4 ವರ್ಷದ ಮಗಳಿದ್ದಳು. ಮೃತ ಪ್ರಭು ಮನೆಯ ಸಮೀಪದಲ್ಲೇ ಇದ್ದ ಖಾಸಗಿ ಮಿಲ್​ನಲ್ಲಿ ಕೆಲಸ ಮಾಡುತ್ತಿದ್ದನು. ಅಲ್ಲದೆ, ಮದ್ಯ ವ್ಯಸನಿಯಾಗಿದ್ದ. ಬೆಳಗಿನ ಅವಧಿಯಲ್ಲೇ ಕಂಠಪೂರ್ತಿ ಕುಡಿದು ಪತ್ನಿಯೊಂದಿಗೆ ಜಗಳವಾಡುತ್ತಿದ್ದ.
ಇದನ್ನೂ ಓದಿರಿ:100, 10, 5 ರೂಪಾಯಿಯ ಹಳೆ ನೋಟುಗಳು ಚಲಾವಣೆ ಆಗಲ್ವಾ? ಆರ್​ಬಿಐ ಹೇಳಿದ್ದೇನು?
ಇದರ ನಡುವೆ ಉಮಾಮಹೇಶ್ವರಿಯ ಆರೋಗ್ಯ ಕಳೆದ ಕೆಲವು ದಿನಗಳಿಂದ ಹದಗೆಡುತ್ತಾ ಬಂದು ಅನಾರೋಗ್ಯಕ್ಕೀಡಾಗಿದ್ದಳು. ಜನವರಿ 22ರ ಶುಕ್ರವಾರ ಮಧ್ಯರಾತ್ರಿ ಕುಡಿದುಬಂದ ಪ್ರಭು, ನಿನ್ನ ಆರೋಗ್ಯ ಸರಿಯಿಲ್ಲ. ಹೀಗಾಗಿ ನಾನು ಎರಡನೇ ಮದುವೆಯಾಗುತ್ತೇನೆಂದು ಪತ್ನಿಯ ಮುಂದೆಯೇ ಹೇಳಿದ್ದ. ಮೊದಲೇ ಗಂಡನ ವರ್ತನೆಯಿಂದ ಬೇಸತ್ತಿದ್ದ ಉಮಾಮಹೇಶ್ವರಿ ಕುಡುಗೋಲಿನಿಂದ ಗಂಡನ ಕುತ್ತಿಗೆಗೆ ಬೀಸಿ ಹತ್ಯೆಗೈದಿದ್ದಾಳೆ.
ತೀವ್ರ ರಕ್ತಸ್ರಾವವಾಗಿ ಒದ್ದಾಡಿ ಪ್ರಭು ಪ್ರಾಣಬಿಟ್ಟಿದ್ದಾನೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಕೋವಿಲ್​ಪಟ್ಟಿ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಭುಗೆ ಮತ್ತೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇತ್ತೆಂದು ತಿಳಿದುಬಂದಿದ್ದು, ಎರಡನೇ ಮದುವೆಯಾಗುವುದಾಗಿ ಹೇಳಿದ್ದಕ್ಕೆ ಪತ್ನಿ ಕೊಲೆ ಮಾಡಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ.(ಏಜೆನ್ಸೀಸ್​)
ಇದನ್ನೂ ಓದಿರಿ:ಕೊನೆಗೂ ಸಾವಿನ ಮನೆಯ ಕದ ತಟ್ಟಿದ ನಟಿ ಜಯಶ್ರೀ! ಕಳೆದ 7 ತಿಂಗಳಲ್ಲಿ ಆಕೆ ಅನುಭವಿಸಿದ್ದ ನರಕಯಾತನೆ ಇಲ್ಲಿದೆ…
ತಂದೆ ಪ್ರಾಂಶುಪಾಲ, ತಾಯಿ ಗಣಿತದಲ್ಲಿ ಗೋಲ್ಡ್​ ಮೆಡಲಿಸ್ಟ್: ಆದ್ರೂ ಹೆತ್ತಮಕ್ಕಳ ಬಲಿ ಹಿಂದಿರುವ 3ನೇ ವ್ಯಕ್ತಿ ಯಾರು?

ಸ್ವಂತ ಹೆಣ್ಣುಮಕ್ಕಳನ್ನು ಬೆತ್ತಲೆಗೊಳಿಸಿ ಪೂಜೆ ಮಾಡಿದ್ರು, ಬಳಿಕ ತಲೆ ಒಡೆದು ಕೊಂದೇಬಿಟ್ರು! ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಿ

ಬಿಗ್​ಬಾಸ್ ಖ್ಯಾತಿಯ ನಟಿ ಜಯಶ್ರೀ ಆತ್ಮಹತ್ಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
