ಆಗ್ರಾ:ವ್ಯಕ್ತಿಯೊರ್ವನ ಹನಿಮೂನ್​ ರಾತ್ರಿ ದುಃಸ್ವಪ್ನವಾಗಿ ಮಾರ್ಪಟ್ಟಿದ್ದು, ತಾನು ಮದುವೆಯಾದಳು ಹುಡುಗಿ ಅಲ್ಲ ಬದಲಾಗಿ ತೃತೀಯಲಿಂಗಿ ಎಂದು ತಿಳಿದು ಬಂದಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಆಗ್ರಾ ಬಳಿ ನಡೆದಿದೆ.
ಇದನ್ನೂ ಓದಿ:‘ನನ್ನಪ್ಪ ಒಬ್ಬ ಬೆಪ್ಪ.. ನಾನೂ ಬೆಪ್ಪ..’: ಆತ್ಮಾವಲೋಕನ ರೀತಿಯಲ್ಲಿ ಹ್ಯಾಪಿ ಫಾದರ್ಸ್ ಡೇ ವಿಷ್ ಮಾಡಿದ ನಟಏಳು ವರ್ಷಗಳ ಹಿಂದೆ 2016ರಲ್ಲಿ ದಾಖಲಾದ ಈ ವಿಚಿತ್ರ ಕೇಸ್​ಗೆ ಆಗ್ರಾದ ಸ್ಥಳೀಯ ಕೌಟುಂಬಿಕ ನ್ಯಾಯಾಲಯವುಮ, ಈ ಮದುವೆ ಅನೂರ್ಜಿತವಾದದ್ದು ಎಂದು ಪರಿಗಣಿಸಿ ವಿಚ್ಛೇದನದ ಆದೇಶವನ್ನು ನೀಡಿದೆ.ಪ್ರಕರಣದ ವಿವರ:2016ರಲ್ಲಿ ಪ್ರಕಾಶಪುರದ ಯುವಕನೊಬ್ಬ, ಫಿರೋಜಾಬಾದ್​ನ ಯುವತಿಯನ್ನು ಗುರು-ಹಿರಿಯರ ಸಮ್ಮುಖದಲ್ಲಿ ವಿವಾಹವಾಗಿದ್ದ. ಮದುವೆಯಾದ ಮರುದಿನವೇ ಮೊದಲ ರಾತ್ರಿಯಲ್ಲಿ ಪತ್ನಿಯೊಂದಿಗೆ ಏಕಾಂತವಾಗಿದ್ದಾಗ ತನ್ನ ಹೆಂಡತಿಗೆ ಮಹಿಳೆಯರಿಗೆ ಇರಬೇಕಾದ ದೈಹಿಕ ಲಕ್ಷಣಗಳಿಲ್ಲ ಎಂಬುದನ್ನು ಕಂಡು ಶಾಕ್​ಗೆ ಒಳಗಾಗಿದ್ದ.ಆದರೆ. ಮದುವೆಯಾದ ಕೆಲ ದಿನಗಳ ಕಾಲ ಪತ್ನಿ ಆತನ ಮನೆಯಲ್ಲಿಯೇ ಇದ್ದಳು. ಇದಾದ ನಂತರ ಆಕೆ ಅಲ್ಲಿಂದ ಹೊರಟು ತನ್ನ ತಾಯಿಯ ಮನೆಗೆ ಹೋಗಿದ್ದಳು. ತನಗೂ ತನ್ನ ಹೆಂಡತಿಗೂ ಸಮಾಜದಿಂದ ಅಪಹಾಸ್ಯವಾಗುತ್ತದೆ ಎಂಬ ಕಾರಣಕ್ಕೆ ಎಲ್ಲವನ್ನು ಮುಚ್ಚಿಟ್ಟ ಬಳಿಕ ಯುವಕ ಪತ್ನಿಗೆ ಹಲವಾರು ವೈದ್ಯರ ಬಳಿ ಚಿಕಿತ್ಸೆಯನ್ನೂ ಕೊಡಿಸಿದ್ದ.ಇದನ್ನೂ ಓದಿ:ಸಾರ್ವಜನಿಕರನ್ನು ದರೋಡೆ ಮಾಡಲು ಹೊಂಚು ಹಾಕಿ ಕುಳಿತಿದ್ದ ಐವರು ಅರೆಸ್ಟ್​​ದುರದೃಷ್ಟವಶಾತ್ ಎಲ್ಲಾ ಪ್ರಯತ್ನಗಳು ನಿಷ್ಟ್ರಯೋಜಕವೆಂದು ಸಾಬೀತಾದ ಮೇಲೆ ಯುವಕ ಸುಮ್ಮನಾಗಿದ್ದ. ಕೊನೆಗೆ ಯುವಕ ತನಗೆ ವಂಚನೆಯಾಗಿದ್ದು ಕೆಲ ವರ್ಷಗಳ ಕಾಲ ತಾನು ಹೆದರಿ ಈ ವಿಚಾರವನ್ನು ಎಲ್ಲಿಯೂ ಹೇಳಿಲ್ಲ ಎಂದು ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ. ಈ ಕುರಿತು ವಿಚಾರಣೆಯನ್ನು ನಡೆಸಿದ ನ್ಯಾಯಾಲಯವು ಪತ್ನಿಯ ವೈದ್ಯಕೀಯ ವರದಿ ಮತ್ತು ಸಮಾಲೋಚನೆ ದಾಖಲೆ ಹಾಗೂ ಎಲ್ಲಾ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ವಿಚ್ಛೇದನಕ್ಕೆ ಆದೇಶವನ್ನು ನೀಡಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 15 =
Remember me
